»   » 'ಎನ್.ಟಿ.ಆರ್' ಚಿತ್ರದಿಂದ ದುನಿಯಾ ವಿಜಯ್ ಔಟ್.!

'ಎನ್.ಟಿ.ಆರ್' ಚಿತ್ರದಿಂದ ದುನಿಯಾ ವಿಜಯ್ ಔಟ್.!

By: BK
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಕನ್ನಡದ ಕರಿ ಚಿರತೆ ದುನಿಯಾ ವಿಜಯ್ ತೆಲುಗು ನಟ ಜೂನಿಯರ್ ಎನ್.ಟಿ.ಆರ್ ಅಭಿನಯದ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಬೇಕಾಗಿತ್ತು. ಆದ್ರೆ, ಕಾರಣಾಂತರಗಳಿಂದ ಬ್ಲ್ಯಾಕ್ ಕೋಬ್ರಾ ಚಿತ್ರದಿಂದ ಹಿಂದೆ ಸರಿದಿದ್ದಾರೆ.

ಹೌದು, ಜೂನಿಯರ್ ಎನ್.ಟಿ.ಆರ್ ಅವರೇ ಸ್ವತಃ ಫೋನ್ ಮಾಡಿ ದುನಿಯಾ ವಿಜಯ್ ಅವರನ್ನ, ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದರು. ತೆಲುಗು ಖ್ಯಾತ ನಟ ಸ್ವತಃ ಫೋನ್ ಮಾಡಿದ ಕಾರಣ ತಕ್ಷಣ ವಿಜಿ ಒಪ್ಪಿಕೊಂಡಿದ್ದರು. ಈ ಮೂಲಕ ಟಾಲಿವುಡ್ ನಲ್ಲಿ ದುನಿಯಾ ವಿಜಯ್ ತಮ್ಮ ಚೊಚ್ಚಲ ಚಿತ್ರವನ್ನ ಮಾಡಲಿದ್ದಾರೆ ಎಂಬ ಖುಷಿ ಅಭಿಮಾನಿಗಳಲ್ಲಿತ್ತು. ಆದ್ರೆ, ಈ ಆಸೆ ಈಗ ಕಮರಿದೆ.[ಜೂ. ಎನ್.ಟಿ.ಆರ್ ಎದುರು ತೊಡೆತಟ್ಟಿ ನಿಲ್ತಾರೆ ದುನಿಯಾ ವಿಜಯ್]

ಅಷ್ಟಕ್ಕೂ, ದುನಿಯಾ ವಿಜಯ್, ಎನ್.ಟಿ.ಆರ್ ಚಿತ್ರದಿಂದ ಹಿಂದೆ ಸರಿದಿದ್ಯಾಕೆ? ಮುಂದೆ ಓದಿ.......

ಎನ್.ಟಿ.ಆರ್ ಗೆ ವಿಲನ್ ಆಗಲ್ಲ ಕೋಬ್ರಾ

ತೆಲುಗು ನಟ ಎನ್.ಟಿ.ಆರ್ ಎದುರು ದುನಿಯಾ ವಿಜಯ್ ವಿಲನ್ ಆಗಲಿದ್ದಾರೆ ಎನ್ನಲಾಗಿತ್ತು. ಕನ್ನಡದಲ್ಲಿ ಖಳನಾಯಕನಾಗಿ ಎಂಟ್ರಿ ಕೊಟ್ಟು, ನಾಯಕನಾಗಿ ಬೆಳೆದು ನಿಂತ ವಿಜಿ, ತೆಲುಗಿನಲ್ಲೂ ಅಬ್ಬರಿಸಲಿದ್ದಾರೆ ಎಂಬ ಖುಷಿ ಅಭಿಮಾನಿಗಳಲ್ಲಿತ್ತು. ಆದ್ರೆ, ಈಗ ಆಸೆಗೆ ತಣ್ಣೀರು ಬಿದ್ದಿದೆ. ಅಂದ್ರೆ, ಈ ಸಿನಿಮಾದಿಂದ ವಿಜಿ ಹೊರ ಬಂದಿದ್ದಾರೆ.

ಚಿತ್ರದಿಂದ ಹೊರಬರಲು ಕಾರಣವೇನು?

ಸದ್ಯ, ದುನಿಯಾ ವಿಜಯ್ ಫುಲ್ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಮೇ 12 ರಂದು ದುನಿಯಾ ವಿಜಿ 'ಜೈ ಲವಕುಶ' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತಂತೆ. ಆದ್ರೆ, 'ಮಾಸ್ತಿಗುಡಿ' ಚಿತ್ರದ ರಿಲೀಸ್ ಇದ್ದ ಕಾರಣ ಸಾಧ್ಯವಾಗಲಿಲ್ಲವಂತೆ. ಈಗ ಅದರ ಬೆನ್ನಲ್ಲೆ 'ಕನಕ' ಚಿತ್ರದಲ್ಲಿ ವಿಜಿ ತೊಡಗಿಕೊಂಡಿದ್ದಾರೆ. ಹೀಗೆ, ಕನ್ನಡ ಸಿನಿಮಾಗಳಲ್ಲಿ ವಿಜಿ ಅವರು ಬ್ಯುಸಿ ಇರುವುದರಿಂದ ತೆಲುಗು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.[ದುನಿಯಾ ವಿಜಯ್ ಕಡೆಯಿಂದ ಬಂದ ಲೇಟೆಸ್ಟ್ ಸುದ್ದಿ ಇದು..]

ಫೋನ್ ಮಾಡಿ ತಿಳಿಸಿದ ವಿಜಿ

ಈ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲವೆಂದು ಸ್ವತಃ ದುನಿಯಾ ವಿಜಯ್ ಅವರೇ, ನಟ ಜೂನಿಯರ್ ಎನ್.ಟಿ.ಆರ್ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರಂತೆ. 'ಜೈಲವಕುಶ'ದಲ್ಲಿ ನಟಿಸದಿರಲು ಕಾರಣಗಳನ್ನೂ ವಿವರಿಸಿರುವ ದುನಿಯಾ ವಿಜಿ ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ನಟಿಸುತ್ತೇನೆ ಎಂದು ಎನ್‌ಟಿಆರ್ ಗೆ ಭರವಸೆ ನೀಡಿದ್ದಾರಂತೆ.

'ಮಾಸ್ತಿಗುಡಿ' ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದ ಎನ್.ಟಿ.ಆರ್

'ಮಾಸ್ತಿಗುಡಿ' ಚಿತ್ರಕ್ಕಾಗಿ ವಿಜಯ್ ಮಾಡಿದ್ದ ಆಕ್ಷನ್ ಮತ್ತು ಸ್ಟಂಟ್ಸ್ ನೋಡಿ ಮೆಚ್ಚಿಕೊಂಡ ಜೂನಿಯರ್ ಎನ್.ಟಿ.ಆರ್, ತಮ್ಮ ಹೊಸ ಚಿತ್ರಕ್ಕಾಗಿ ವಿಜಯ್ ಗೆ ಅವರೇ ನೇರವಾಗಿ ಕರೆ ಮಾಡಿ ಅಪ್ರೋಚ್ ಮಾಡಿದ್ದರು.[ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ']

ಜೈ ಲವಕುಶ ಚಿತ್ರದ ಬಗ್ಗೆ......

ದುನಿಯಾ ವಿಜಯ್ ಅಭಿನಯಿಸಬೇಕಿದ್ದ 'ಜೈ ಲವಕುಶ' ಚಿತ್ರಕ್ಕೆ ಜೂನಿಯರ್ ಎನ್.ಟಿ.ಆರ್ ನಾಯಕ. ರವಿಂದ್ರ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ರಾಶಿ ಖನ್ನಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.

English summary
If everything had gone right, then 'Duniya' Vijay was supposed to be part of Junior NTR's new Telugu film 'Jai Lava Kusa'. But now Vijay has opted out of the film and some other actor will be replacing Vijay.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada