Bheema Box office Day 9:9ನೇ ದಿನ ಈ ವರ್ಷದ ಮೊದಲ ಹಿಟ್ ಕೊಟ್ಟ 'ಭೀಮ'ನ ಕಲೆಕ್ಷನ್ ಎಷ್ಟು?

ಸೊರಗಿ ಬೆಂಡಾಗಿ ಹೋಗಿದ್ದ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಲವಲವಿಕೆ ಕಾಣಿಸುತ್ತಿದೆ. ಕಳೆದ 8 ತಿಂಗಳಿಂದ ಒಂದೇ ಒಂದು ಹಿಟ್ ಸಿನಿಮಾ ನೋಡಿದ ಸಿನಿಮಾ ಮಂದಿಗೆ ಮತ್ತೆ ಆಶಾಭಾವನೆ ಮೂಡಿದೆ. ಥಿಯೇಟರ್ ಇದೆ ಅನ್ನೋದನ್ನೇ ಮರೆತ್ತಿದ್ದ ಜನರನ್ನು ಕನ್ನಡದ ಎರಡು ಸಿನಿಮಾಗಳು ಥಿಯೇಟರ್‌ಗೆ ಕರೆದುಕೊಂಡು ಬರುತ್ತಿವೆ. ಅದರಲ್ಲೂ ದುನಿಯಾ ವಿಜಯ್ 'ಭೀಮ' ಮೊದಲ ಸ್ಥಾನದಲ್ಲಿದೆ.

ರಿಲೀಸ್‌ಗೂ ಮುನ್ನ 'ಭೀಮ' ಮೇಲೆ ನಿರೀಕ್ಷೆಯೇನು ಇರಲಿಲ್ಲ. ಬಿಡುಗಡೆಯಾದಾಗಲೂ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಿದ್ದರೂ, ಪ್ರೇಕ್ಷಕರು 'ಭೀಮ'ನನ್ನು ಕೈ ಬಿಡಲಿಲ್ಲ. ಕಳೆದ 9 ದಿನಗಳಿಂದ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದ್ದಾನೆ. ಅದರಲ್ಲೂ ಎರಡನೇ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ.

Duniya Vijay film Bheema Box office collection Day 9 report

ನಿನ್ನೆ ಶನಿವಾರ (ಆಗಸ್ಟ್ 17) 'ಭೀಮ' ಸಿನಿಮಾಗೆ ಮತ್ತೊಂದು ವೀಕೆಂಡ್ ಸಿಕ್ಕಿದೆ. ಈ ಎರಡು ದಿನಗಳಲ್ಲಿ 'ಭೀಮ' ನಿರ್ಮಾಪಕ ಜೇಬು ತುಂಬ ಬಹುದು ಎಂದು ಅಂದಾಜು ಮಾಡಲಾಗಿದೆ. 9ನೇ ದಿನ ಅಂದರೆ, ನಿನ್ನೆ (ಆಗಸ್ಟ್ 17) ಸಿನಿಮಾದ ಕಲೆಕ್ಷನ್ ಇಳಿಕೆ ಆಗಿಲ್ಲ. ಹಾಗಿದ್ದರೆ, 9 ದಿನಗಳಲ್ಲಿ 'ಭೀಮ' 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತೇ? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನಿದೆ? ತಿಳಿಯಲು ಮುಂದೆ ಓದಿ.

'ಭೀಮ'ನಿಗೆ ಸೆಲೆಬ್ರೆಟಿಗಳ ಮೆಚ್ಚುಗೆ

ದುನಿಯಾ ವಿಜಯ್ ನಿರ್ದೇಶಿಸಿದ ನಟಿಸಿರುವ 'ಭೀಮ' ಸಿನಿಮಾದ ದೃಶ್ಯಗಳು ಹಸಿ ಬಿಸಿಯಾಗಿವೆ. ಇದ್ದಿದ್ದನ್ನು ಇದ್ದಂತೆಯೇ ತೋರಿಸಲಾಗಿದೆ ಅನ್ನೋ ಮಾತು ಸಿನಿಮಾ ನೋಡಿದವರಿಂದ ವ್ಯಕ್ತವಾಗಿದೆ. ಹಾಗೇ ಈ ಸಿನಿಮಾ ಬಗ್ಗೆ ಸೆಲೆಬ್ರೆಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಮೆಚ್ಚುಗೆ ಸೂಚಿಸಿದ್ದರು. ಹಾಗೇ ಸಿಎಂ ಸಿದ್ಧರಾಮಯ್ಯ ಕೂಡ ಸಮಾಜದ ದೃಷ್ಠಿಯಿಂದ ಇದು ಒಳ್ಳೆಯ ಸಿನಿಮಾ ಎಂದು ಹೇಳಿದ್ದಾರೆ. ಹೀಗಾಗಿ 'ಭೀಮ'ನಿಗೆ ಬಲ ಬಂದಂತೆ ಆಗಿದೆ.

Duniya Vijay film Bheema Box office collection Day 9 report

'ಭೀಮ' 9ನೇ ದಿನ ಕಲೆಕ್ಷನ್ ಎಷ್ಟು?

'ಭೀಮ' ಸಿನಿಮಾದ ರಿಲೀಸ್ ಬಗ್ಗೆ ಸಿನಿಮಾ ಮಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಸಿನಿಮಾ ರಿಲೀಸ್ ಮಾಡಿದ್ದು, ಗೆಲುವಿಗೆ ಕಾರಣ ಎನ್ನುತ್ತಿದ್ದಾರೆ. ಎರಡನೇ ವಾರಕ್ಕೆ ಕೆಲವು ಸಿನಿಮಾಗಳು ಸೈಲೆಂಟ್ ಆಗಿಬಿಡುತ್ತವೆ. ಆದರೆ 'ಭೀಮ'ಗೆ ಎರಡನೇ ವಾರ ಬ್ಯಾಕ್ ಟು ಬ್ಯಾಕ್ ರಜೆಗಳ ಅಡ್ವಾಂಟೇಜ್ ಸಿಕ್ಕಿದೆ. ಈ ಕಾರಣಕ್ಕೆ 9ನೇ ದಿನವೂ 'ಭೀಮ' ಬಾಕ್ಸಾಫೀಸ್‌ನಲ್ಲಿ ತನ್ನ ದರ್ಬಾರ್ ಮುಂದುವರೆಸಿದೆ. 9ನೇ ದಿನ 1 ಕೋಟಿಯಿಂದ 1.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಿಂದ ಬಂದಿರೋ ಮಾಹಿತಿ.

20 ಕೋಟಿ ರೂ. ಕ್ಲಬ್ ಸೇರಿತೇ?

ದುನಿಯಾ ವಿಜಯ್ ಸಿನಿಮಾ 8ನೇ ದಿನ 1 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ, 9ನೇ ದಿನ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಮೊದಲ ಮೂರು ದಿನ 12.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ನಾಲ್ಕನೇ ದಿನದಿಂದ ಎಂಟನೇ ದಿನದವರೆಗೆ 6.18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 9ನೇ ದಿನ 1.25 ಕೋಟಿ ರೂಪಾಯಿ ಆಗಿದೆ. ಒಟ್ಟು 19.73 ಕೋಟಿ ರೂಪಾಯಿ ಇದೂವರೆಗೂ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಆದರೆ, 'ಭೀಮ' ತಂಡ ಇನ್ನೂ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

ಭಾನುವಾರ ಕಲೆಕ್ಷನ್ ಮೇಲೆ ಕಣ್ಣು

'ಭೀಮ' ಇಂದು ಅಂದರೆ ಭಾನುವಾರ (ಆಗಸ್ಟ್ 18) ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದರ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. 'ಭೀಮ' ಭಾನುವಾರ 1.5 ಕೋಟಿಯಿಂದ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, 20 ಕೋಟಿ ರೂಪಾಯಿ ಮೇಲೆ ಕಲೆಕ್ಷನ್ ಮಾಡಿದಂತೆ ಆಗುತ್ತೆ. ಅಲ್ಲದೆ ಲೈಫ್‌ ಟೈಮ್ ಕಲೆಕ್ಷನ್ 25 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ. ಏನಕ್ಕೂ ದುನಿಯಾ ವಿಜಯ್ ಅಂಡ್ ಟೀಮ್ ಬಾಕ್ಸಾಫೀಸ್ ಲೆಕ್ಕಾಚಾರವನ್ನು ಶೀಘ್ರದಲ್ಲೇ ರಿವೀಲ್ ಮಾಡಬಹುದು.

More from Filmibeat

English summary
Duniya Vijay Bheema Box office Collection Day 9:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X