ಹೊಸ ಬದುಕು ಕಟ್ಟಿಕೊಳ್ಳಲು ಆರೋಪಿಗೆ ದುನಿಯಾ ವಿಜಯ್ ನೆರವು; ಜೈಲಿಂದ ಹೊರಬರುತ್ತಿದ್ದಂತೆ ಡಬಲ್ ಮರ್ಡರ್

ಸ್ಯಾಂಡಲ್‌ವುಡ್‌ನ ಬ್ಯಾಕ್‌ ಕೋಬ್ರಾ ದುನಿಯಾ ವಿಜಯ್ ಆಗಾಗ ಅಸಹಾಯಕರಿಗೆ ನೆರವು ನೀಡುತ್ತಲೇ ಇರುತ್ತಾರೆ. ಹೊಸ ಬದುಕು ಕಟ್ಟಿಯೊಳ್ಳುವುದಕ್ಕೆ ತಮ್ಮಿಂದ ಆಗುವ ಸಹಾಯವನ್ನು ಮಾಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಶಿಕ್ಷೆ ಅನುಭವಿಸಿ, ಹಣವಿಲ್ಲದೆ ಪರದಾಡುತ್ತಿದ್ದವರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸ ಮಾಡುತ್ತಿರುವ ವಿಜಯ್ ಹೆಸರನ್ನು ಹಾಳು ಮಾಡುವ ಕೆಲಸ ಆರೋಪಿಯೊಬ್ಬನಿಂದ ನಡೆಯುತ್ತಿದೆ.

10 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಆರೋಪಿಯೊಬ್ಬನನ್ನು ಇತ್ತೀಚೆಗೆ ದುನಿಯಾ ವಿಜಯ್ ನೆರವಾಗಿದ್ದರು. ಹೌದು, ಜೈಲಿನಿಂದ ಹೊರಬರಲು ಆರೋಪಿಯೊಬ್ಬನಿಗೆ ಹಣ ಕಟ್ಟಬೇಕಾಗಿತ್ತು. ಈ ವೇಳೆ ದುನಿಯಾ ವಿಜಯ್ ಶ್ಯೂರಿಟಿ ಹಾಗೂ ಆರ್ಥಿಕ ನೆರವು ಆತನಿಗೆ ನೆರವಾಗಿದ್ದರು. ಆತನೇ ಈಗ ದುನಿಯಾ ವಿಜಯ್ ಹೆಸರಿಗೆ ಕಪ್ಪು ಮಸಿ ಬಳಿದಿದ್ದಾನೆ.

Duniya Vijay helped the accused come out of jail and lead new life now arrested for double murder

ದುನಿಯಾ ವಿಜಯ್ ನೆರವಿನಿಂದ ಬಿಡುಗಡೆಯಾಗಿ ಜೈಲಿನಿಂದ ಹೊರ ಬಂದಿದ್ದ ಆರೋಪಿಯೀಗ ಡಬಲ್ ಮರ್ಡರ್ ಮಾಡಿ ಮತ್ತೆ ಅಂದರ್ ಆಗಿದ್ದಾನೆ. ದುನಿಯಾ ವಿಜಯ್ ಸಹಾಯಕ್ಕೆ ಮಣ್ಣು ಹಾಕಿದ್ದಾನೆ. ಅಷ್ಟಕ್ಕೂ ಏನಿದೆ ಡಬಲ್ ಮರ್ಡರ್ ಕಥೆ? ದುನಿಯಾ ವಿಜಯ್ ಹೆಸರಿಗೆ ಕಳಂಕ ತಂದ ಆ ವ್ಯಕ್ತಿ ಯಾರು? ಏನಿದು ಡಬಲ್ ಮರ್ಡರ್ ಕೇಸ್? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದುನಿಯಾ ವಿಜಯ್ ಜೈಲಿನಲ್ಲಿ ಮಾಡಿದ ಶಿಕ್ಷೆ ಅನುಭವಿಸಿ, ಬಿಡುಗಡೆಯಾಗಲು ಸಾಧ್ಯವಾಗದೇ ಇರುವವರಿಗೆ ನೆರವು ನೀಡುತ್ತಾರೆ. ಅವರಿಗೆ ಶ್ಯೂರಿಟಿ ಹಾಗೂ ಆರ್ಥಿಕ ನೆರವು ನೀಡ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಕಾರಣಕರ್ತರಾಗಿದ್ದರು. ಈಗಾಗಲೇ ದುನಿಯಾ ವಿಜಯ್ ಇಂತಹ ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಅಂತಹದ್ದೊಂದು ಸಹಾಯ ಪಡೆದಿದ್ದ ವ್ಯಕ್ತಿಯೇ ಡಬಲ್ ಮರ್ಡರ್ ಮಾಡಿ ಮತ್ತೆ ಜೈಲು ಸೇರಿದ್ದಾನೆ.

Duniya Vijay helped the accused come out of jail and lead new life now arrested for double murder

ಬೆಂಗಳೂರಿನ ಸಿಂಗಸಂದ್ರದ ಸಮೀಪ ಎಸ್ ಆರ್ ಎಸ್ ಟ್ರಾವೆಲ್ಸ್‌ನ ವರ್ಕ್ ಶಾಪ್‌ನಲ್ಲಿ ಡಬಲ್ ಮರ್ಡರ್ ನಡೆದಿತ್ತು. ಈ ಕೊಲೆ ಪ್ರಕರಣವನ್ನು ಭೇದಿಸಿದ್ದ ಬಾಗಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ನಾಗೇಶ್ ಹಾಗೂ 50 ವರ್ಷದ ಮಂಡ್ಯ ಮೂಲದ ಮಂಜುನಾಥ್ ಎಂಬುವವರನ್ನು ಸುರೇಶ್ ಎಂಬಾತ ಕೊಲೆ ಮಾಡಿದ್ದ. ಈ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಎಸ್‌ಆರ್‌ಎಸ್ ಟ್ರಾವೆಲ್ಸ್‌ನ ವರ್ಕ್ ಶಾಪ್‌ನಲ್ಲಿ ಈ ಮೂವರು ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲೇ ಶೆಡ್‌ನಲ್ಲಿ ಮೂವರು ಉಳಿದುಕೊಂಡಿದ್ದರು. ನಾಗೇಶ್ ಹಾಗೂ ಮಂಜುನಾಥ್ ಇಬ್ಬರೂ ಆಗಾಗ ಸುರೇಶನನ್ನು ಹೀಯಾಳಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮೂವರೂ ಒಟ್ಟಿಗೆ ಕೂತು ಮಧ್ಯಪಾನ ಮಾಡಿದ್ದಾರೆ. ಈ ವೇಳೆ ಮತ್ತೆ ಸುರೇಶನ ಎದುರು ಕಳ್ಳ ಎಂದೆಲ್ಲ ಹೀಯಾಳಿಸಿದ್ದರು. ಆಗ ರಾಡ್‌ನಿಂದ ಹೊಡೆದು ಕೊಲೆ ಮಾಡಿ, ಪರಾರಿಯಾಗಿದ್ದ. ಪೊಲೀಸರು ಆತನನ್ನು ಹುಡುಗಿ ಬಂಧಿಸಿದ್ದಾರೆ.

ದುನಿಯಾ ವಿಜಯ್ ಜೈಲಿನಿಂದ ಬಿಡಿಸಿದ ಬಳಿಕ ಆರೋಪಿಗಳಿಗೆ ಮತ್ತೆ ತಪ್ಪು ಮಾಡಬೇಡಿ ಎಂದು ಬುದ್ದಿ ಮಾತುಗಳನ್ನು ಹೇಳಿದ್ದರು. ನಿಮ್ಮ ಮುಂದಿನ ಜೀವನ ಒಳ್ಳೆಯದಾಗಿ ಸಾಗಲಿ ಎಂದು ಹೇಳಿದ್ದರು. ಸುರೇಶ ಕೂಡ ಜೈಲಿನಿಂದ ಹೊರ ಬಂದ ಬಳಿಕ ಮಾರ್ಕೆಟ್‌ನಲ್ಲಿ ಕೊತ್ತಂಬರಿ ಸೊಪ್ಪು ಮಾರಿಕೊಂಡು ಇದ್ದ. ಆದರೆ ಸಂಬಂಧಿಕರ ಸಹಾಯದಿಂದ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲಿ ಗಲಾಟೆ ಮಾಡಿಕೊಂಡು ಮತ್ತೆ ಜೈಲು ಸೇರಿದ್ದಾನೆ.

More from Filmibeat

English summary
Duniya Vijay helped the accused come out of jail and lead new life now arrested for double murder.
Read more about: duniya vijay actor filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X