Bheema Box office Day 8: 8ನೇ ದಿನ ಭೀಮನಿಗೆ ವರ ಕೊಟ್ಟಳೇ ಲಕ್ಷ್ಮಿ? ಕಲೆಕ್ಷನ್ ಎಷ್ಟು?

ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ 'ಭೀಮ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸಕ್ಸಸ್ ತಂದುಕೊಟ್ಟಿದೆ. ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಬಿ ಮತ್ತು ಸಿ ಸೆಂಟರ್‌ಗಳಲ್ಲಿ ದೊಡ್ಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನದಿಂದಲೇ ವಿಜಯ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿದೆ.

'ಭೀಮ' ಸಿನಿಮಾ ಮಾದಕ ವ್ಯಸನಿಗಳಾಗಿರುವ ಯುವಕರನ್ನು ಇಟ್ಟುಕೊಂಡು ಹೆಣೆಯಲಾಗಿದ್ದ ಕಥೆ. ಬೆಂಗಳೂರಿನ ಏರಿಯಾಗಳಲ್ಲಿ ಡ್ರಗ್ಸ್ ಮಾಫಿಯಾ ಹೇಗಿದೆ? ಯಾವ್ಯಾವ ಏರಿಯಾಗಳಲ್ಲಿ ಈ ದಂಧೆ ಹೇಗೆ ನಡೆಯುತ್ತೆ? ಅನ್ನೋದನ್ನು ದುನಿಯಾ ವಿಜಯ್ ಮತ್ತು ಅವರ ತಂಡ ಈ ಸಿನಿಮಾದಲ್ಲಿ ಹಸಿ ಬಿಸಿಯಾಗಿ ತೋರಿಸಿದೆ. ಹೀಗಾಗಿ ಬಿ ಮತ್ತು ಸಿ ಸೆಂಟರ್‌ಗಳಲ್ಲಿರುವ ಯುವಕರನ್ನು ಈ ಸಿನಿಮಾ ಸೆಳೆಯುತ್ತಿದೆ.

Duniya Vijay movie Bheema Box office collection Day 8 report

ದುನಿಯಾ ವಿಜಯ್ ಸಿನಿಮಾ 'ಭೀಮ' ರಿಲೀಸ್ ಆಗಿ ಇಂದಿಗೆ (ಆಗಸ್ಟ್ 17) 9ನೇ ದಿನ. ನಿನ್ನೆ (ಆಗಸ್ಟ್ 16) ವರೆಗೂ 'ಭೀಮ' ಕಲೆಕ್ಷನ್ ನಿರ್ಮಾಪಕರಿಗೆ ಸಮಾಧಾನ ತಂದಿದೆ. ವೀಕ್‌ಡೇಸ್‌ನಲ್ಲಿ ಕಲೆಕ್ಷನ್ ಕೊಂಚ ಕಡಿಮೆ ಆಗಿದ್ದರೂ, ಮಧ್ಯದಲ್ಲೊಂದು ರಜೆ ಸಿನಿಮಾ ಕಲೆಕ್ಷನ್ ಬೂಸ್ಟ್ ಕೊಟ್ಟಿದೆ. ಹಾಗಿದ್ದರೆ, 'ಭೀಮ' ಸಿನಿಮಾ 20 ಕೋಟಿ ರೂಪಾಯಿ ಕ್ಲಬ್ ಸೇರಿತಾ? ಈ ಎಂಟು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಭೀಮ'ನಿಗೆ ವರ ಕೊಟ್ಟಳಾ ವರಮಹಾಲಕ್ಷ್ಮಿ?

ದುನಿಯಾ ವಿಜಯ್ ನಟನೆಯ 'ಭೀಮ' ಮಾಸ್ ಸಿನಿಮಾ. ಆದರೂ ಸಿನಿಮಾ ತಂಡ ಎಲ್ಲರೂ ಬಂದು ನೋಡಲೇಬೇಕಾದ ಸಿನಿಮಾ ಎಂದು ಸಾರಿ ಹೇಳುತ್ತಲೇ ಇದೆ. ಈ ಕಾರಣಕ್ಕೆ 'ಭೀಮ' ಕರ್ನಾಟಕದ ಮಾಸ್ ಏರಿಯಾಗಳಲ್ಲಿ ಒಳ್ಳೆಯ ಕಲೆಕ್ಷನ್ ಇದೆ. ಇನ್ನು ಎಂಟನೇ ದಿನ ವರಮಹಾಲಕ್ಷ್ಮಿ ಹಬ್ಬದಂದು ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಎಂಟನೇ ದಿನ ನಿನ್ನೆ (ಆಗಸ್ಟ್ 16) ಈ ಸಿನಿಮಾ ಗಳಿಸಿದ್ದು, 1 ಕೋಟಿ ರೂಪಾಯಿ ಎಂದು ವಿತರಕರು ವಲಯದಲ್ಲಿ ಲೆಕ್ಕಹಾಕಲಾಗಿದೆ.

8 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ದುನಿಯಾ ವಿಜಯ್ ಸಿನಿಮಾ 8ನೇ ದಿನವೂ ಕಲೆಕ್ಷನ್‌ ವಿಚಾರದಲ್ಲಿ ಮೋಸ ಆಗಿಲ್ಲ. ಹಬ್ಬದ ವಾತಾವರಣ ಇದ್ದಿದ್ದರಿಂದ ಜನರು ಥಿಯೇಟರ್‌ಗೆ ಬಂದಿದ್ದು ಕಮ್ಮಿನೇ. ಒಟ್ಟು ಈ ಎಂಟು ದಿನಗಳಲ್ಲಿ 'ಭೀಮ' ಸಿನಿಮಾದ ಕಲೆಕ್ಷನ್ ಹೀಗಿದೆ. ಮೊದಲ ಮೂರು ದಿನ 12.3 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಆಗಸ್ಟ್ 14ರವರೆಗೂ 3.8 ಕೋಟಿ ರೂಪಾಯಿ, ಆಗಸ್ಟ್ 15ಕ್ಕೆ 1.38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ನಿನ್ನೆ (ಆಗಸ್ಟ್ 16) 8ನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟು ಈ ಎಂಟು ದಿನಗಳಲ್ಲಿ 18.38 ಕೋಟಿ ರೂಪಾಯಿಯಿಂದ 19 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದೆ.

Duniya Vijay movie Bheema Box office collection Day 8 report

ವೀಕೆಂಡ್ ಮೇಲೆ 'ಭೀಮ' ಕಲೆಕ್ಷನ್ ಕಣ್ಣು

ದುನಿಯಾ ವಿಜಯ್ ಸಿನಿಮಾ 'ಭೀಮ'ಗೆ ಎರಡನೇ ವೀಕೆಂಡ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ರಜೆಯ ಮೂಡಿನಲ್ಲಿರುವ ಜನರು 'ಭೀಮ' ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಬಹುದೆಂಬ ನಿರೀಕ್ಷೆಯನ್ನು ಟ್ರೇಡ್ ಎಕ್ಸ್‌ಪರ್ಟ್ ಇಟ್ಟುಕೊಂಡಿದ್ದಾರೆ. ಈ ಎರಡು ದಿನಗಳಲ್ಲಿ 'ಭೀಮ' 2 ರಿಂದ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ಅಂದಾಜು ಮಾಡಲಾಗಿದೆ. ಈ ಮೂಲಕ 'ಭೀಮ' 20 ಕೋಟಿ ರೂಪಾಯಿ ಕ್ಲಬ್‌ಗೆ ಎಂಟ್ರಿ ಕೊಟ್ಟಂತೆ ಆಗುತ್ತೆ.

ಮೂರನೇ ವಾರ ಅಸಲಿ ಚಾಲೆಂಜ್

'ಭೀಮ' ಸಿನಿಮಾಗೆ ಅಸಲಿ ಚಾಲೆಂಜ್ ಶುರುವಾಗೋದು ಮೂರನೇ ವಾರ. ಎರಡು ವಾರ ಭೀಮಗೆ ರಜೆಗಳ ಅಡ್ವಾಂಟೇಜ್ ಸಿಕ್ಕಿತ್ತು. ಅದೇ ಮೂರನೇ ವಾರ ರಜೆಗಳು ಯಾವುದು ಇಲ್ಲ. ಹೀಗಾಗಿ ವರ್ಕಿಂಗ್‌ ಡೇಸ್‌ನಲ್ಲಿ 'ಭೀಮ'ಗೆ ಬಾಕ್ಸಾಫೀಸ್‌ನಲ್ಲಿ ಏಟು ಬೀಳಬಹುದು. ಆ ಕಾರಣಕ್ಕೆ ದುನಿಯಾ ವಿಜಯ್ ಪರೋಕ್ಷವಾಗಿ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರನೇ ವಾರವೂ ಚಿತ್ರಮಂದಿರಕ್ಕೆ ಜನರನ್ನು ಕರೆದುಕೊಂಡು ಬರುವುದಕ್ಕೆ ಏನೆಲ್ಲ ತಂತ್ರ ಉಪಯೋಗಿಸುತ್ತಾರೆ ಅನ್ನೋದು ನೋಡಬೇಕಿದೆ.

More from Filmibeat

English summary
Duniya Vijay movie Bheema Box office collection Day 8 report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X