ವಿಜಯ್ ಕಿರಿಯ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಮೊನಿಷಾ ಏನ್ಮಾಡ್ತಿದ್ರು?

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರೇ ನಿರ್ದೇಶಿಸಿದ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಇದೇ ಖುಷಿಯಲ್ಲಿ ಇನ್ನೂ ಎರಡು ಸಿನಿಮಾಗಳ ಕೆಲಸ ಜೋರಾಗಿಯೇ ನಡೆಯುತ್ತಿದೆ. ಅದೇ ಮತ್ತೊಂದು ಕಡೆ ತಮ್ಮ ಇಬ್ಬರು ಹೆಣ್ಣು ಮಕ್ಕಳೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಕಾರಣಕ್ಕೆ ದುನಿಯಾ ವಿಜಯ್ ಡಬಲ್ ಖುಷಿಯಲ್ಲಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಮೊದಲನೇ ಪುತ್ರಿ ರಿತಾನ್ಯಾ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದ್ದರು. ಅಪ್ಪ ಸಿನಿಮಾ ಮೂಲಕವೇ ಮೊದಲ ಮಗಳು ರಿತಾನ್ಯಾ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾ ಇನ್ನೂ ಸೆಟ್ಟೇರುವ ಮೊದಲೇ ದುನಿಯಾ ವಿಜಯ್ ಕಿರಿಯ ಪುತ್ರಿ ಮೊನಿಷಾ ಕೂಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಟೈಟಲ್ ಕೂಡ ಅನೌನ್ಸ್ ಆಗಿದೆ.

Duniya Vijay younger daughter Monisha debut movie City Lights here is detail about her preparation

ಮೊನಿಷಾ ವಿಜಯ್ ಕುಮಾರ್ ನಟಿಸುತ್ತಿರುವ ಮೊದಲ ಸಿನಿಮಾದ ಟೈಟಲ್ 'ಸಿಟಿ ಲೈಟ್ಸ್'. ಈ ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ, ದುನಿಯಾ ವಿಜಯ್ ಅವರೇ ಕಿರಿಯ ಮಗಳ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ವಿಷಯವನ್ನು ಸ್ವತ: ಮೊನಿಷಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. ಹಾಗಂತ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಬೇರೊಂದು ವೃತ್ತಿಯಲ್ಲಿ ಬ್ಯುಸಿಯಾಗಿದ್ದರು. ಬಳಿಕ ನಟಿಯಾಗ್ಬೇಕು ಅಂತ ನಿರ್ಧರಿಸಿದ್ದಾಗಲೂ ತರಬೇತಿ ಪಡೆದು ಎಂಟ್ರಿ ಕೊಡುತ್ತಿದ್ದಾರೆ.

ವಿಜಯ್ ಪುತ್ರಿ ಮೊನಿಷಾ ಹಿನ್ನೆಲೆಯೇನು?

ದುನಿಯಾ ವಿಜಯ್ ಪುತ್ರಿ ಮೊನಿಷಾ ಅಪ್ಪನ ಹೆಸರು ಹೇಳಿಕೊಂಡು ಸಿನಿಮಾ ಬಂದಿಲ್ಲ. ಮೊನಿಷಾ ಸಿನಿಮಾರಂಗಕ್ಕೆ ಕಾಲಿಡಬೇಕು ಅಂತ ನಿರ್ಧರಿಸಿದ್ದಾಗ, ನಟನೆಯ ಬಗ್ಗೆ ತರಬೇತಿ ಪಡೆದಿದ್ದಾರೆ. ಅದೂ ಭಾರತದಲ್ಲಿ ಅಲ್ಲ. ಒಂದಷ್ಟು ದಿನ ನ್ಯೂಯಾರ್ಕ್‌ನಲ್ಲಿ ಮೊನಿಷಾ ಅಭಿನಯ ಹಾಗೂ ಸಿನಿಮಾರಂಗದ ಕೆಲವು ಮಜಲುಗಳ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ. ನ್ಯೂಯಾರ್ಕ್‌ನಲ್ಲಿ ತರಬೇತಿ ಮುಗಿಸಿ ಕೆಲವು ದಿನಗಳ ಹಿಂದಷ್ಟೇ ತರಬೇತಿ ಮುಗಿಸಿ ಹಿಂತಿರುಗಿದ್ದರು. ಬೆಂಗಳೂರಿಗೆ ಮರಳುತ್ತಿದ್ದಂತೆ ತಂದೆಯೇ ನಿರ್ದೇಶಿಸುತ್ತಿರುವ 'ಸಿಟಿ ಲೈಟ್ಸ್' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

ಮೊನಿಷಾ ಫ್ಯಾಷನ್ ಡಿಸೈನರ್

ಮೊನಿಷಾ ವಿಜಯ್ ಚಿಕ್ಕಂದಿನಿಂದಲೂ ಹೈಪರ್ ಆಕ್ಟಿವ್. ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಫ್ಯಾಷನ್ ಡಿಸೈನರ್ ಆಗಿದ್ದರು. ಫ್ಯಾಷನ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಮೊನಿಷಾ ತಮ್ಮದೇ ಬ್ರ್ಯಾಂಡ್ ಒಂದನ್ನು ಹುಟ್ಟಾಕಿದ್ದರು. ಅದಕ್ಕೆ 'ಶುಗರ್ ಬೈ ಮೊನಿಷಾ' ಅಂತಲೂ ಹೆಸರಿಟ್ಟಿದ್ದರು. ತಮ್ಮ ಡಿಸೈನರ್ ವೇರ್‌ಗಳನ್ನು ಮಾರುಕಟ್ಟೆಗೂ ಮೊನಿಷಾ ಬಿಟ್ಟಿದ್ದರು. ಅಷ್ಟೇ ಅಲ್ಲ ಮೊನಿಷಾ ಕೆಲವು ಫ್ಯಾಷನ್ ಶೋಗಳಲ್ಲಿ ರ್‍ಯಾಂಪ್ ವಾಕ್ ಕೂಡ ಮಾಡಿದ್ದಾರೆ.

ಬಾಲ್ಯದಿಂಲೂ ನಟಿಯಾಗುವ ಕನಸು

ಮೊನಿಷಾ ವಿಜಯ್ ಕುಮಾರ್‌ಗೆ ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಆಸೆ. ಹೀಗಾಗಿ ಬೆಂಗಳೂರಿನಲ್ಲಿ ಬ್ಯಾಚುಲರ್ ಆಫ್ ಥಿಯೇಟರ್‌ ಕೋರ್ಸ್ ಮುಗಿಸಿದ್ದರು. ನಟಿಯಾಗಬಹುದು ಎಂಬ ಕಾನ್ಫಿಡೆನ್ಸ್ ಬಂದ ಬಳಿಕ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ನಟನೆಯಲ್ಲಿ ಒಂದು ವರ್ಷದ ಕೋರ್ಸ್ ಮುಗಿಸಿ ಬಂದಿದ್ದಾರೆ. ಸದ್ಯ ಚೊಚ್ಚಲ ಸಿನಿಮಾ 'ಸಿಟಿ ಲೈಟ್ಸ್'ಗೆ ನಾಯಕಿಯಾಗಿದ್ದಾರೆ.

ಚೊಚ್ಚಲ ಸಿನಿಮಾ ಬಗ್ಗೆ ಏನಂದ್ರು?

"ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭ ದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ 'ಸಿಟಿ ಲೈಟ್ಸ್'ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. 'ಸಲಗ' ಹಾಗೂ 'ಭೀಮ' ಸಿನಿಮಾದ ಯಶಸ್ಸಿನ ನಂತರ ನನ್ನ ಅಪ್ಪ ವಿಜಯಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ. ಇಂತಹ ಅದ್ಭುತ ತಂಡದೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ. ಧನ್ಯವಾದಗಳು" ಎಂದು ಚೊಚ್ಚಲ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

More from Filmibeat

English summary
Duniya Vijay second daughter Monisha debut movie City Lights:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X