ಡಾಲಿಯ 'ಕೋಟಿ'ಗೂ ದುನಿಯಾ ವಿಜಯ್‌ಗೂ ಏನು ಸಂಬಂಧ? ನೆಟ್ಟಿಗರು ಹೊಗಳಿ ಅಟ್ಟಕ್ಕೇರಿಸಿದ್ದೇಕೆ?

ಕಲರ್ಸ್ ಕನ್ನಡದ ಮಾಜಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದರು. ಡಾಲಿ ಧನಂಜಯ್ ಹೀರೊ ಆಗಿ ಆಯ್ಕೆಯಾಗಿದ್ದರು. ಅದ್ಯಾವಾಗ ಸಿನಿಮಾ ಸೆಟ್ಟೇರಿತೋ, ಅದ್ಯಾವಾಗ ಮುಗಿತೋ ಗೊತ್ತಾಗಲೇ ಇಲ್ಲ. ಸಿನಿಮಾನೂ ಕಂಪ್ಲೀಟ್ ಆಗಿ, ರಿಲೀಸ್ ಆಗಿದೆ. ಅದುವೇ 'ಕೋಟಿ'.

ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ಪಕ್ಕಾ ಫ್ಯಾಮಿಲಿ ಇಷ್ಟ ಪಡುವ ಕಮರ್ಷಿಯಲ್ ಸಿನಿಮಾ ಇದಾಗಿದೆ. 'ಕೋಟಿ' ನೋಡಿದ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಈ ಸಿನಿಮಾವನ್ನು ನೋಡಬಹುದು ಅಂತ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

Duniya Vijay played a played a cameo role in the Dhananjay movie Kotee is getting appreciation

ಇದೇ ಸಂದರ್ಭದಲ್ಲಿ 'ಕೋಟಿ' ಸಿನಿಮಾದ ಸರ್ಪ್ರೈಸಿಂಗ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನಂದರೆ, ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ಜೊತೆ ದುನಿಯಾ ವಿಜಯ್ ಕೂಡ ಕಾಣಿಸಿಕೊಂಡಿದ್ದಾರೆ. 'ಕೋಟಿ' ಸಿನಿಮಾದಲ್ಲಿನ ದುನಿಯಾ ವಿಜಯ್ ಪಾತ್ರದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಪರಮೇಶ್ವರ್ ಗುಂಡ್ಕಲ್ ನಿರ್ದೇಶಿಸಿದ ಮೊದಲ ಸಿನಿಮಾ 'ಕೋಟಿ'ಯಲ್ಲಿ ದುನಿಯಾ ವಿಜಯ್ ಎಂಟ್ರಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಧನಂಜಯ್, ತಾರಾ, ರಮೇಶ್ ಇಂದಿರಾ ಕಾಂಬಿನೇಷನ್‌ ಸಿನಿಮಾದಲ್ಲಿ ಎಂಗೇಜಿಂಗ್ ಆಗಿದೆ. ಇದರ ಜೊತೆನೇ 'ಕೋಟಿ'ಯ ಕ್ಲೈಮ್ಯಾಕ್ಸ್‌ ನೋಡಿ ‌ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜೊತೆಗೆ 'ದುನಿಯಾ ವಿಜಯ್' ವಿಶೇಷ ಪಾತ್ರ ಪ್ರೇಕ್ಷಕರಿಗೆ ಕಿಕ್ ಕೊಡಲು ಶುರು ಮಾಡಿದೆ.

ದುನಿಯಾ ವಿಜಯ್ ಸೆಕೆಂಡ್ ಇನ್ನಿಂಗ್ಸ್ ಸಕ್ಸಸ್‌ಫುಲ್ ಆಗಿದೆ. ತಾವೇ ನಿರ್ದೇಶಿಸಿ, ನಟಿಸಿರುವ 'ಸಲಗ' ಹಿಟ್ ಲಿಸ್ಟ್ ಸೇರಿತ್ತು. ಇದೇ ವೇಳೆ ಬಾಲಕೃಷ್ಣ ನಟಿಸಿರುವ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿತ್ತು. ಬಳಿಕ 'ಭೀಮ' ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಆ ಸಿನಿಮಾ ಇನ್ನೇನು ರಿಲೀಸ್ ಆಗಬೇಕಿದೆ.

Duniya Vijay played a played a cameo role in the Dhananjay movie Kotee is getting appreciation

'ಕೋಟಿ' ಸಿನಿಮಾದಲ್ಲಿ ದುನಿಯಾ ವಿಜಯ್ ಪಾತ್ರವನ್ನು ಸರ್ಪ್ರೈಸಿಂಗ್ ಎಲಿಮೆಂಟ್ ಆಗಿ ಇಟ್ಟಿದ್ದರು. ಡಾಲಿ ಧನಂಜಯ್ ನೋಡಲು ಥಿಯೇಟರ್‌ಗೆ ಬಂದ ಪ್ರೇಕ್ಷಕರಿಗೆ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. "ದುನಿಯಾ ವಿಜಯ್ ನಟನೆ ಹಾಗೂ ಆ ಒಂದು ಸನ್ನಿವೇಶ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡುತ್ತದೆ" ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನು ದುನಿಯಾ ವಿಜಯ್ ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 'ಸಲಗ' ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ಡಾಲಿ ಸಿನಿಮಾದಲ್ಲಿ ದುನಿಯಾ ವಿಜಯ್ ಎಮೋಷನಲ್ ಪಾತ್ರದಲ್ಲಿ ನಟಿಸಿದ್ದು ಪ್ರೇಕ್ಷಕರಿಗೆ ಇಷ್ಟ ಆಗಿದೆ. "ಕೋಟಿ ಸಿನಿಮಾದಲ್ಲಿ ದುನಿಯಾ ವಿಜಯ್ ಬರುವ ಸನ್ನಿವೇಶ ನನಗೆ ತುಂಬಾ ಇಷ್ಟದ ಸನ್ನಿವೇಶಗಳಲ್ಲೊಂದು. ಥಿಯೇಟರ್‌ಗಳಲ್ಲಿ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ವಿಶೇಷವಾದದ್ದು" ಎಂದು ನಿರ್ದೇಶಕ ಪರಮ್ ಹೇಳಿಕೆ ನೀಡಿದ್ದಾರೆ.

'ಕೋಟಿ' ಸಿನಿಮಾದಲ್ಲಿ ಡಾಲಿ ಧನಂಜಯ, ದುನಿಯಾ ವಿಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ನಟಿಸಿದ್ದಾರೆ. ಇವರೊಂದಿಗೆ ಖಳನಾಯಕನಾಗಿ ರಮೇಶ್ ಇಂದಿರಾ ಮೆಚ್ಚುಗೆ ಗಳಿಸಿದ್ದಾರೆ. ಹಾಗೇ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ನಟಿಸಿದ್ದಾರೆ.

More from Filmibeat

English summary
Duniya Vijay in Dhananjay movie Kotee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X