»   » 'ಮಾಸ್ತಿಗುಡಿ' ಮೊದಲ ಶೋ ನೋಡಿದ ಪ್ರೇಕ್ಷಕರ ಅಭಿಪ್ರಾಯ

'ಮಾಸ್ತಿಗುಡಿ' ಮೊದಲ ಶೋ ನೋಡಿದ ಪ್ರೇಕ್ಷಕರ ಅಭಿಪ್ರಾಯ

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಮಾಸ್ತಿಗುಡಿ' 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆ ಆಗಿದ್ದು, ಫಸ್ಟ್ ಡೇ ಫಸ್ಟ್ ಶೋ ಅನ್ನು ಸಿನಿ ಪ್ರಿಯರು ಕಣ್ತುಂಬಿಕೊಂಡಿದ್ದಾರೆ.[ದುನಿಯಾ ವಿಜಯ್ 'ಮಾಸ್ತಿಗುಡಿ' ಭಾರತದ ಹಾಟ್ ಟಾಪಿಕ್]

'ಮಾಸ್ತಿಗುಡಿ' ಚಿತ್ರ ಸತ್ಯ ಘಟನೆ ಆಧಾರಿತ ಎಂಬ ಹಿನ್ನೆಲೆಯಲ್ಲಿ ಮತ್ತು ತಾರಾಬಳಗ, ಟ್ರೈಲರ್ ನಲ್ಲಿ ಕಂಡುಬಂದ ಅನಿಲ್ ಹಾಗೂ ಉದಯ್ ಖಳನಟರ ಅಬ್ಬರದಿಂದ ಸಿನಿ ರಸಿಕರಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿತ್ತು. ಇಂದು ತೆರೆಕಂಡಿರುವ 'ಮಾಸ್ತಿಗುಡಿ' ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಏನು ಹೇಳಿದ್ದಾರೆ ಇಲ್ಲಿ ನೋಡಿ..

ಇಂಟರ್ವಲ್ ವರೆಗೆ

" 'ಮಾಸ್ತಿಗುಡಿ' ಫಸ್ಟ್ ಹಾಫ್ ಫುಲ್ ಮನರಂಜನೆ. ಎಂಪಿ ಶಂಕರ್ ರವರ ಪ್ರೇತ ಸ್ಯಾಂಡಲ್ ವುಡ್ ಗೆ ಹಿಂದಿರಿಗಿದೆ" - ಎಸ್. ಶ್ಯಾಮ್ ಪ್ರಸಾದ್

ಹೇಗಿದೆ ಮೂವಿ?

" ಚಿತ್ರದ ಮೊದಲ ಅರ್ಧ ಸೂಪರ್ ಆಗಿದೆ. ನೋಡಬಹುದು" -KFIUpdate

ಸೆಕೆಂಡ್ ಹಾಫ್ ಬಗ್ಗೆ

"ಇಂಟರ್ವಲ್ ನಂತರ ನಿಯಂತ್ರಣ ಕಳೆದುಕೊಳ್ಳಬಹುದು. ಹೆಚ್ಚು ಫೋಕಸ್ ಬೇಕಾಗುತ್ತದೆ. ಸಿನಿಮಾ ಉತ್ತಮವಾಗಿದೆ, ನೋಡಬಹುದು" - ಎಸ್. ಶ್ಯಾಮ್ ಪ್ರಸಾದ್

ಡೀಸೆಂಟ್ ಸಿನಿಮಾ

"ಸಿನಿಮಾ ಡೀಸೆಂಟ್ ಆಗಿದೆ. ಸಾಧು ಕೋಕಿಲ ಸಂಯೋಜನೆ ಮಾಡಿರುವ 'ಚಿಪ್ಪಿನೊಳಗಡೆ' ಹಾಡು ಅದ್ಭುತವಾಗಿದೆ" - ಸಿನಿಲೋಕ

ವಿಜಯ್ ನಟನೆ ಬಗ್ಗೆ

" ದುನಿಯಾ ವಿಜಯ್ ವಿಭಿನ್ನ ಗೆಟಪ್ ಗಳಿಂದ ಗಮನಸೆಳೆಯುತ್ತಾರೆ. ಆಕ್ಷನ್ ದೃಶ್ಯಗಳು ರೋಮಾಂಚನಕಾರಿಯಾಗಿವೆ. ಸಾಧು ಕೋಕಿಲಾ ಸಂಗೀತ, ಛಾಯಾಗ್ರಹಣ ಸೂಪರ್. ಅಮೂಲ್ಯ ನಟನೆ ಚೆನ್ನಾಗಿದೆ" - TubeLight

ಬೆಸ್ಟ್ ಎಂಟರ್ ಟೈನರ್

" 'ಮಾಸ್ತಿಗುಡಿ' ಬೆಸ್ಟ್ ಎಂಟರ್ ಟೈನರ್. ಕ್ಲೈಮ್ಯಾಕ್ಸ್ ಹೆಚ್ಚು ಗಮನ ಸೆಳೆಯುತ್ತದೆ. ನನ್ನ ರೇಟಿಂಗ್ 3/5" - ಡಿ ರಾಜೇಶ್

English summary
Kannada Actor Duniya Vijay Starrer Kannada Movie 'Maastigudi' has hit the screens today(May 12th). Here is 'Maastigudi' movie twitter review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada