»   » ದುನಿಯಾ ವಿಜಯ್ ಕಡೆಯಿಂದ ಬಂದ ಲೇಟೆಸ್ಟ್ ಸುದ್ದಿ ಇದು..

ದುನಿಯಾ ವಿಜಯ್ ಕಡೆಯಿಂದ ಬಂದ ಲೇಟೆಸ್ಟ್ ಸುದ್ದಿ ಇದು..

Posted By:
Subscribe to Filmibeat Kannada

'ದುನಿಯಾ' ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಮಾಸ್ತಿಗುಡಿ' ಸದ್ಯದಲ್ಲೇ ಬೆಳ್ಳಿತೆರೆಗೆ ಅಪ್ಪಳಿಸುವ ಸನಿಹದಲ್ಲಿದೆ. ಇತ್ತ ಈಗಾಗಲೇ ದುನಿಯಾ ವಿಜಯ್ 'ಕನಕ' ಸಿನಿಮಾ ಚಿತ್ರೀಕರಣದಲ್ಲಿಯೂ ತೊಡಗಿಕೊಂಡಿದ್ದಾರೆ.[ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ']

ಹೀಗಿರುವಾಗಲೇ ವಿಜಯ್ ಕಡೆಯಿಂದ ಹೊಸ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಆದ್ರೆ ಈ ವಿಷಯ ಅವರ ಸಿನಿಮಾಗೆ ಸಂಬಂಧಪಟ್ಟಿರುವುದಲ್ಲ ಎಂಬುದು ಇನ್ನೊಂದು ವಿಶೇಷತೆ. ಅದೇನು ಎಂದು ತಿಳಿದುಕೊಳ್ಳುವ ಕುತೂಹಲ ಇರುವವರು ಮುಂದೆ ಓದಿ..

ದುನಿಯಾ ವಿಜಯ್ ಹೊಸ ಪ್ಲಾನ್ ಇದು..

ನಟ ದುನಿಯಾ ವಿಜಯ್ ಮುಂಬರುವ ದಿನಗಳಲ್ಲಿ ತಮ್ಮ ಆತ್ಮಕಥೆ ಬರೆಯಲು ನಿರ್ಧರಿಸಿದ್ದಾರಂತೆ. ಈಗಂತ ಸ್ಯಾಂಡಲ್ ವುಡ್ ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ಆತ್ಮಚರಿತ್ರೆ ಬರೆಯಲು ಪೂರ್ವಸಿದ್ಧತೆ

ಆದ್ರೆ ತಮ್ಮ ಆತ್ಮಚರಿತ್ರೆ ಬರೆಯುವುದಕ್ಕೂ ಮೊದಲು ದುನಿಯಾ ವಿಜಯ್ ಅದಕ್ಕೆ ಬೇಕಾದ ಎಲ್ಲಾ ರೀತಿಯ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರಂತೆ.

ಸಾಹಿತ್ಯ ಅಧಯನದಲ್ಲಿ ವಿಜಿ ಫುಲ್ ಬಿಜಿ

ವಿಜಯ್ ಆತ್ಮಕಥೆ ಬರೆಯಲು ಮೊದಲನೇಯದಾಗಿ ಹೆಚ್ಚು ಸಾಹಿತ್ಯ ಅಧ್ಯಯನ ಮಾಡುತ್ತಾರಂತೆ. ಇದಕ್ಕಾಗಿ ಈಗಾಗಲೇ ವಿಜಯ್ ಹಲವು ಪುಸ್ತಕಗಳನ್ನು ಖರೀದಿಸಿದ್ದು, ಓದಲು ಆರಂಭಿಸಿದ್ದಾರಂತೆ.

ಭಾಷೆ ಮತ್ತು ಪದಬಳಕೆ ಇಂಪಾರ್ಟೆಂಟ್

ಆತ್ಮಕಥೆ ಬರೆಯಲು ಭಾಷೆ ಮತ್ತು ಪದಗಳ ಬಳಕೆ ಮೇಲೆ ಸಾಕಷ್ಟು ಹಿಡಿತ ಬೇಕಾಗಿರುವುದರಿಂದ, ಹಲವು ಪುಸ್ತಕಗಳು, ಖ್ಯಾತ ಲೇಖಕರು ಮತ್ತು ಕವಿಗಳ ಆತ್ಮಚರಿತ್ರೆ ಪುಸ್ತಕಗಳನ್ನು ಓದಿ ಭಾಷೆ ಮತ್ತು ಪದಬಳಕೆ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರಂತೆ.

ಫೇಸ್ ಬುಕ್ ಮತ್ತು ಫೋನ್ ನಿಂದ ದೂರ ಉಳಿಯಲು ನಿರ್ಧಾರ

ಆತ್ಮಕಥೆ ಬರೆಯಲು ನಿರ್ಧರಿಸಿರುವ ವಿಜಯ್, ಅಧ್ಯಯನದ ಕಡೆ ಹೆಚ್ಚು ಗಮನಕೊಡಲು ಸಾಮಾಜಿಕ ಜಾಲತಾಣ ಮತ್ತು ಫೋನ್ ಅನ್ನು ಅವಾಯ್ಡ್ ಮಾಡಲು ನಿರ್ಧರಿಸಿದ್ದಾರಂತೆ.

'ಕನಕ' ಚಿತ್ರದಲ್ಲೂ ಬಿಜಿ

ಸ್ಯಾಂಡಲ್ ವುಡ್ ನ 'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್ ಈಗ ಆರ್ ಚಂದ್ರು ನಿರ್ದೇಶನದ 'ಕನಕ' ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಕೊಂಡಿದ್ದಾರೆ.[ಆರ್ ಚಂದ್ರು 'ಕನಕ' ಚಿತ್ರಕ್ಕೆ ಫಿಕ್ಸ್ ಆದ ಮೊದಲ ನಾಯಕಿ ಇವರು...?]

English summary
Kannada Actor 'Duniya' Vijay is planning to write his autobiography in the Up-coming days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada