"ಸಿನಿಮಾವನ್ನು ಪ್ರಮೋಟ್ ಮಾಡಿಕೊಳ್ಳುವುದಕ್ಕೆ ಸರ್ಕಾರನೂ ಬೇಕು. ಜನರೂ ಬೇಕು"; ಉಪಮುಖ್ಯಮಂತ್ರಿ ಡಿಕೆಶಿ

ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ ಉದ್ಘಾಟನೆ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕನ್ನಡ ಸಿನಿಮಾ ಸ್ಟಾರ್‌ಗಳು ಹಾಗೂ ರಾಜಕೀಯ ಮುಖಂಡರು ಡಿಕೆ ಶಿವಕುಮಾರ್ ಹೇಳಿಕೆಯನ್ನು ವಿರೋಧಿಸಿದ್ದರು. ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರಿಂದ ಡಿಕೆಶಿ ಹೇಳಿಕೆಯನ್ನು ಖಂಡಿಸಿದ್ದರು.

ಇನ್ನೊಂದು ಕಡೆ ರಾಜಕೀಯ ಕ್ಷೇತ್ರದಿಂದಲೂ ವಿರೋಧ ವ್ಯಕ್ತವಾಗಿತ್ತು. ಬಿ.ವೈ. ವಿಜಯೇಂದ್ರ, ಆರ್.ಅಶೋಕ್ ಅಂತಹ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಬೆನ್ನಲ್ಲೇ ಡಿಕೆ ಶಿವಕುಮಾರ್ ಮತ್ತೆ ಪ್ರಕ್ರಿಯೆ ನೀಡಿದ್ದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಟೀಕೆ ಮಾಡುವವರು ಮಾಡಲಿ ಅಂತಾನೇ ನಟ್ಟು, ಬೋಲ್ಡು ಹೇಳಿಕೆಯನ್ನು ನೀಡಿದ್ದಾಗಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಡಿಕೆ ಶಿವಕುಮಾರ್ ಮತ್ತೆ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.

Dy CM DK Shivakumar stand with his controversial Nattu Bolt statement against film actors

ನಟ್ಟು, ಬೋಲ್ಟ್ ಟೈಟ್ ಮಾಡುತ್ತೇನೆ ಎನ್ನುವ ವಿಚಾರ ವಿವಾದಕ್ಕೆ ತಿರುಗಿದೆ. ಸ್ಯಾಂಡಲ್‌ವುಡ್‌ನಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿದ್ದರೂ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಟೀಕೆ ಮಾಡಲಿ ಅಂತಾನೇ ಹೇಳಿದ್ದು. ಅವರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಅಂತ ನನಗೆ ಗೊತ್ತಿದೆ. ಸಹಾಯ ಮಾಡಿಸಿಕೊಂಡವರಿಗೂ ಗೊತ್ತಿದೆ. ನಾನು ಅವರಿಗೆ ಹೇಳೋದು ಏನಂದ್ರೆ, ಇದು ರಾಜ್ಯದ ಕಾಸು. ನೆಲ, ಜಲ, ನಿಮ್ಮ ಭಾಷೆ. ಈಗ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಮಗೆ ಮಾಡಿದ್ದೇವಾ? ಅವರ ಚಿತ್ರ ಬೆಳೆಯಲಿ ಅಂತಾ ಮಾಡಿದ್ದೇವೆ. ಅವರ ಕಾರ್ಯಕ್ರಮವನ್ನು ಅವರು ಮಾಡಬೇಕು. ಬೆಳಗ್ಗೆಯಿಂದ ಸಂಜೆವರೆಗೂ ನಾವು ಮಾಡುವುದಕ್ಕೆ ಆಗುತ್ತಾ?" ಎಂದು ಕಿಡಿಕಾರಿದ್ದಾರೆ.

ನಿನ್ನೆ (ಮಾರ್ಚ 4) ಹಿರಿಯ ನಿರ್ದೇಶಕ ನಾಗಾಭರಣ ಆಹ್ವಾನ ಕೊನೆಯ ಕ್ಷಣದಲ್ಲಿ ನೀಡಲಾಗಿತ್ತು. ಅಲ್ಲದೆ ಆಹ್ವಾನವನ್ನು ಪೋಸ್ಟ್ ಮೂಲಕ ಕಳುಹಿಸಿದ್ದರು. ಇದು ಸರಿಯಾದ ಮಾರ್ಗ ಅಲ್ಲವೆಂದು ಹೇಳಿದ್ದರು. ನಾಗಾಭರಣ ಹೇಳಿಕೆಗೂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

"ನಾಗಾಭರಣಗೆ ಆಹ್ವಾನ ನೀಡಿಲ್ಲದೆ ಇರಬಹುದು. ನಮ್ಮ ಇಲಾಖೆಯಲ್ಲಿ ತಪ್ಪಿದೆಯೋ ಎಲ್ಲಿದೆಯೋ.. ಆದರೆ ಕಾರ್ಯಕ್ರಮ ಅವರದ್ದು. ನನಗೆ ಗೊತ್ತು ಅವರು ಟೀಕೆ ಮಾಡುತ್ತಾರೆ. ಅಂತ ಆದರೂ ಎಚ್ಚರಿಕೆ ಕೊಟ್ಟಿದ್ದೇನೆ. ನನಗೆ ಅವರು ಟೀಕೆ ಮಾಡುತ್ತಿರುವುದರಲ್ಲೇನು ಬೇಜಾರು ಇಲ್ಲ. ನಾವು ತಪ್ಪು ಮಾಡಿದರೆ ನಾವು ಸರಿಪಡಿಸಿಕೊಳ್ಳುತ್ತೇವೆ. ಅವರು ಮಾಡಿದರೆ ಅವರು ಸರಿಪಡಿಸಿಕೊಳ್ಳಬೇಕು. ಅವರ ಕಾರ್ಯಕ್ರಮವಿದು." ಎಂದಿದ್ದಾರೆ.

ಹಾಗೇ ಸಿನಿಮಾ ಮಂದಿ ಆಕ್ರೋಶಕ್ಕೆ ಮತ್ತೊಂದು ತಿರುಗೇಟು ಕೊಟ್ಟಿದ್ದಾರೆ. ಸಿನಿಮಾ ಇಲ್ಲದೆ ನಾವು ಬದುಕಬಲ್ಲೆವು ಎಂದು ಹೇಳಿದ್ದಾರೆ. "ಫಿಲ್ಮ್ ಇಲ್ಲದೆ ಬದುಕುವುದಕ್ಕೆ ನಮಗೆ ಶಕ್ತಿಯಿದೆ. ಅವರು ಸಿನಿಮಾವನ್ನು ಪ್ರಮೋಟ್ ಮಾಡಿಕೊಳ್ಳುವುದಕ್ಕೆ ಸರ್ಕಾರನೂ ಬೇಕು. ಜನರೂ ಬೇಕು." ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿನಿಮಾ ಮಂದಿಗೆ ತಿರುಗೇಟು ಕೊಟ್ಟಿದ್ದಾರೆ.

ಡಿಕೆ ಶಿವಕುಮಾರ್ ಹೇಳಿಕೆಯನ್ನು ಕನ್ನಡ ಚಿತ್ರರಂಗದ ಹಿರಿಯರೆಲ್ಲರೂ ಖಂಡಿಸಿದ್ದಾರೆ. ಎಸ್‌ವಿ ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ರಮ್ಯಾ, ಸಾ.ರಾ.ಗೋವಿಂದು ಹಾಗೂ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ವಿರೋಧವನ್ನು ವ್ಯಕ್ತಪಡಿಸಿದ್ದರು. ಸದ್ಯ ವಿರೋಧ ವ್ಯಕ್ತವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ. ಈಗ ಡಿಕೆ ಶಿವಕುಮಾರ್ ಹೇಳಿಕೆಯನ್ನು ಕಂಗನಾ ರಣಾವತ್ ಕೂಡ ವಿರೋಧಿಸಿದ್ದು, ಬಾಲಿವುಡ್ ನಟಿಯ ಹೇಳಿಕೆ ಕೂಡ ಚರ್ಚೆಯಾಗುತ್ತಿದೆ.

More from Filmibeat

English summary
Dy CM DK Shivakumar stand with his controversial Nattu Bolt statement against film actors;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X