twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ ಡೌನ್ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕಿ ಸುಮನಾ ಕಿತ್ತೂರು

    |

    ವಿಭಿನ್ನ ಕಥಾಹಂದರದ ಮತ್ತು ಕಾದಂಬರಿ ಆಧಾರಿತ ಪ್ರಯೋಗಾತ್ಮಕ ಚಿತ್ರಗಳಿಂದ ಹೆಸರು ಗಳಿಸಿರುವ ನಿರ್ದೇಶಕಿ ಸುಮನ್ ಕಿತ್ತೂರು ಲಾಕ್ ಡೌನ್ ನಡುವೆಯೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

    Recommended Video

    ನಾನು ರೆಬೆಲ್.. ನನ್ನ ಗೆಳೆಯ ದರ್ಶನ್ ಡಬಲ್ ರೆಬೆಲ್.. | Munduvareda Adhyaya | Aditya | Darshan

    ಪುದುಚೆರಿಯಲ್ಲಿ ಸರಳ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಅವರೊಂದಿಗೆ ಸುಮನ್ ಕಿತ್ತೂರು ಹೊಸ ಬದುಕನ್ನು ಆರಂಭಿಸಿದರು. ಹಲವು ದಿನಗಳ ಹಿಂದೆಯೇ ಮದುವೆ ನಡೆದಿದ್ದು, ಈಗ ಬಹಿರಂಗವಾಗಿದೆ.

    ಶಿವಮೊಗ್ಗ ಮೂಲದ ಶ್ರೀನಿವಾಸ್ ಅವರು ಪುದುಚೆರಿಯ ಒರೋವಿಲ್‌ನಲ್ಲಿ ಸಾಪ್ಟ್‌ವೇರ್ ಎಂಜಿನಿಯರ್ ಆಗಿದ್ದು, ಪುದುಚೆರಿಯಲ್ಲಿಯೇ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಸುಮನ್ ಕೂಡ ಕೆಲವು ಸಮಯದಿಂದ ಪುದುಚೆರಿಯಲ್ಲಿಯೇ ವಾಸವಾಗಿದ್ದರು. ಪತ್ರಕರ್ತ ಅಗ್ನಿ ಶ್ರೀಧರ್ ಅವರ ಗರಡಿಯಲ್ಲಿ ಪತ್ರಕರ್ತರಾಗಿ ಬೆಳೆದ ಸುಮನ್ ಅವರು ರೌಡಿಸಂ, ರಾಜಕಾರಣ ಮತ್ತು ಸಾಮಾಜಿಕ ಸಂಗತಿಗಳನ್ನು ದಿಟ್ಟತನದಿಂದ ಚಿತ್ರಿಸಿದ ಮಹಿಳಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

    ಲಾಕ್‌ಡೌನ್‌ನಿಂದಾಗಿ ಪುದುಚೆರಿಯಲ್ಲಿ ಮದುವೆ

    ಲಾಕ್‌ಡೌನ್‌ನಿಂದಾಗಿ ಪುದುಚೆರಿಯಲ್ಲಿ ಮದುವೆ

    ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯದ ಮೂಲಕ ಮಾದರಿ ಸಾಂಸಾರಿಕ ಬದುಕನ್ನು ಆರಂಭಿಸಲು ಸುಮನ್ ಮತ್ತು ಶ್ರೀನಿವಾಸ್ ಬಯಸಿದ್ದರು. ಆದರೆ ಲಾಕ್ ಡೌನ್ ಕಾರಣದಿಂದಾಗಿ ಅವರು ಪುದುಚೆರಿಯಲ್ಲಿಯೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

    ಮೈಸೂರಿನ ಪಿರಿಯಾಪಟ್ಟಣ

    ಮೈಸೂರಿನ ಪಿರಿಯಾಪಟ್ಟಣ

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸಣ್ಣ ಹಳ್ಳಿಯವರಾದ ಸುಮನ್, 2007ರಲ್ಲಿ ಬಿಡುಗಡೆಯಾದ ಕೆ.ಎಂ. ಚೈತನ್ಯ ನಿರ್ದೇಶನದ 'ಆ ದಿನಗಳು' ಚಿತ್ರದಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಜತೆಗೆ ಸಾಹಿತ್ಯವನ್ನೂ ರಚಿಸಿದ್ದರು.

    ನಿರ್ದೇಶನದ ಮೊದಲ ಚಿತ್ರ

    ನಿರ್ದೇಶನದ ಮೊದಲ ಚಿತ್ರ

    2008ರಲ್ಲಿ ಅವರು ದುನಿಯಾ ವಿಜಯ್ ನಾಯಕರಾಗಿದ್ದ 'ಸ್ಲಂ' ಬಾಲ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿ ಗುರುರಿಸಿಕೊಂಡರು. ಮರು ವರ್ಷ ನಿರ್ದೇಶಿಸಿದ್ದ, ಯಶ್ ನಾಯಕರಾಗಿದ್ದ 'ಕಳ್ಳರ ಸಂತೆ' ಚಿತ್ರ ತೀರ್ಪುಗಾರರ ವಿಶೇಷ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು.

    ಎದೆಗಾರಿಕೆ ಚಿತ್ರ

    ಎದೆಗಾರಿಕೆ ಚಿತ್ರ

    ಅವರ ನಿರ್ದೇಶನದ ಕೌಶಲ ಸಾಬೀತಾಗಿದ್ದು 'ಎದೆಗಾರಿಕೆ' ಚಿತ್ರದಲ್ಲಿ. ಆದಿತ್ಯ ನಾಯಕರಾಗಿದ್ದ ಈ ಚಿತ್ರ ಅವರಿಗೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು. ಮೂರನೇ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕಿ ಫಿಲಂ ಫೇರ್ ಪ್ರಶಸ್ತಿ ಕೂಡ ಒಲಿಯಿತು. ಭೂಗತ ಲೋಕದ ಕಥೆಯನ್ನು ವಿಭಿನ್ನ ರೀತಿಯಲ್ಲಿ ಅವರು ಕಟ್ಟಿಕೊಟ್ಟಿದ್ದರು. ಈ ಚಿತ್ರಕ್ಕೆ ಅವರು ಬರೆದ 'ನೀನೊಂದು ಮುಗಿಯದ ಮೌನ' ಹಾಡು ಸೂಪರ್ ಹಿಟ್ ಆಗಿತ್ತು.

    ಕಿರಗೂರಿನ ಗಯ್ಯಾಳಿಗಳು

    ಕಿರಗೂರಿನ ಗಯ್ಯಾಳಿಗಳು

    ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಜನಪ್ರಿಯ ಕಾದಂಬರಿಯನ್ನು ಸಿನಿಮಾಕ್ಕೆ ಅಳವಡಿಸಿದ ಖ್ಯಾತಿ ಅವರು. ಸಂಕೀರ್ಣ ಕಥೆಯನ್ನು ಅವರು ಸಿನಿಮಾ ರೂಪಕ್ಕೆ ತಂದಿದ್ದ ಬಗೆ ಮೆಚ್ಚುಗೆಗೆ ಒಳಗಾಗಿತ್ತು.

    English summary
    Edegarike and Kiragoorina Gayyaligalu fame director Suman Kittur married to software engineer Srinivas at Puducherry amid lockdown.
    Sunday, May 24, 2020, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X