»   » ದುನಿಯಾ ವಿಜಯ್ 'ಮಾಸ್ತಿಗುಡಿ' ಭಾರತದ ಹಾಟ್ ಟಾಪಿಕ್

ದುನಿಯಾ ವಿಜಯ್ 'ಮಾಸ್ತಿಗುಡಿ' ಭಾರತದ ಹಾಟ್ ಟಾಪಿಕ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಬ್ಲಾಕ್ ಕೋಬ್ರಾ' ನಟ ದುನಿಯಾ ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇಂದು(ಮೇ 12) ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಕೂಡಿದ್ದು ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಸುದ್ದಿ ಮಾಡುತ್ತಿದೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ']

ಹೌದು, ಚಿತ್ರಕಥೆ, ಮೇಕಿಂಗ್, ಸಾಹಸ ದೃಶ್ಯಗಳು ಮತ್ತು ಇನ್ನೂ ಹಲವು ವಿಷಯಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಿನಿ ಪ್ರಿಯರ ಕಣ್ಣರಳಿಸಿರುವ ಸಿನಿಮಾ ಈಗ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು ಭಾರತದಾದ್ಯಂತ ಸದ್ದು ಮಾಡುತ್ತಿದೆ. ಮುಂದೆ ಓದಿರಿ.

ಟ್ವಿಟರ್ ಟ್ರೆಂಡಿಂಗ್ ನಲ್ಲಿ 'ಮಾಸ್ತಿಗುಡಿ'

ಬಿಡುಗಡೆಗೆ ಮುನ್ನವೇ 10.80 ಕೋಟಿ ಬೊಕ್ಕಸಕ್ಕೆ ಪಡೆದ 'ಮಾಸ್ತಿಗುಡಿ' ಚಿತ್ರ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಭಾರತದ ಟಾಪ್ ಟ್ರೆಂಡಿಂಗ್ ಟಾಫಿಕ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ[ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ']

ಭಾರತದ ಟ್ವಿಟರ್ ಟ್ರೆಂಡಿಂಗ್ ಟಾಪಿಕ್

ದುನಿಯಾ ವಿಜಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಮಿಂಚಿರುವ 'ಮಾಸ್ತಿಗುಡಿ' ಚಿತ್ರ ಭಾರತದ ಇಂದಿನ ಟ್ವಿಟರ್ ಟ್ರೆಂಡಿಂಗ್ ಟಾಪಿಕ್ ಗಳಲ್ಲಿ ಒಂದಾಗಿದ್ದು, ಭಾರತದಾದ್ಯಂತ ಸಿನಿ ಪ್ರಿಯರಿಂದ ಶುಭಾಶಯಗಳನ್ನು ಪಡೆಯುತ್ತಿದೆ.

'ಮಾಸ್ತಿಗುಡಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್

'ಮಾಸ್ತಿಗುಡಿ' ಚಿತ್ರ ಸತ್ಯ ಘಟನೆ ಆಧಾರಿತವಾಗಿದ್ದು, ಅತ್ಯುತ್ತಮ ಸಂದೇಶವನ್ನು ನೀಡುವ ಭರವಸೆ ನೀಡಿದೆ. ಆದ್ದರಿಂದ ಸ್ಯಾಂಡಲ್ ವುಡ್ ನ ನಟರು, ನಿರ್ದೇಶಕರು ಮಾತ್ರವಲ್ಲದೇ ಇತರೆ ಚಿತ್ರರಂಗದವರು 'ಮಾಸ್ತಿಗುಡಿ' ಹ್ಯಾಶ್ ಟ್ಯಾಗ್ ಬಳಸಿ ಶುಭ ಕೋರಿ ಟ್ವೀಟ್ ಮಾಡುತ್ತಿದ್ದಾರೆ.

ನಾಗಶೇಖರ್ ನಿರ್ದೇಶನ

ಇಂದು ಸ್ಯಾಂಡಲ್ ವುಡ್ ನಲ್ಲಿ ಎರಡು ಸಂತೋಷದ ಕ್ಷಣಗಳು ಸಾಕ್ಷಿಯಾಗಿವೆ. ನಾಗಶೇಖರ್ ನಿರ್ದೇಶನ ಮಾಡಿರುವ 'ಮಾಸ್ತಿಗುಡಿ' ಚಿತ್ರ ಬಿಡುಗಡೆಯಾಗಿದ್ದು ಭಾರತದಾದ್ಯಂತ ಹಾಟ್ ಟಾಪಿಕ್ ಆಗಿದೆ. ಇನ್ನೊಂದು ಕಡೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅಮೂಲ್ಯ ರವರ ಮದುವೆ ಜಗದೀಶ್ ಅವರೊಂದಿಗೆ ನೆರವೇರುತ್ತಿದೆ.

English summary
Duniya Vijay Starrer 'Maastigudi' Movie trending in twitter. 'Maastigudi' movie is directed by Nagashekar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X