ಸುದೀಪ್ ಶಿಷ್ಯನ ಚೊಚ್ಚಲ ಸಿನಿಮಾಗೆ 'ಏಳುಮಲೆ' ಪ್ರಿಯಾಂಕಾ ಆಚಾರ್ ನಾಯಕಿ: ಯಾವುದದು?

ಜೀವನದಲ್ಲಿ ಸಿಕ್ಕಿದ ಒಂದೇ ಒಂದು ಅವಕಾಶ ಇಂದು ಮತ್ತೊಂದು ಅವಕಾಶಕ್ಕೆ ಕಾರಣವಾಗಿದೆ. ಜೀ ಕನ್ನಡದ ವಿಭಿನ್ನ ರಿಯಾಲಿಟಿ ಶೋ 'ಮಹಾನಟಿ'ಯಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಆಚಾರ್. ಇವರ ನಟನಾ ಜೀವನ ಅಲ್ಲಿಗೆ ಮುಗಿದಿರಲಿಲ್ಲ. ನಿರ್ದೇಶಕ ತರುಣ್ ಸುಧೀರ್ ಮಾತು ಕೊಟ್ಟಂತೆ ಅವರೇ ನಿರ್ಮಿಸಿದ 'ಏಳುಮಲೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.

'ಏಳುಮಲೆ' ಸಿನಿಮಾ ಪ್ರಿಯಾಂಕಾ ಆಚಾರ್‌ಗೆ ನಟಿಯಾಗಬೇಕು ಎನ್ನುವ ಕನಸನ್ನು ಈಡೇರಿಸಿತ್ತು. ತರುಣ್ ಸುಧೀರ್ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ರಕ್ಷಿತಾ ಪ್ರೇಮ್ ಸಹೋದರ ಈ ಸಿನಿಮಾಗೆ ನಾಯಕನಾಗಿದ್ದರು. ಇಲ್ಲಿಂದ ಪ್ರಿಯಾಂಕಾ ಆಚಾರ್ ಅವರ ಸಿನಿಮಾ ಜರ್ನಿ ಆರಂಭ ಆಗಿತ್ತು. ಈಗ ಅವರಿಗೆ ಮತ್ತೊಂದು ಸಿನಿಮಾ ಸಿಕ್ಕಿದೆ.

Elumale movie actress Priyanka Achar New movie announced here is details

'ಏಳುಮಲೆ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾದ ನಟಿ ಪ್ರಿಯಾಂಕಾ ಆಚಾರ್ ನೋಡುವುದಕ್ಕೆ ಸುಂದರವಾಗಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಲು ಬೇಕಿರುವ ಎಲ್ಲಾ ಪ್ರತಿಭೆಗಳೂ ಕೂಡ ಇವೆ. ಚೊಚ್ಚಲ ಚಿತ್ರದಲ್ಲಿಯೇ ತಮ್ಮನ್ನು ತಾವು ನಾಯಕಿಯಾಗಿ ನಿರೂಪಿಸಿಕೊಂಡಿರುವ 'ಮಹಾನಟಿ' ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಕಿಚ್ಚ ಸುದೀಪ್ ಆಪ್ತರಾಗಿ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ವನಾಥ್ ನಿರ್ದೇಶನ ಮಾಡುತ್ತಿದ್ದಾರೆ.

ಅಂದ್ಹಾಗೆ, ಪ್ರಿಯಾಂಕಾ ಆಚಾರ್‌ ಮೂಲತಃ ಮೈಸೂರಿನವರು. ಬಾಲ್ಯದಿಂದಲೇ ನಟಿಯಾಗಬೇಕೆಂದು ಕನಸು ಕಂಡಿದ್ದರು. ತನ್ನ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಪ್ರಿಯಾಂಕಾ ಸಾಕಷ್ಟು ಸೀರಿಯಲ್ ಸೇರಿದಂತೆ ಸಿನಿಮಾಗಳಿಗೆ ಆಡಿಷನ್‌ ನೀಡಿದ್ದರು. ಇದೇ ಕನಸು ಜೀ ಕನ್ನಡ ವಾಹಿನಿಯ 'ಮಹಾನಟಿ' ರಿಯಾಲಿಟಿ ಶೋನ ವಿನ್ನರ್ ಆಗಿ ಹೊರ ಹೊಮ್ಮುವುದಕ್ಕೆ ಪ್ರಿಯಾಂಕಾಗೆ ಸಹಕಾರಿಯಾಗಿತ್ತು.

ತರುಣ್ ಸುಧೀರ್‌ ನಿರ್ಮಾಣದ 'ಏಳುಮಲೆ' ಸಿನಿಮಾ ಇವರ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. ತಮ್ಮ ಮುಗ್ಧ ಚೆಲುವು, ನಟನೆಯಿಂದ ಗಮನ ಸೆಳೆದ ಅವರ ಎರಡನೇ ಸಿನಿಮಾ ಯಾವುದು ಎಂಬುವುದು ರಿವೀಲ್ ಆಗಿದೆ. ಆದರೆ, ಈ ಬಗ್ಗೆ ನಿರ್ದೇಶಕ ಕಿರಣ್ ವಿಶ್ವನಾಥ್ ಹೆಚ್ಚು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಪ್ತ ಬರಹದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ವನಾಥ್ ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ರನ್ನ, ವಿಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ಕಿರಣ್ ಕೆಲಸ ಮಾಡಿದ್ದರು. ಈಗ ಪೂರ್ಣ ಪ್ರಮಾಣದ ನಿರ್ದೇಶನಕ್ಕೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ. ಕಿರಣ್ ವಿಶ್ವನಾಥ್ ಅವರ ಚೊಚ್ಚಲ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಆಚಾರ್ ನಟಿಸಲಿದ್ದು, ಈ ಚಿತ್ರ ಅವರಿಗೆ ಎಷ್ಟು ಸಕ್ಸಸ್ ಕೊಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಪ್ರಿಯಾಂಕಾಗೆ ಹೀರೋ ಯಾರು?

ಕಿರಣ್ ವಿಶ್ವನಾಥ್ ನಿರ್ದೇಶಿಸುತ್ತಿರುವ ಈ ಚೊಚ್ಚಲ ಸಿನಿಮಾದ ಹೀರೋ ಯಾರು ಅನ್ನೋದನ್ನು ಚಿತ್ರತಂಡ ರಹಸ್ಯವಾಗಿಯೇ ಇಟ್ಟಿದೆ. ಮುಂದಿನ ದಿನಗಳಲ್ಲಿ ಅವರನ್ನು ರಿವೀಲ್ ಮಾಡುವ ಆಲೋಚನೆ ಇಟ್ಟುಕೊಂಡಿದೆ. ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಹೀರೋನನ್ನು ಪರಿಚಯಿಸಲು ಚಿತ್ರತಂಡ‌ ಮುಂದಾಗಿದೆ. ಇನ್ನು ಗೌರಿ ಆರ್ಟ್ಸ್ ಬ್ಯಾನರ್ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ? ಟೆಕ್ನಿಕಲ್ ಡಿಪಾರ್ಟ್‌ಮೆಂಟ್‌ನಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

More from Filmibeat

English summary
Elumale movie actress Priyanka Achar New movie announced here is details.
Read more about: actress kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X