"ತಂದೆ ಮಗಳಿಗಾಗಿ ಏನೆಲ್ಲ ತ್ಯಾಗ ಮಾಡ್ಬಹುದು ಅಂದ್ರೆ, ಸ್ಕ್ರಿಪ್ಟ್‌ನಲ್ಲೂ ಅರ್ಧ ಕೊಡ್ಬಹುದು"; ದುನಿಯಾ ವಿಜಯ್

ದುನಿಯಾ ವಿಜಯ್ ಹೊಸ ಸಿನಿಮಾ ಸೆಟ್ಟೇರಿದೆ. 'ಕಾಟೇರ' ಸಿನಿಮಾದ ಕಥೆಗಾರ ಜಡೇಶ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆ ಪುತ್ರಿ ರಿತಾನ್ಯಾ ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅಪ್ಪನ ಜೊತೆ ನಟಿಸುವ ಅದೃಷ್ಟ ದುನಿಯಾ ವಿಜಯ್ ಮಗಳಿಗೆ ಸಿಕ್ಕಿದೆ.

ವಿಜಯ್ ಪುತ್ರಿ ರಿತಾನ್ಯಾ (ಮೋನಿಕಾ) ಸಿನಿಮಾದಲ್ಲಿ ನಟಿಸಬೇಕು ಅನ್ನೋ ಗುರಿ ಇಟ್ಟುಕೊಂಡಿದ್ದರು. ಅದಕ್ಕಾಗಿ ಸಾಕಷ್ಟು ತರಬೇತಿ ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂಬೈನ ಅನುಪಮ್ ಖೇರ್ ಸ್ಟುಡಿಯೋದಲ್ಲಿ ರಿತಾನ್ಯಾ ನಟನೆಗೆ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲೂ ಅಗತ್ಯ ತರಬೇತಿ ಪಡೆದ ಬಳಿಕ ರಿತಾನ್ಯಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

Duniya Vijay emotional talk about his daughter Rithanya aka Monica in new movie launch

ಮೊದಲ ಸಿನಿಮಾದಲ್ಲಿ ನಟಿಸುತ್ತಿರುವ ರಿತಾನ್ಯಾ ವಿಜಯ್ ಕುಮಾರ್ "ಅಪ್ಪನೇ ದೊಡ್ಡ ಶಕ್ತಿ" ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಂದೆ ಮಗಳಿಗಾಗಿ ಏನೆಲ್ಲ ತ್ಯಾಗ ಮಾಡಬಹುದು ಅನ್ನೋದನ್ನು ದುನಿಯಾ ವಿಜಯ್ ಹೇಳಿದ್ದಾರೆ. ತನಗಾಗಿ ಮಾಡಿದ ಸ್ಕ್ರಿಪ್ಟ್‌ನಲ್ಲೂ ಅರ್ಥ ಮಗಳಿಗಾಗಿ ಕೊಟ್ಟಿರುವ ಬಗ್ಗೆ ಪ್ರಸ್ತಾಪ ಮಾಡಿ ಭಾವುಕರಾಗಿದ್ದಾರೆ.

ದುನಿಯಾ ವಿಜಯ್ ಡಬಲ್ ಖುಷಿಯಲ್ಲಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳನ್ನು ಪೂರೈಸಿದ್ದಾರೆ. ಇನ್ನೊಂದು ಕಡೆ ಪುತ್ರಿ ರಿತಾನ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. "ಈ ದಿನ ವಿಶೇಷವಾದ ದಿನ. ನಾನು ಇವತ್ತು ಈ ಸ್ಥಾನಕ್ಕೆ ಬರೋದಕ್ಕೆ ಇವತ್ತಿಗೆ 30 ವರ್ಷ. ನನ್ನ ಮಗಳಿಗೆ ಅದೇ ಹೇಳುತ್ತಿದ್ದೆ. ಹೀರೋ ಆಗಿ 18 ವರ್ಷ. ಅದಕ್ಕೂ ಮುಂಚೆ ಹೀರೋ ಆಗುವುದಕ್ಕೆ ಸರ್ಕಸ್ ಹೊಡೆದಿದ್ದು 10 - 12 ವರ್ಷ. ಇಲ್ಲಿವರೆಗೂ ಬರೋಕೆ ಮೆಟ್ಟಲಾಗಿದ್ದೇ ಪ್ರತಿ ದಿನ ನನಗಾಗುತ್ತಿರೋ ಅವಮಾನ ಹಾಗೂ ನೋವುಗಳು. ಅದನ್ನು ಸುಲಭವಾಗಿ ಹತ್ತಿಸಿಕೊಂಡು ಬಂದು ನಿನಗೆ ಕೊಡುತ್ತಿದ್ದೇನೆ. ಅದನ್ನು ಹುಷಾರಾಗಿ ಕಾಪಾಡಿಕೊಂಡು ಹೋಗು ಅಂತ ಹೇಳಿದ್ದೇನೆ." ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಈ ವಿಶೇಷ ಸಂದರ್ಭದಂದು ಮಗಳಿಗಾಗಿ ತಂದೆ ಏನೆಲ್ಲ ತ್ಯಾಗ ಮಾಡಬಹುದು ಅನ್ನೋದನ್ನು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. "ತಂದೆ ಏನೆಲ್ಲ ಕೊಡಬಹುದು ಅಂದ್ರೆ, ನನಗಾಗಿ ಮಾಡಿರುವ ಸ್ಕ್ರಿಪ್ಟ್‌ನಲ್ಲೂ ಅರ್ಧ ಕೊಡಬಹುದು. ನಾನೇ ಹೀರೋ ಆಗಿ ಮಾಡಿಕೊಳ್ಳಬಹುದಿತ್ತು. ಜಡೇಶ್ ನನಗೆ ನಾನೇ ಹೀರೋ ಆಗಬೇಕು ಅಂತ ಹೇಳಬಹುದಿತ್ತು. ತಂದೆ ಇದನ್ನೂ ತ್ಯಾಗ ಮಾಡಬಹುದು ಎಂದು ಮಗಳಿಗೆ ಹೇಳಲು ಇಷ್ಟ ಪಡುತ್ತೇನೆ. " ಎಂದು ಹೇಳಿಕೊಂಡಿದ್ದಾರೆ.

Duniya Vijay emotional talk about his daughter Rithanya aka Monica in new movie launch

ಇದೇ ವೇಳೆ ದುನಿಯಾ ವಿಜಯ್ ಪುತ್ರ ರಿತಾನ್ಯಾಗೆ (ಮೋನಿಕಾ) ಮೂವರು ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುತ್ತಾರೆ. ಅವರು ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ ಎಂದು ಸಲಹೆ ನೀಡಿದ್ದಾರೆ. "ಇವತ್ತಿಂದ ನೀನು ರಿತಾನ್ಯಾ. ಮೂರು ಜನ ನಿನ್ನನ್ನು ನೋಡುತ್ತಾರೆ ತಾಯಿ ತಂದೆಯಾಗಿ.. ಒಂದು ಯಾವಾಗಲೂ ನಿನ್ನನ್ನು ನೋಡುವ ಮಾಧ್ಯಮ. ಅವರು ಯಾವತ್ತೂ ನಮಗೆ ಕೆಟ್ಟದು ಮಾಡಿಲ್ಲ. ಮಾಡುವುದೂ ಇಲ್ಲ. ನಿನ್ನಲ್ಲಿ ಕಣ್ಣಿಟ್ಟು ತಿದ್ದುವುದಕ್ಕೆ ನೋಡುತ್ತಿರುತ್ತೆ. ಇನ್ನೊಬ್ಬರು ನಮ್ಮನ್ನು ಪ್ರೋತ್ಸಾಹಿಸಿ ಊಟ ಕೊಡುವ ಅಭಿಮಾನಿಗಳು. ಇನ್ನೊಬ್ಬರು ದೇವರು ನೋಡುತ್ತಿರುತ್ತಾರೆ. ಮೂವರೂ ಒಂದೇ ತಪ್ಪು ಮಾಡಿದರೆ, ಕ್ಷಮಿಸುವುದೇ ಇಲ್ಲ." ಎಂದಿದ್ದಾರೆ.

ದುನಿಯಾ ವಿಜಯ್ ಮೊದಲ ಪುತ್ರಿ ಮೋನಿಯಾ ಚೊಚ್ಚಲ ಸಿನಿಮಾದಿಂದ ರಿತಾನ್ಯಾಳಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ತಂದೆಯಾಗಿ "ತುಂಬಾ ಚೆನ್ನಾಗಿರು.. ಸುಖವಾಗಿರು.. ದೇವರು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಲಿ. ಇನ್ನೂ ತುಂಬಾನೇ ಕಲಿಯೋದಿದೆ. " ಎಂದು ಮಗಳಿಗೆ ದುನಿಯಾ ವಿಜಯ್ ಹರಸಿದ್ದಾರೆ.

More from Filmibeat

English summary
Duniya Vijay about his daughter Rithanya aka Monica:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X