ದುನಿಯಾ ವಿಜಯ್ ಪುತ್ರಿಯ ಚೊಚ್ಚಲ ಸಿನಿಮಾ 'ಲಾಂಡ್ ಲಾರ್ಡ್' ಲುಕ್ ಹೇಗಿದೆ? 3 ಶೇಡ್‌ಗಳಲ್ಲಿ ರಿತಾನ್ಯಾ!
ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಸಲಗ', 'ಭೀಮಾ' ದಂತಹ ಯಶಸ್ವಿ ಸಿನಿಮಾಗಳನ್ನು ಕೊಟ್ಟ ಬಳಿಕ 'ಲ್ಯಾಂಡ್ ಲಾರ್ಡ್' ಅವತಾರವೆತ್ತಿರೋದು ಗೊತ್ತೇ ಇದೆ. ಈ ಸಿನಿಮಾದಲ್ಲಿ ಅವರ ಪುತ್ರಿ ರಿತಾನ್ಯಾ ವಿಜಯ್ ಕೂಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಅಪ್ಪನ ಸಿನಿಮಾದಲ್ಲೇ ಮಗಳ ಅದ್ಧೂರಿ ಎಂಟ್ರಿಯಾಗುತ್ತಿರೋದು ಮತ್ತೊಂದು ವಿಶೇಷ.
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾವನ್ನು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿದ್ದಾರೆ. ಇಬ್ಬರು ಅನುಭವಿ ನಟರ ಮಧ್ಯೆ ದುನಿಯಾ ವಿಜಯ್ ಪುತ್ರಿ ರಿತಾನ್ಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಗಸ್ಟ್ 30 ರಿತಾನ್ಯಾ ವಿಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಅವರ ಪಾತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿತ್ತು.

'ಲಾಂಡ್ ಲಾರ್ಡ್' ಸಿನಿಮಾದಲ್ಲಿ ರಿತಾನ್ಯಾ ವಿಜಯ್ ತಂದೆಯೊಂದಿಗೆ ಭಾಗ್ಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿ ರಿತಾನ್ಯಾ ಹೇಗೆ ಕಾಣಿಸಿಕೊಳ್ಳಬಹುದು ಎಂಬ ದುನಿಯಾ ವಿಜಯ್ ಅಭಿಮಾನಿಗಳ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ರಿತಾನ್ಯಾ ಫಸ್ಟ್ ಲುಕ್ ನೋಡಿದ ವಿಜಯ್ ಫ್ಯಾನ್ಸ್ ಥ್ರಿಲ್ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿತಾನ್ಯಾ ವಿಜಯ್ ಪಾಲಿಗೆ 'ಲ್ಯಾಂಡ್ ಲಾರ್ಡ್' ಸಿನಿಮಾ. ಚೊಚ್ಚಲ ಸಿನಿಮಾದಲ್ಲಿಯೇ ತಂದೆಯೊಂದಿಗೆ ನಟಿಸುವ ಭಾಗ್ಯ ಸಿಗೋದು ತೀರಾ ಅಪರೂಪ. ರಿತಾನ್ಯಾಗೆ ಇಂತಹದ್ದೊಂದು ಅವಕಾಶ ಸಿಕ್ಕಿದ್ದು, ಚಿತ್ರತಂಡ ಕೂಡ ತಂದೆ-ಮಗಳ ಕಾಂಬಿನೇಷನ್ ಅನ್ನು ತೆರೆಮೇಲೆ ನೋಡುವುದಕ್ಕೆ ಎದುರು ನೋಡುತ್ತಿದೆ. 'ಕಾಟೇರ' ಸಿನಿಮಾಗೆ ಕಥೆ ಬರೆದಿದ್ದ ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವುದರಿಂದ ಈ ಕಾಂಬಿನೇಷನ್‌ಗೆ ನಿರೀಕ್ಷೆ ದುಪ್ಪಟ್ಟಾಗಿದೆ.
ರಿತನ್ಯಾ ಈ ಸಿನಿಮಾದಲ್ಲಿ ಡಿ-ಗ್ಲಾಮರ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಕನ್‌ಸ್ಟೇಬರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಿತಾನ್ಯಾ ಈ ಪೋಸ್ಟರ್‌ನಲ್ಲಿ ಪೊಲೀಸ್ ಧಿರಿಸಿನಲ್ಲಿ ಇದ್ದರೂ, ಕೈ ತುಂಬಾ ಬಳೆ, ಹಣೆ ಮೇಲೆ ಕುಂಕುಮ ಇಟ್ಟಿದ್ದಾರೆ. ಈ ಪೋಸ್ಟರ್‌ಗಳು ಸಿನಿ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟಿಸಿವೆ. ರಿತಾನ್ಯಾ ಪಾತ್ರ ಎಷ್ಟು ಪ್ರಮುಖ ಅನ್ನೋದನ್ನು ಪೋಸ್ಟರ್‌ಗಳ ಮೂಲಕವೇ ಹೇಳಲಾಗಿದೆ. ಒಟ್ನಲ್ಲಿ ದುನಿಯಾ ವಿಜಯ್ ಅಭಿಮಾನಿಗಳಿಗಂತೂ ರಿತಾನ್ಯಾ ಫಸ್ಟ್ ಲುಕ್ ಸಿಕ್ಕಾಪಟ್ಟೆ ಇಷ್ಟ ಆಗಿದೆ.

ಇನ್ನು 'ಲ್ಯಾಂಡ್ ಲಾರ್ಡ್' ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸ್ವಾಮಿ ಜೆ ಗೌಡ ಕ್ಯಾಮರಾ ವರ್ಕ್ ಮಾಡಿದ್ದರೆ, ಕೆ.ಎಂ. ಪ್ರಕಾಶ್ ಎಡಿಟಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 'ಸಾರಥಿ' ಸಿನಿಮಾವನ್ನು ನಿರ್ಮಾಣ ಮಾಡಿರುವ ಕೆ.ವಿ.ಸತ್ಯಪ್ರಕಾಶ್ ಹಾಗೂ ಕೆ.ಎಸ್ ಹೇಮಂತ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಕೆರಳಿಸಿದೆ.
ಇನ್ನು ಈ ಸಿನಿಮಾದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪಾತ್ರಗಳು ಕೂಡ ಅಷ್ಟೇ ಪವರ್‌ಫುಲ್ ಆಗಿವೆ. ಇದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದರಿಂದ ನಿರ್ದೇಶಕ ಜಡೇಶ್ ಹಂಪಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ರಚಿತಾ ರಾಮ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ 42ನೇ ವಯಸ್ಸಿನ ಒಂದು ಮಗುವಿನ ತಾಯಿಯ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ 'ಲ್ಯಾಂಡ್ ಲಾರ್ಡ್' ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ವರ್ಷದ ಅಂತ್ಯದಲ್ಲಿ ರಿಲೀಸ್ ಆಗುವ ಎಲ್ಲಾ ಸಾಧ್ಯತೆಯಿದೆ ಎನ್ನಲಾಗುತ್ತಿದೆ.


Click it and Unblock the Notifications











