"ಅನ್ನ ಕೊಟ್ಟು ಕೈ ತುತ್ತು ತಿನ್ನಿಸಿದ್ದು ಕರ್ನಾಟಕ.. ಇಲ್ಲಿದೆ ಮೊದಲ ಆದ್ಯತೆ" ದುನಿಯಾ ವಿಜಯ್

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 49ನೇ ವಸಂತಕ್ಕೆ ಕಾಲಿಟ್ಟಿರುವ ನಟ ಚಿತ್ರರಂಗದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ, ತೆಲುಗು ಸಿನಿಮಾ ಮೂಲಕವೂ ಗಮನ ಸೆಳೆದಿದ್ದಾರೆ.

'ಸಲಗ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ದುನಿಯಾ ವಿಜಯ್‌ ಮತ್ತೆ ಸಕ್ಸಸ್ ಕಂಡುಕೊಂಡಿದ್ದರು. ಈ ಮೂಲಕ ಕೇವಲ ನಟನಾಗಿ ಅಷ್ಟೇ ಅಲ್ಲದೆ, ನಿರ್ದೇಶಕನಾಗಿಯೂ ಗೆಲುವು ಕಂಡಿದ್ದಾರೆ. ಇದೇ ಜೋಷ್‌ನಲ್ಲಿ 'ವೀರ ಸಿಂಹ ರೆಡ್ಡಿ' ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲೂ ಸಿನಿ ಪ್ರಿಯರ ಗಮನ ಸೆಳೆದು ಬಂದಿದ್ದಾರೆ.

'ವೀರ ಸಿಂಹ ರೆಡ್ಡಿ' ಟಾಲಿವುಡ್‌ಗ ಎಂಟ್ರಿ ಕೊಟ್ಟಿದ್ದ ದುನಿಯಾ ವಿಜಯ್, ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚು ನಟಿಸುತ್ತಾರಾ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೆ ದುನಿಯಾ ವಿಜಯ್ ಭಾವನಾತ್ಮಕವಾಗಿ ಉತ್ತರ ಕೊಟ್ಟಿದ್ದಾರೆ. ಎಂದಿದ್ದರೂ ಕನ್ನಡಕ್ಕೆ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಅದರ ಝಲಕ್ ಇಲ್ಲಿದೆ.

'ಅನ್ನ, ಕೈ ತುತ್ತು ಕೊಟ್ಟಿದ್ದು ಕರ್ನಾಟಕ'

'ಅನ್ನ, ಕೈ ತುತ್ತು ಕೊಟ್ಟಿದ್ದು ಕರ್ನಾಟಕ'

"ವೀರ ಸಿಂಹ ರೆಡ್ಡಿ ಬಳಿಕ ಬೇರೆ ಎರಡ್ಮೂರು ದೊಡ್ಡ ದೊಡ್ಡ ಸಿನಿಮಾಗಳು ಬಂತು. ಆದರೆ, ನಾನು ಭೀಮ ಮುಗಿಸಬೇಕು ಅಂತ ಬಂದ್ಬಿಟ್ಟೆ. ಯಾಕಂದ್ರೆ, ಇಲ್ಲಿ ಅನ್ನ ಕೊಟ್ಟು,ನನಗೆ ಕೈ ತುತ್ತು ತಿನ್ನಿಸಿದಂತಹ ಕರ್ನಾಟಕ, ನನ್ನ ಕರ್ನಾಟಕದ ಜನತೆ. ಹೀಗಾಗಿ ಮೊದಲು ನಾನು ಇದಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತೇನೆ. ಇದಾದ್ಮೇಲೆ ಕಥೆ ತುಂಬಾ ಚೆನ್ನಾಗಿದ್ದರೆ, ಅಲ್ಲಿ ಹೀಗಿಯೂ ಮಾಡುತ್ತೇನೆ." ಎಂದು ದುನಿಯಾ ವಿಜಯ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

'ನಟ–ಖಳನಟ ಅಂತ ಬರಲ್ಲ'

'ನಟ–ಖಳನಟ ಅಂತ ಬರಲ್ಲ'

"ಪ್ರತಿ ಸಲನೂ ಇಂತಹ ಮಾತುಗಳು ಬರುತ್ತಲೇ ಇರುತ್ತವೆ. ಅದು ತುಂಬಾನೇ ಕಾಮನ್. ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಾವು ಗೌರವ ಕೊಡಬೇಕು ಅಷ್ಟೇ. ನಟನೆ ಅಂತ ಬಂದಾಗ, ನಟ-ಖಳನಟ ಅಂತ ಬರಲ್ಲ. ನಟನೆ ಹೇಗಿತ್ತು ಅಂತ ನಾವು ನೋಡುತ್ತೇವೆ. ನಾನು ಅಳಿಯೋದು ನಟನೆಯಲ್ಲಿ. ನಾನೇನು ನಟನೆಯಲ್ಲಿ ತಪ್ಪು ಮಾಡಿದ್ದೇನೆ? ಏನು ಸರಿ ಮಾಡಿದ? ನಾನೊಬ್ಬ ನಟನಾಗಿ ಯೋಚನೆ ಮಾಡುತ್ತಿರುತ್ತೇವೆ."

'ಭೀಮಾ' ಸಿನಿಮಾ ಅಥ್ಲೆಟಿಕ್ಸ್ ಗೇಮ್ ಇದ್ದಂಗೆ

'ಭೀಮಾ' ಸಿನಿಮಾ ಅಥ್ಲೆಟಿಕ್ಸ್ ಗೇಮ್ ಇದ್ದಂಗೆ

"ನಾವು ಭೀಮಾ ಬಗ್ಗೆ ಎಲ್ಲೂ ಏನನ್ನೂ ಮಾತಾಡೋಕೆ ಆಗಲಿಲ್ಲ. ಮುಹೂರ್ತ ಮಾಡಿದ್ವಿ, ಕೆಲಸ ಮಾಡಿದ್ವಿ ಅಷ್ಟೇ. ಆದರೆ, ಇವರೆಲ್ಲರೂ ಭಯಂಕರ ಕೆಲಸ ಕೊಡುತ್ತಾರೆ. ಇದೊಂತರ ಅಥ್ಲೆಟಿಕ್ಸ್ ಗೇಮ್ಸ್ ಇದ್ದಂಗೆ.ಇದರಲ್ಲಿ ಲಾಂಗ್ ಜಂಪ್, ಹೈ ಜಂಪ್, ಎಲ್ಲಾ ಇರುತ್ತೆ. ನಾನು ಇಲ್ಲಿ ನಗು ನಗುತ್ತಾ ಮಾತಾಡುತ್ತಿದ್ದೇನೆ. ಆದರೆ, ನಾನು ರಿಸರ್ಚ್ ಮಾಡುವಾಗ ಶತ್ರುಗಳಿಗೂ ಹೀಗೆ ಆಗಬಾರದು ಅಂತ ಅಂದ್ಕೊಂಡಿದ್ದೇನೆ. ನಾನು ನೋಡಿದ್ದೇನೋ, ಅದನ್ನು ತುಂಬಾನೇ ಹುಡುಕಾಟ ಮಾಡಿ ಕರೆದುಕೊಂಡಿದ್ದೇನೆ."

ನನಗೆ ಅನಿಸಿದರೆ ಮಾತ್ರ ನಿರ್ದೇಶನ

ನನಗೆ ಅನಿಸಿದರೆ ಮಾತ್ರ ನಿರ್ದೇಶನ

'ಸಲಗ' ಬಳಿಕ ಈಗ 'ಭೀಮಾ' ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಸಿನಿಮಾಗಳನ್ನು ಅವರೇ ನಿರ್ದೇಶನ ಮಾಡುತ್ತಾರಾ? ಇಂತಹದ್ದೊಂದು ಪ್ರಶ್ನೆ ದುನಿಯಾ ವಿಜಯ್ ಉತ್ತರ ಸ್ಪಷ್ಟವಾಗಿದೆ. "ಭೀಮಾ ಸಿನಿಮಾವನ್ನು ನಾನೇ ಮಾಡಬೇಕು ಅಂತ ಅನಿಸಿತು. ಜಡೇಶ್ ಕಥೆ ಅದ್ಭುತವಾಗಿದೆ. ಜಡೇಶ್ ಅವರೇ ಮಾಡಬೇಕು ಅಂತ ಅನಿಸಿತು. ಅದಕ್ಕೆ ಜಡೇಶ್ ನಾನು ಸುಮ್ಮನೆ ಬರುತ್ತೇನೆ. ನೀನು ಏನು ಹೇಳುತ್ತಿಯೋ ಅದನ್ನೇ ಮಾಡುತ್ತಿರುತ್ತೇನೆ ಅಂತ ಜಡೇಶ್ ಮೇಲೆ ಭಾರ ಹಾಕಿದ್ದೇನೆ." ಎಂದು ವಿಜಯ್ ನಿರ್ದೇಶನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
Duniya Vijay Says Kannada Is His First Choice After Veera Simha Reddy's Success, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X