"ಕನ್ನಡ ಪಠ್ಯದಲ್ಲಿ 'ಅ' ಎಂದರೆ 'ಅಪ್ಪು' ಎಂದಾಗಲಿ" ಭೀಮನ ಮಹದಾಸೆ: ಏನಂದ್ರು ನೆಟ್ಟಿಗರು?

ಇಂದು(ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಅಪ್ಪು ಅಭಿಮಾನಿಗಳು ಎಲ್ಲಿದ್ದಾರೋ ಅಲ್ಲೆಲ್ಲಾ ಬರ್ತ್‌ಡೇ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಪುನೀತ್ ನಡೆದು ಬಂದ ಹಾದಿಯಲ್ಲೇ ಫ್ಯಾನ್ಸ್ ಕೂಡ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗೇ ಕನ್ನಡ ಚಿತ್ರರಂಗದ ಗಣ್ಯರು ಕೂಡ ಅಪ್ಪು ಅಭಿಮಾನಿಗಳಿಗೆ ಶುಭಕೋರುತ್ತಿದ್ದಾರೆ.

ಇತ್ತ ಸ್ಯಾಂಡಲ್‌ವುಡ್‌ನ 'ಭೀಮ' ದುನಿಯಾ ವಿಜಯ್ ಪವರ್‌ಸ್ಟಾರ್‌ಗೆ ಶುಭಕೋರಿದ್ದಾರೆ. ಇದರೊಂದಿಗೆ ವಿಶೇಷವಾದ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅಪ್ಪು ಬಗ್ಗೆ ದುನಿಯಾ ವಿಜಯ್ ವ್ಯಕ್ತಪಡಿಸಿದ ಆಸೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Duniya Vijay Wants Let AA Means Appu in Kannada Text Books; Wishes Actor on his Birthday

ದುನಿಯಾ ವಿಜಯ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಬ್ಲ್ಯಾಕ್ ಕೋಬ್ರಾ ನಿರ್ದೇಶನಕ್ಕೆ ಇಳಿದಾಗ, ಪುನೀತ್ ರಾಜ್‌ಕುಮಾರ್ ಬೆಂಬಲಕ್ಕೆ ನಿಂತಿದ್ದರು. ವಿಜಯ್ ಕಮ್‌ಬ್ಯಾಕ್ ಮಾಡಿದ ಸಿನಿಮಾದ ಕಾರ್ಯಕ್ರಮಕ್ಕೂ ಅತಿಥಿಯಾಗಿ ಹೋಗಿದ್ದರು. ಅದೇ ಅನ್ಯೋನ್ಯತೆ ಹಾಗೇ ಮುಂದುವರೆದಿದೆ.

'ಅ' ಅಂದರೆ ಅಪ್ಪು ಎಂದಾಗಲಿ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ದುನಿಯಾ ವಿಜಯ್ ವಿಶೇಷವಾಗಿ ಶುಭಕೋರಿದ್ದಾರೆ. ತಮ್ಮ 'ಭೀಮ' ಸಿನಿಮಾದ ಪೋಸ್ಟರ್‌ನಲ್ಲಿ ಅಪ್ಪು ಫೋಟೊ ಹಾಕಿ, ಅದರ ಮೇಲೆ "ಕನ್ನಡ ಪಠ್ಯಪುಸ್ತಕದಲ್ಲಿ ಅ ಎಂದರೆ ಅಪ್ಪು ಎಂದಾಗಲಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

Duniya Vijay Wants Let AA Means Appu in Kannada Text Books; Wishes Actor on his Birthday

ದುನಿಯಾ ವಿಜಯ್ ವಿಶೇಷ ಮನವಿಗೆ ಪವರ್‌ಸ್ಟಾರ್ ಅಭಿಮಾನಿಗಳು ಹಾಗೂ ದುನಿಯಾ ವಿಜಯ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅದೇ ಮತ್ತೆ ಕೆಲವರು ಬೇಡ ಎಂದು ಹೇಳುತ್ತಿದ್ದಾರೆ. ಅದ್ಯಾಕೆ ಅನ್ನೋದಕ್ಕೆ ಕಾರಣವನ್ನೂ ನೀಡುತ್ತಿದ್ದಾರೆ.

'ಭೀಮ'ನ ಆಸೆಗೆ ನೆಟ್ಟಿಗರು ಏನಂತಿದ್ದಾರೆ.

"ಕನ್ನಡ ಪಠ್ಯಪುಸ್ತಕದಲ್ಲಿ ಅ ಎಂದರೆ ಅಪ್ಪು ಎಂದಾಗಲಿ" ಎನ್ನುವುದು ದುನಿಯಾ ವಿಜಯ್ ಆಸೆ. ಈ ಆಸೆ ಕಂಡು ಹಲವರು ಖುಷಿ ಪಟ್ಟಿದ್ದಾರೆ. ಒಬ್ಬರು "ಜೈ ದುನಿಯಾ ಬಾಸ್.. ಜೈ ಅಪ್ಪು ಬಾಸ್" ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ ಕೆಲವರು ಅ ಎಂದರೇ ಅಮ್ಮ ಅಂತಾನೇ ಇರಲಿ ಎನ್ನುತ್ತಿದ್ದಾರೆ. ನೆಟ್ಟಿಗರೊಬ್ಬರು "ಅ ಎಂದರೆ ಅಮ್ಮ ಎಂದಾಗಲಿ. ಅಮ್ಮನ ಪ್ರೀತಿಯಲಿ ಅಪ್ಪುವಿಗೆ ಅಪ್ಪಿಕೊಳ್ಳುವ ಲವ್ ಯೂ ..ಅಪ್ಪು " ಎಂದು ಹೇಳುತ್ತಿದ್ದಾರೆ.

ಅದೇ ಮತ್ತೊಬ್ಬರು "ಅ ಅಂದರೆ ಯಾವತ್ತಿದ್ರೂ ಅಮ್ಮ.. ಅಮ್ಮನ ಮುಂದೆ ಯಾವ ಸೆಲೆಬ್ರಿಟಿ ಇಲ್ಲ. ಕನ್ನಡದ ಪಠ್ಯಪುಸ್ತಕದಲ್ಲಿ ಶತಮಾನಗಳಿಂದ ಇರುವ ಅ ಎಂದರೆ ಅರ್ಥ ಅಮ್ಮ. ಎಂದೆಂದಿಗೂ ಅ ಅಂದರೆ ಅಮ್ಮನೇ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

'ಭೀಮ' ಸಿನಿಮಾದಲ್ಲಿ ವಿಜಯ್ ಬ್ಯುಸಿ

ದುನಿಯಾ ವಿಜಯ್ 'ಭೀಮ' ಸಿನಿಮಾದಲ್ಲಿ ನಿರತರಾಗಿದ್ದಾರೆ. 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ಬಾಲಯ್ಯನ ಎದುರು ಖಳನಾಯಕನಾಗಿ ಅಬ್ಬರಿಸಿದ ಬಳಿಕ ಮತ್ತೆ 'ಭೀಮ' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವತ: ದುನಿಯಾ ವಿಜಯ್ ನಟಿಸಿ, ನಿರ್ದೇಶನ ಕೂಡ ಮಾಡುತ್ತಿರುವುದರಿಂದ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ದುನಿಯಾ ವಿಜಯ್ ನಿರ್ದೇಶಿಸಿದ ಮೊದಲ ಸಿನಿಮಾ 'ಸಲಗ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ವಿಜಯ್ ಕಮ್‌ಬ್ಯಾಕ್ ಮಾಡಿದ್ದ ಈ ಸಿನಿಮಾ ಗೆಲುವನ್ನೂ ತಂದುಕೊಟ್ಟಿತ್ತು. ಈ ಕಾರಣಕ್ಕೆ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲಿ ಸಿನಿಮಾ ಮುಗಿಸಿ, ರಿಲೀಸ್ ಮಾಡಬಹುದು.

More from Filmibeat

English summary
Duniya Vijay Wants Let AA Means Appu in Kannada Text Books; Wishes Actor on his Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X