Bheema Box Office Day 10: 10ನೇ ದಿನ 'ಭೀಮ' ಭರ್ಜರಿ ಕಲೆಕ್ಷನ್; ದಾಟಿತೇ ₹20 ಕೋಟಿ?
ದುನಿಯಾ ವಿಜಯ್ ನಿರ್ದೇಶನದ 'ಭೀಮ' ಸಿನಿಮಾಗೆ ಎರಡನೇ ವೀಕೆಂಡ್ ಲಾಭದಾಯಕ ಅಂತ ಸಾಬೀತಾಗಿದೆ. 'ಭೀಮ' ಈ ವರ್ಷದ ಮೊದಲ ಕನ್ನಡದ ಹಿಟ್ ಸಿನಿಮಾ. ಈ ಕಾರಣಕ್ಕೆ ದುನಿಯಾ ವಿಜಯ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಲ್ಲಿವರೆಗೂ ಜಾದು ಮಾಡಬಹುದು ಅನ್ನೋ ಕುತೂಹಲ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಇದೆ.
ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದಾಗ ಹಾಕಿದ್ದ ಲೆಕ್ಕಾಚಾರವೇ ಬೇರೆ. ಆದರೆ, 'ಭೀಮ' ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. 10 ದಿನಗಳಲ್ಲಿ ದುನಿಯಾ ವಿಜಯ್ ನಿರ್ದೇಶನದ ಈ ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಸೈಲೆಂಟ್ ಆಗಿದ್ದ ಸ್ಯಾಂಡಲ್‌ವುಡ್ ಹೊಸ ಹುರುಷು ಕೊಟ್ಟಿದೆ.

ಇನ್ನೊಂದು 'ಭೀಮ' ಸಿನಿಮಾವನ್ನು ಪ್ರೇಕ್ಷಕರಷ್ಟೇ ಅಲ್ಲ. ಸೆಲೆಬ್ರೆಟಿಗಳು ಕೂಡ ಹೊಗಳುತ್ತಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಿರುವ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಬಿ ಹಾಗೂ ಸಿ ಸೆಂಟರ್‌ಗಳಲ್ಲಿ 'ಭೀಮ' ಕಲೆಕ್ಷನ್ ಭರ್ಜರಿಯಾಗಿದೆ. 10ನೇ ದಿನ ಅಂದರೆ, ನಿನ್ನೆ (ಆಗಸ್ಟ್ 18) ಕೂಡ ಕಲೆಕ್ಷನ್ ಸಖತ್ ಆಗಿದೆ.
ವೀಕೆಂಡ್‌ನಲ್ಲಿ 'ಭೀಮ'ನಿಗೆ ಬಂಪರ್
ದುನಿಯಾ ವಿಜಯ್ ನಿರ್ದೇಶಿಸಿದ ಎರಡನೇ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿದೆ. ಮೊದಲ ಸಿನಿಮಾ 'ಸಲಗ' ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿತ್ತು. ಈಗ ಎರಡನೇ ಸಿನಿಮಾ 'ಭೀಮ'ವನ್ನು ಕೂಡ ದುನಿಯಾ ಗೆಲ್ಲಿಸಿದ್ದಾರೆ. ದಿಗ್ಗಜರು ನಿರ್ದೇಶಿಸಿದ ಸಿನಿಮಾಗಳೇ ಸೋಲುತ್ತಿರುವಾಗ ದುನಿಯಾ ವಿಜಯ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗುತ್ತಿದೆ.
'ಭೀಮ' 10ನೇ ದಿನದ ಕಲೆಕ್ಷನ್ ಎಷ್ಟು?
'ಭೀಮ' ಎರಡನೇ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿರೀಕ್ಷೆಯಂತೆ ಕಳೆದ ಎರಡು ದಿನಗಳಿಂದ ಸಿನಿಮಾ ಕಲೆಕ್ಷನ್ ಚೆನ್ನಾಗಿಯೇ ಆಗಿದೆ. ನಿನ್ನೆ ಭಾನುವಾರ (ಆಗಸ್ಟ್ 18) ಅಂದರೆ, 10ನೇ ದಿನ 'ಭೀಮ' ಸಿನಿಮಾದ ಕಲೆಕ್ಷನ್ 1.25 ರಿಂದ 1.30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ಬಂದ ಮಾಹಿತಿ. ಈ ಬಗ್ಗೆ 'ಭೀಮ' ತಂಡ ಅಧಿಕೃತವಾಗಿ ಇನ್ನೂ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.

'ಭೀಮ' ₹20 ಕೋಟಿ ಕ್ಲಬ್ ಸೇರಿತೇ?
ದುನಿಯಾ ವಿಜಯ್ ಸಿನಿಮಾ 'ಭೀಮ' ಸ್ಯಾಂಡಲ್‌ವುಡ್ ಮಂದಿಗೆ ಅಚ್ಚರಿಕೆ ರಿಸಲ್ಟ್ ಕೊಟ್ಟಿದೆ. ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ನಿರ್ಮಾಪಕರ ಜೇಬು ತುಂಬಿಸಿದೆ. ಸ್ಮಾಲ್ ಬಜೆಟ್ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ 20 ಕೋಟಿ ರೂಪಾಯಿ ಅಧಿಕ ಕಲೆಕ್ಷನ್ ಮಾಡಿದ್ದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಸಕ್ಸಸ್. ಸ್ಯಾಂಡಲ್‌ವುಡ್ ಮಂದಿ ಪ್ರಕಾರ, ಕಳೆದ 9 ದಿನಗಳಲ್ಲಿ 'ಭೀಮ' 19.73 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ 10ನೇ ದಿನ ಕಲೆಕ್ಷನ್ ಸೇರಿದರೆ, 21 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
3ನೇ ವಾರ ಅಸಲಿ ಚಾಲೆಂಜ್ ಶುರು
ರಜೆಗಳೆಲ್ಲ ಮುಗಿದಿವೆ. ಹೊಸ ಹೊಸ ಸಿನಿಮಾಗಳು ಬಿಡುಗಡೆ ಸಜ್ಜಾಗಿ ನಿಂತಿವೆ. ಹೀಗಾಗಿ 3ನೇ ವಾರ 'ಭೀಮ'ನಿಗೆ ದೊಡ್ಡ ಚಾಲೆಂಜ್ ಎದುರಾಗಲಾಗಿದೆ. ಅಲ್ಲದೆ, ಕಲೆಕ್ಷನ್‌ನಿಂದ ಬರುವ ಲಾಭ ಕೂಡ ಕಡಿಮೆ ಪ್ರಮಾಣದಲ್ಲಿ ನಿರ್ಮಾಪಕರ ಕೈ ಸೇರಲಿದೆ. ಹೀಗಾಗಿ ಮೂರನೇ ವಾರವೂ ಬಾಕ್ಸಾಫೀಸ್‌ನಲ್ಲಿ ಗಟ್ಟಿಯಾಗಿ ನಿಂತರೆ, ಹೊಸ ದಾಖಲೆ ಎಂದೇ ಹೇಳಬಹುದು.


Click it and Unblock the Notifications











