ವಿಚ್ಛೇದನದ ಬಳಿಕ 'ಕ್ಯಾಂಡಿ ಕ್ರಶ್' ಸಿನಿಮಾದಲ್ಲಿ ನಟಿಸಲು ನಿವೇದಿತಾ-ಚಂದನ್ ಒಪ್ಪಿಗೆ: ಆದರೂ ತಂಡಕ್ಯಾಕೆ ಚಿಂತೆ?
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಪರಸ್ಪರ ಹಾಗೂ ಒಮ್ಮತದ ನಿರ್ಧಾರದ ಮೇಲೆ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ. ಸದ್ಯ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರದ ಬಗ್ಗೆನೇ ಚರ್ಚೆಯಾಗುತ್ತಿದೆ. ಒಂದೊಂದು ಕಡೆ ವಿಚ್ಛೇದನಕ್ಕೆ ಒಂದು ಕಾರಣವನ್ನು ನೀಡಲಾಗುತ್ತಿದೆ.
ವಿಚ್ಛೇದನ ಪಡೆದ ಬಳಿಕ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಕೈ ಕೈ ಹಿಡಿದು ಒಟ್ಟಿಗೆ ಬಂದಿದ್ದಾರೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವವರೂ ಇದ್ದಾರೆ. ಹೀಗಾಗಿ ಈ ವಿಚ್ಛೇದನದ ಪ್ರಕರಣ ಹೊರಬರುತ್ತಿದ್ದಂತೆ ಇಬ್ಬರ ಫ್ಯಾನ್ಸ್ ಶಾಕ್ ಆಗಿದ್ದರು.

ಆದ್ರೀಗ ಇವರಿಬ್ಬರ ಬಗ್ಗೆ ಇನ್ನೊಂದು ವಿಷಯವಿದೆ. ಇತ್ತೀಚೆಗೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ 'ಕ್ಯಾಂಡಿ ಕ್ರಶ್' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಚಂದನ್ ಹೀರೊ ಆಗಿದ್ದರೆ, ಅತ್ತ ನಿವೇದಿತಾ ಗೌಡ ಹೀರೋಯಿನ್. ಈ ಸಿನಿಮಾ ಮುಗಿಯುವುದರೊಳಗೆ ಇಬ್ಬರೂ ದಾಂಪತ್ಯ ಜೀವನವನ್ನು ಮುರಿದುಕೊಂಡು ಬೇರೆಯಾಗಿದ್ದಾರೆ.
ಈಗ ಕ್ಯಾಂಡಿ ಕ್ರಶ್ ಸಿನಿಮಾವನ್ನು ಈ ಜೋಡಿ ಕಂಪ್ಲೀಟ್ ಮಾಡುತ್ತಾ? ಅನ್ನೋ ಪ್ರಶ್ನೆ ಎದುರಾಗಿತ್ತು. ವಿಚ್ಛೇದನದ ಬಳಿಕ ಈ ಜೋಡಿ ಒಟ್ಟಿಗೆ ಸಿನಿಮಾದಲ್ಲಿ ನಟಿಸಬಹುದೇ? ಅನ್ನೋ ಪ್ರಶ್ನೆ ಎದ್ದಿತ್ತು. ಅಲ್ಲದೆ ನಿವೇದಿತಾ ಹೆಚ್ಚಿನ ಶಿಕ್ಷಣ ಪಡೆಯಲು ವಿದೇಶಕ್ಕೆ ಹಾರುತ್ತಿದ್ದಾರಂತೆ ಅನ್ನೋ ಮಾತು ಕೇಳಿ ಬಂದಿತ್ತು. ಹೀಗಾಗಿ ಚಿತ್ರತಂಡ ಕೂಡ ಟೆನ್ಷನ್‌ಗೆ ಒಳಗಾಗಿತ್ತು.
ಆದರೆ, ಮತ್ತೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಈ ವಿಷಯದಲ್ಲಿ ಪ್ರಬುದ್ಧತೆಯನ್ನು ಮೆರೆದಿದ್ದಾರೆ. ನಿವೇದಿತಾ ಗೌಡ 'ಕ್ಯಾಂಡಿ ಕ್ರಶ್' ಸಿನಿಮಾದ ಪುನೀತ್ ಅವರಿಗೆ ಕರೆ ಮಾಡಿ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾರೆ. ನಿಮ್ಮ ಶೆಡ್ಯೂಲ್ ಪ್ರಕಾರವೇ ಶೂಟಿಂಗ್‌ನಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರಂತೆ. ಈ ವಿಷಯವನ್ನು ಫಸ್ಟ್ ನ್ಯೂಸ್ ಜೊತೆ ನಿರ್ದೇಶಕರು ಹಂಚಿಕೊಂಡಿದ್ದಾರೆ.
"ಮುಂದಿನ ವಾರದಲ್ಲಿ ಕ್ಯಾಂಡಿಕ್ರಶ್ ಶೂಟಿಂಗ್ ಇದೆ. ಅದರ ಬಗ್ಗೆ ಮಾತಾಡುವುದಕ್ಕೆ ಕಾಲ್ ಮಾಡಿದ್ದೆ. ಏನೂ ತಲೆ ಕೆಡಿಸಿಕೊಳ್ಳಬೇಡಿ. ಶೂಟಿಂಗ್‌ಗೆ ಬರುತ್ತೇವೆ. ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅಷ್ಟು ಬಿಟ್ಟರೆ, ಇದರ ಬಗ್ಗೆ ಏನಾಗಿದೆ ಅನ್ನೋದು ನಮಗೆ ಗೊತ್ತಿಲ್ಲ." ಎಂದು ಕ್ಯಾಂಡಿ ಕ್ರಶ್ ನಿರ್ದೇಶಕ ಹೇಳಿದ್ದಾರೆ.

'ಕ್ಯಾಂಡಿ ಕ್ರಶ್' ಸಿನಿಮಾದ ಒಟ್ಟು 8 ದಿನದ ಶೂಟಿಂಗ್ ಬಾಕಿ ಇದೆ. ಅದರಲ್ಲಿ ಇವರಿಬ್ಬರ ಕಾಂಬಿನೇಷನ್ 4 ದಿನಗಳಿವೆ. ಹೀಗಾಗಿ ಶೂಟಿಂಗ್ ಮುಗಿಸಿಕೊಡುತ್ತೇವೆ ಎಂದು ಹೇಳಿದ್ದಾರಂತೆ. ಇದೇ ತಿಂಗಳು ಜೂನ್ 14ರಿಂದ ಶೂಟಿಂಗ್ ಆರಂಭಿಸಲಿದೆ ಚಿತ್ರತಂಡ.
"ನಿವೇದಿತಾ ಗೌಡ ಅವರೇ ಫೋನ್ ಮಾಡಿದ್ದರು. ಟೆನ್ಷನ್ ಆಗುವಂತಹದ್ದು ಏನಿಲ್ಲ. ಚೆನ್ನಾಗಿಯೇ ಇದ್ದೇವೆ. ಮ್ಯೂಚ್ಯುವಲಿ ನಾನು ಈ ನಿರ್ಧಾರಕ್ಕೆ ಬಂದಿದ್ದೇವೆ. ಶೂಟಿಂಗ್‌ನಲ್ಲಿ ಏನೂ ಸಮಸ್ಯೆ ಆಗಲ್ಲ. ನೀವು ಶೆಡ್ಯೂಲ್ ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅವರಿಗೆ ಗೊತ್ತಿತ್ತು ಶೆಡ್ಯೂಲ್ ಪ್ಲ್ಯಾನ್ ಮಾಡಿದ್ದು, ಆ ವಿಚಾರವಾಗಿ ಹೇಳುವುದಕ್ಕಂತಲೇ ಮಾಡಿದ್ದರು. ನಾವು ನ್ಯೂಸ್ ಎಲ್ಲ ನೋಡಿದ್ವಲ್ಲ. ಬಹುಶ: ಸಿನಿಮಾ ಬಗ್ಗೆ ಟೆನ್ಷನ್ ಆಗುತ್ತಾರೆ ಅಂತ ಹೇಳಿದ್ದಾರೆ ಅನಿಸುತ್ತೆ." ಎಂದು ನಿರ್ದೇಶಕ ಪುನೀತ್ ಹೇಳಿಕೊಂಡಿದ್ದಾರೆ.
ಈ ಮಧ್ಯೆ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. 'ಕ್ಯಾಂಡಿ ಕ್ರಶ್' ಸಿನಿಮಾದ ಟೈಟಲ್ ಬಳಸದೆ ಇರುವಂತೆ ಗೇಮಿಂಗ್ ಆಪ್ 'ಕ್ಯಾಂಡಿ ಕ್ರಶ್' ನೋಟೀಸ್ ಜಾರಿ ಮಾಡಿದೆ. ಹೀಗಾಗಿ ಚಿತ್ರತಂಡ ಈಗ 'ಕ್ಯಾಂಡಿ ಕ್ರಶ್' ಟೈಟಲ್ ಅನ್ನು ಬದಲಾವಣೆ ಮಾಡಬೇಕಿದೆ.


Click it and Unblock the Notifications











