Bheema Box Office Day 6; ಆರನೇ ದಿನ 'ಭೀಮ'ನ ಕಥೆ ಏನಾಯ್ತು? ಗೆದ್ನಾ? ಬಿದ್ನಾ?
ಸ್ಯಾಂಡಲ್‌ವುಡ್‌ಗೆ ಭೀಮಾ ಸರ್ಪ್ರೈಸ್ ಕೊಟ್ಟಿದೆ. ಅದೆಂತಹದ್ದೇ ಸಿನಿಮಾ ಮಾಡಿದರೂ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಇನ್ನೇನು ಕನ್ನಡ ಚಿತ್ರರಂಗದ ಕಥೆ ಮುಗಿದೇ ಹೋಯ್ತು ಅನ್ನುವಾಗಲೇ ಮತ್ತೆ ಜನರನ್ನು ಥಿಯೇಟರ್‌ಗೆ 'ಭೀಮ' ಸಿನಿಮಾ ಕರೆದುಕೊಂಡು ಬರುತ್ತಿದೆ. ಕಳೆದ ಆರು ದಿನಗಳಿಂದ ಈ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡುತ್ತಿದೆ.
ದುನಿಯಾ ವಿಜಯ್ ಎರಡನೇ ನಿರ್ದೇಶನದ ಸಿನಿಮಾವಿದು. 'ಭೀಮ' ಪಕ್ಕಾ ರಗಡ್ ಮಾಸ್ ಸಿನಿಮಾ. ನೈಜತೆಯನ್ನು ಹೆಚ್ಚು ಉಳಿಸಿಕೊಂಡು ಮಾಡಿರುವ ಸಿನಿಮಾ. ಬೆಂಗಳೂರಿನ ಡ್ರಗ್ ಮಾಫಿಯಾ ವಿರುದ್ಧ ದುನಿಯಾ ವಿಜಯ್ ಸಮರ ಸಾರಿದ್ದು, 'ಭೀಮ' ಸಿನಿಮಾದ ಉದ್ದರೂ ಇದೇ ವಿಷಯವನ್ನು ಹೈಲೈಟ್ ಮಾಡಿದ್ದಾರೆ.

ದುನಿಯಾ ವಿಜಯ್ 'ಭೀಮ' ಸಿನಿಮಾದಲ್ಲಿ ಬಹುತೇಕ ಹೊಸಬರ ಆಯ್ಕೆ ಮಾಡಿದ್ದಾರೆ. ತಮ್ಮ ಸುತ್ತಮುತ್ತ ಇರುವ ಹುಡುಗರು ಇವರು ಅನ್ನೋ ಫೀಲಿಂಗ್ ಅಭಿಮಾನಿಗಳಿಗೆ ಬರುತ್ತಿದೆ. ಹೀಗಾಗಿ ಲೋಕಲ್ ಹುಡುಗರೇ ಹೆಚ್ಚಾಗಿ ಸಿನಿಮಾ ನೋಡುತ್ತಿದ್ದಾರೆ. ನಿನ್ನೆ(ಆಗಸ್ಟ್ 14) 'ಭೀಮ' ರಿಲೀಸ್ ಆಗಿ ಆರು ದಿನಗಳಾಗಿವೆ. ಆರನೇ ದಿನವೂ ಕೂಡ ಬಾಕ್ಸಾಸೀನ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿದೆ.
'ಭೀಮ' 6ನೇ ದಿನದ ಗಳಿಕೆ ಎಷ್ಟು?
ದುನಿಯಾ ವಿಜಯ್ 'ಭೀಮ' ಸಿನಿಮಾ ಕಲೆಕ್ಷನ್ ಐದನೇ ದಿನಕ್ಕೆ ಹೋಲಿಸಿದರೆ, 6ನೇ ದಿನ ಕೊಂಚ ಮಟ್ಟಿಗೆ ಡ್ರಾಪ್ ಆಗಿದೆ. ಆಗಸ್ಟ್ 14 ವರ್ಕಿಂಗ್ ಡೇ ಆಗಿದ್ದರಿಂದ ಈ ಡ್ರಾಪ್ ಅನ್ನು ನಿರೀಕ್ಷೆ ಮಾಡಲಾಗಿತ್ತು. 5ನೇ ದಿನ 1.3 ಕೋಟಿ ರೂಪಾಯಿ ಕಲೆಕ್ಷನ್ ಕಂಡಿದ್ದರೆ, 6ನೇ ದಿನ ಈ ಸಿನಿಮಾ ಗಳಿಸಿದ್ದು 90 ಲಕ್ಷ ರೂಪಾಯಿಂದ 1 ಕೋಟಿ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.
6 ದಿನಗಳಲ್ಲಿ ಒಟ್ಟು ಗಳಿಸಿದ್ದೆಷ್ಟು?
'ಭೀಮ'ಗೆ ಸಿನಿಮಾದ ಓಪನಿಂಗ್ ಸಖತ್ ಆಗಿಯೇ ಸಿಕ್ಕಿತ್ತು. ಮೊದಲ ಮೂರು ದಿನ ಸರಾಸರಿ 4 ಕೋಟಿ ರೂಪಾಯಿ ಲೆಕ್ಕದಲ್ಲಿ ಕಲೆಕ್ಷನ್ ಆಗಿದೆ. ಮೊದಲ ದಿನ 4.1 ಕೋಟಿ ರೂಪಾಯಿ, ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ 4.3 ಕೋಟಿ ರೂಪಾಯಿ, ನಾಲ್ಕನೇ ದಿನ 1.5 ಕೋಟಿ ರೂಪಾಯಿ, ಐದನೇ ದಿನ 1.3 ಕೋಟಿ ರೂಪಾಯಿ ಹಾಗೂ ಆರನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಒಟ್ಟು ಆರು ದಿನಗಳಲ್ಲಿ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎನ್ನಲಾಗಿದೆ.

'ಭೀಮ' ಲಾಭ
ಆಗಸ್ಟ್ 15ರಿಂದ ನಾಲ್ಕು ದಿನ ನಿರಂತರವಾಗಿ ರಜೆಯಿದೆ. ಈ ನಾಲ್ಕು ದಿನಗಳಲ್ಲಿ 'ಭೀಮ' ಕಲೆಕ್ಷನ್ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ. ಚಿತ್ರತಂಡ ಲೆಕ್ಕ ಹಾಕಿದಂತೆ ಆದರೆ, ಈ ಸಿನಿಮಾ ಇನ್ನು ನಾಲ್ಕು ದಿನಗಳಲ್ಲಿ 5 ಕೋಟಿ ರೂಪಾಯಿಂದ 8 ಕೋಟಿ ರೂಪಾಯಿವರೆಗೂ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾ ಹಾಕಿದ್ದಾರೆ. ಈ ಮೂಲಕ 'ಭೀಮ' ಕಲೆಕ್ಷನ್ ಈ ವೀಕೆಂಡ್‌ನಲ್ಲಿ 20 ಕೋಟಿ ರೂಪಾಯಿ ದಾಟಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಟಕ್ಕರ್ ಕೊಡಬಹುದೇ ಗಣೇಶ್ ಸಿನಿಮಾ
ಇಂದು (ಆಗಸ್ಟ್ 15) ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ರಿಲೀಸ್ ಆಗಿದೆ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಹೀಗಾಗಿ ಈ ಸಿನಿಮಾ ಏನಾದರೂ 'ಭೀಮ' ಓಟಕ್ಕೆ ಕಿಕ್ ಕೊಟ್ಟರೆ ಮಾತ್ರ ಗಳಿಕೆಯಲ್ಲಿ ಹಿನ್ನಡೆಯಾಗಬಹುದು. ಒಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಇಂತಹದ್ದೊಂದು ಸಿನಿಮಾ ಈ ಸಮಯದಲ್ಲಿ ಅಗತ್ಯವಿತ್ತು. ಅದನ್ನು 'ಭೀಮ' ಕೊಟ್ಟಿದೆ.


Click it and Unblock the Notifications