»   » ದುನಿಯಾ ವಿಜಯ್, ನಾಗರತ್ನ ಸಂಧಾನ ವಿಫಲ

ದುನಿಯಾ ವಿಜಯ್, ನಾಗರತ್ನ ಸಂಧಾನ ವಿಫಲ

Posted By:
Subscribe to Filmibeat Kannada
Duniya Vijay (file photo)
ಗಂಡ ಹೆಂಡತಿ ಪ್ರೀತಿ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ; ಎಲ್ಲರಿಗೂ ಗೊತ್ತಾಗುವುದು ಜಗಳ ಮಾಡಿದರೆ ಮಾತ್ರ ಎಂಬ ಮಾತೊಂದಿದೆ. ನಟ ದುನಿಯಾ ವಿಜಯ್ ಜೀವನದಲ್ಲಿ ಈ ಮಾತು ಅಕ್ಷರಶಃ ನಿಜವಾಯಿತು. ಅವರ ದಾಂಪತ್ಯ ಕಲಹ ಈಗ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತೇ ಇದೆ.

ವಿಜಯ್ ಅವರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಮೇ 28) ಅವರ ಕೇಸಿನ ವಿಚಾರಣೆ ನಡೆಯಿತು. ನ್ಯಾಯಾಧೀಶರು ದುನಿಯಾ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿದರು.

ಆದರೆ ಇಬ್ಬರ ಮನವೊಲಿಸಲು ಸಾಧ್ಯವಾಗಿಲ್ಲ. "ತಮ್ಮ ಪತ್ನಿಯಿಂದ ನನಗೆ ಸಾಕಷ್ಟು ಅವಮಾನವಾಗಿದೆ. ನನ್ನ ಗೌರವ, ಘನತೆಗೆ ಧಕ್ಕೆಯುಂಟಾಗಿದೆ" ಎಂದು ವಿಜಯ್ ಈ ಸಂದರ್ಭದಲ್ಲಿ ತಿಳಿಸಿದರು ಎನ್ನಲಾಗಿದೆ.

ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ಮೂರು ಮಕ್ಕಳನ್ನು ಸಾಕಿ ಸಲುಹಬೇಕಾಗಿದೆ. ತಮಗೆ ಜೀವನಾಂಶ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಇನ್ನೊಂದು ಅರ್ಜಿಯಲ್ಲಿ ವಿವಾಹ ವಿಚ್ಛೇದನ ಕೊಡುವುದಿಲ್ಲ ಎಂದೂ ತಿಳಿಸಿದ್ದಾರೆ.

ಇಬ್ಬರ ವಾದ ವಿವಾದಗಳನ್ನು ಕೇಳಿದ ನ್ಯಾಯಾಲಯ ವಿಚಾರಣೆಯನ್ನು ಜು.2ಕ್ಕೆ ಮುಂದೂಡಿದೆ. ವಿಜಯ್ ಅವರಿಗೆ ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ನ್ಯಾಯಾಲಯಕ್ಕೆ ನಾಗರತ್ನ ಅವರು ಆಟೋದಲ್ಲಿ ಬಂದಿದ್ದರು. (ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ 25 ಕಾರಣಗಳು)

ಇನ್ನು ದುನಿಯಾ ವಿಜಯ್ ಅವರು ತಮ್ಮ ಪರ ವಕೀಲರಾದ ಶಂಕರಪ್ಪ ಅವರ ಜೊತೆ ಬಂದಿದ್ದರು. ಶಂಕರಪ್ಪ ಅವರು ಖ್ಯಾತ ಕ್ರಿಮಿನಲ್ ಲಾಯರ್. ಈ ಹಿಂದೆ ಅವರು ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ವಿನಿ ವಿಂಕ್ ಶಾಸ್ತ್ರಿ ಕೇಸ್ ಗಳನ್ನು ಹ್ಯಾಂಡಲ್ ಮಾಡಿದ್ದಾರೆ. ಮತ್ತೊಮ್ಮೆ ಖ್ಯಾತ ವಕೀಲ ಎಂಟಿ ನಾಣಯ್ಯ ಅವರ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)

English summary
The divorce case filed by actor Duniya Vijay came up before the Bangalore family court on 28th May. The actor filed for divorce before the family court earlier this year. Now the case adjourned to 2nd July 2013.
Please Wait while comments are loading...