ರಚಿತಾ ರಾಮ್‌ಗೆ ವಯಸ್ಸು ಆಯ್ತು ಮದುವೆ ಆಗು ಅಂತಾರಂತೆ: ಡೇಟಿಂಗ್‌ಗೆ ಶಿವಮೊಗ್ಗಕ್ಕೆ ಹೊರಟ ಕ್ವೀನ್

'ಏಕ್‌ ಲವ್ ಯಾ' ಕನ್ನಡ ಚಿತ್ರರಂಗದ ಮತ್ತೊಂದು ಮ್ಯೂಸಿಕಲ್ ಸಿನಿಮಾ. ರಕ್ಷಿತಾ ಪ್ರೇಮ್ ಸಹೋದರನಿಗಾಗಿ ನಿರ್ಮಿಸಿದ ಸಿನಿಮಾವಿದು. ಶೋ ಮ್ಯಾನ್ ಪ್ರೇಮ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ಒಂದೊಂದೇ ಹಾಡುಗಳನ್ನು ಸಿನಿಪ್ರಿಯರಿಗಾಗಿ ರಿಲೀಸ್ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, 'ಏಕ್ ಲವ್ ಯಾ' ಸಿನಿಮಾದ ಹಾಡುಗಳು ಹಿಟ್ ಲಿಸ್ಟ್ ಸೇರಿವೆ.

ರಚಿತಾ ರಾಮ್ ಎಲ್ಲೇ ಹೋಗಲಿ.. ಯಾವುದೇ ಸಿನಿಮಾ ಮಾಡಲಿ ಅವರ ಅಭಿಮಾನಿಗಳು ಮದುವೆ ಯಾವಾಗ ಅನ್ನುವ ಒಂದು ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಆದರೆ, ಇಂತಹದ್ದೊಂದು ಪ್ರಶ್ನೆ ಕೇಳಿದಾಗಲೆಲ್ಲಾ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಚಿ ನೀರಾಗಿದ್ದು ಬಿಟ್ಟರೆ, ಮದುವೆ ಬಗ್ಗೆ ತುಟಿ ಪಿಟಿಕ್ ಅಂದಿಲ್ಲ. ವಿಶೇಷ ಅಂದರೆ, 'ಏಕ್ ಲವ್ ಯಾ' ಸಿನಿಮಾದಲ್ಲೂ ಇವರ ಮದುವೆ ವಿಚಾರದ ಬಗ್ಗೆನೇ ಚರ್ಚೆಯಾಗುತ್ತಿದೆ.

ವಯಸ್ಸು ಆಯ್ತು ಮದುವೆ ಆಗು ಅನ್ನುವುದು ಯಾರು?

ವಯಸ್ಸು ಆಯ್ತು ಮದುವೆ ಆಗು ಅನ್ನುವುದು ಯಾರು?

ಸೆಲೆಬ್ರೆಟಿ ಅಂದಮೇಲೆ ಅಭಿಮಾನಿಗಳು ಕೇವಲ ಸಿನಿಮಾ ಮೇಲಷ್ಟೇ ಅಲ್ಲ. ಅವರು ವೈಯುಕ್ತಿಕ ಬದುಕಿನ ಮೇಲೂ ಕಣ್ಣಿಟ್ಟಿರುತ್ತಾರೆ. ಹಾಗಂತ ಇಲ್ಲಿ ಯಾರೋ ಅಭಿಮಾನಿ ರಚಿತಾಗೆ ವಯಸ್ಸಾಯ್ತು ಮದುವೆ ಆಗು ಅಂತ ಹೇಳಿಲ್ಲ. ಇದು 'ಏಕ್ ಲವ್ ಯಾ' ಸಿನಿಮಾದ 5ನೇ ಹಾಡಿನಲ್ಲಿ ಬರುವ ಒಂದು ಸಾಲು. ಹೌದು.. ರಚಿತಾ ರಾಮ್ ಹಾಗೂ ರಾಣಾ ಕಾಂಬಿನೇಷನ್‌ನ 5ನೇ ಹಾಡು ಬಿಡುಗಡೆ ಸಜ್ಜಾಗಿದೆ. ಈ ಹಾಡಿನ ಒಂದು ಸಾಲು ಸಿನಿಪ್ರಿಯರ ಗಮನ ಸೆಳೆದಿದೆ. ಅದೇ 'ಅಪ್ಪ ಯಾಕೋ ವಯಸ್ಸಾಯ್ತು ಮದುವೆ ಆಗು ಅಂತಾರೆ' ಅನ್ನುವ ಹಾಡಿನ ಸಾಲು.

ಮೀಟ್ ಮಾಡೋಣ ಎಂದ ರಚಿತಾ

ಮೀಟ್ ಮಾಡೋಣ ಎಂದ ರಚಿತಾ

ಡಿಂಪಲ್ ಕ್ವೀನ್ ಮದುವೆ ಬಗ್ಗೆ ಯಾಕಿಷ್ಟು ಚರ್ಚೆ ಅಂದರೆ, ಅದಕ್ಕೆ ಕಾರಣ 'ಏಕ್‌ ಲವ್ ಯಾ' ಸಿನಿಮಾದ 5ನೇ ಹಾಡು. ಈಗಾಗಲೇ ಈ ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿವೆ. ಆದರೆ, ಈ ನಾಲ್ಕು ಹಾಡುಗಳಲ್ಲೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮದುವೆ ಬಗ್ಗೆ ಒಂದೇ ಒಂದು ಸಾಲು ಕೇಳಿಸಿರಲಿಲ್ಲ. ಇನ್ನು ಎರಡು ದಿನಗಳಲ್ಲಿ ಐದನೇ ಸಾಂಗ್ ರಿಲೀಸ್ ಆಗುತ್ತಿದೆ. ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ಮದುವೆ ಬಗ್ಗೆನೇ ಇರುವ ಸಾಲುಗಳು ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ. ಮದುವೆ ಆಗಲು ತುದಿಗಾಲಲ್ಲಿ ನಿಂತಿರುವ ರಚಿತಾ, ರಾಣಾಗೆ ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ ಅಂತಿದ್ದಾರೆ.

ಶಿವಮೊಗ್ಗದಲ್ಲಿ 5ನೇ ಹಾಡು ರಿಲೀಸ್

ಶಿವಮೊಗ್ಗದಲ್ಲಿ 5ನೇ ಹಾಡು ರಿಲೀಸ್

'ಏಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಯುವನಟಿ ಗ್ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲೂ ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಧೂಮಪಾನ ಮಾಡಿದ್ದಷ್ಟೇ ಅಲ್ಲದೆ, ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ. ಈಗ ತಮ್ಮ ಸಿನಿಮಾ 5ನೇ ಹಾಡಿನ ಬಗ್ಗೆ ಸ್ವತಃ ರಚಿತಾ ರಾಮ್ ಮಾಹಿತಿ ಶೇರ್ ಮಾಡಿದ್ದಾರೆ. " ಈಗಾಗಲೇ ನಾವು ನಮ್ಮ ಸಿನಿಮಾ 'ಏಕ್ ಲವ್ ಯಾ' ದ ನಾಲ್ಕು ಹಾಡುಗಳನ್ನು ರಿಲೀಸ್ ಮಾಡಿದ್ದೇವೆ. ಎಣ್ಣೆ ಸಾಂಗ್ ಹಾಗೂ ಅನಿತಾ ಸಾಂಗ್ ಕೂಡ ರಿಲೀಸ್ ಆಗಿದೆ. ಈಗ ರಿಲೀಸ್ ಆಗುತ್ತಿರುವ ಹಾಡು ಇನ್ನೂ ಚೆನ್ನಾಗಿದೆ. ಈ ಹಾಡನ್ನು ರಿಲೀಸ್ ಮಾಡುವುದಕ್ಕೆ ನಮ್ಮ ಚಿತ್ರತಂಡ ಶಿವಮೊಗ್ಗಕ್ಕೆ ಬರುತ್ತಿದ್ದೇವೆ." ಎಂದು ಡಿಂಪಲ್ ಕ್ವೀನ್ ರಚಿತಾ ರಾಮ್ ತಿಳಿಸಿದ್ದಾರೆ.

ಎಣ್ಣೆ ಹಾಗೂ ಅನಿತಾ ಹಾಡು ಫೇಮಸ್

ಎಣ್ಣೆ ಹಾಗೂ ಅನಿತಾ ಹಾಡು ಫೇಮಸ್

'ಏಕ್ ಲವ್ ಯಾ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಎಣ್ಣೆ ಹಾಡಿಗೆ ಮಹಿಳೆಯರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ 108 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ಅನಿತಾ ಹಾಡು ಕೂಡ ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿದೆ. ಈಗ ಐದನೇ ಹಾಡನ್ನು ಬಿಡುಗಡೆ ಮಾಡಲು ರಚಿತಾ ರಾಮ್ ಹಾಗೂ ಪ್ರೇಮ್ ಮುಂದಾಗಿದ್ದಾರೆ.

More from Filmibeat

English summary
Ek Love ya actress Rachita Ram going to shimoga to release Ek love ya 5th song. Prem directed Rachita Ram and Rana starrer Ek love ya will release in January 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X