ಶಿಲ್ಪಾ ಶೆಟ್ಟಿ ಎದುರೇ "ನಾನು ಹುಡುಗಿಯನ್ನು ಬಿಟ್ಟರೂ.. ನನ್ನ ಕೈ ಹುಡುಗಿಯ ಸೆರಗನ್ನು ಬಿಡಲ್ಲ" ಎಂದ ಕ್ರೇಜಿಸ್ಟಾರ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸುಮಾರು 18 ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೋಗಿ ಪ್ರೇಮ್ ನಿರ್ದೇಶಿಸಿರುವ 'ಕೆಡಿ' ಸಿನಿಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಸಿನಿಮಾದ ಟೀಸರ್ ರಿಲೀಸ್ ಮಾಡಿ ಸಾಕಷ್ಟು ಮಾತಾಡಿದ್ದಾರೆ. ಆದರೆ, ಬೆಂಗಳೂರಿಗೆ ಬಂದಾಗ ವೇದಿಕೆ ಕ್ರೇಜಿಎಯಾಗಿತ್ತು. ಅದಕ್ಕೆ ಕಾರಣ ಕ್ರೇಜಿಸ್ಟಾರ್ ರವಿಚಂದ್ರನ್.

ಶಿಲ್ಪಾ ಶೆಟ್ಟಿಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಕನ್ನಡಕ್ಕೆ ಕರೆದುಕೊಂಡು ಬಂದಿದ್ದರು. 'ಪ್ರೀತ್ಸೋದ್ ತಪ್ಪಾ' ಶಿಲ್ಪಾ ಶೆಟ್ಟಿ ನಟಿಸಿದ ಮೊದಲ ಕನ್ನಡ ಸಿನಿಮಾ. ಹೀಗಾಗಿ ಇಬ್ಬರನ್ನೂ ವೇದಿಕೆ ಮೇಲೆ ಒಟ್ಟಿಗೆ ಕರೆಸಲಾಗಿತ್ತು. ಹಳೆಯ ನೆನಪುಗಳನ್ನು ಮೆಲುಕು ಹಾಕಲಾಗಿತ್ತು. ಈ ವೇಳೆ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಜೊತೆಗೆ ನಡೆದ ಸಂಭಾಷಣೆ ಅಷ್ಟೇ ಕ್ರೇಜಿಯಾಗಿತ್ತು.

Even if I leave the girl my hand won t leave her saree Ravichandran says infront of Shilpa Shetty

"ನಾವು ಸಿನಿಮಾ ಮಾಡಬೇಕಾದರೆ, ನಾವು ಒಳ್ಳೆಯ ಸ್ನೇಹಿತರು ಅಷ್ಟೇ. ನಾನು ಡೈರೆಕ್ಟರ್, ಹೀರೋ.. ಅವರು ಹೀರೋಯಿನ್ ಅಂತ ಇರಲಿಲ್ಲ. ನಮ್ಮಿಬ್ಬರಲ್ಲಿ ಆ ಫೀಲಿಂಗ್ ಇರಲಿಲ್ಲ. ಮೊದಲ ಮೂರು ದಿನ ಅವರು ಬಾಂಬೆ ಹೀರೋಯಿನ್ ಆಗಿದ್ದರು. ಆಮೇಲೆ ಕನ್ನಡವರು ಆದರು. ಮೊದಲ ದಿನ ಪ್ರೀತ್ಸೋದ್ ತಪ್ಪಾ ಸಿನಿಮಾದ ಬೈಕ್ ಸೀನ್ ತೆಗೆಯುತ್ತಿದ್ದೆ. ಅವರಿಗೆ ಗೊತ್ತಿರಲಿಲ್ಲ. ನಾನೇ ಫೈಟ್ ಸೀನ್ ತೆಗೆಯುತ್ತಿದ್ದೆ. ನಾನು ಎಲ್ಲಾ ಮಾಡುತ್ತಿದ್ದೆ. ಡೂಪ್ ಇಲ್ಲ ಏನೂ ಇಲ್ಲ. ಇವಳಿಗೆ ಕೂರಿಸಿಕೊಂಡು ಎಲ್ಲಾ ನಾನೇ ಶೂಟ್ ಮಾಡುತ್ತಿದ್ದೇನೆ. ಇವಳಿಗೆ ಡೂಪ್ ಇಲ್ವಾ? ಎಲ್ಲಾ ಇವನೇ ತೆಗೆಯುತ್ತಿದ್ದಾನಲ್ಲ ಅಂತ ಅನಿಸಿತ್ತು. ಮೂರು ದಿನ ಆದ್ಮೇಲೆ ಕೇಳಿದರು. ಈ ಸಿನಿಮಾದಲ್ಲಿ ಫೈಟ್ ಮಾಸ್ಟರ್ ಇಲ್ವಾ? ಡೂಪ್ ಇಲ್ವಾ? ನನಗೂ ಇಲ್ಲ. ನಿಮಗೂ ಇಲ್ವಾ? ಆಗ ಒಂದೇ ಮಾತು ಕೇಳಿದೆ. ನೀವು ಸೇಫ್ ಫೀಲ್ ಮಾಡುತ್ತಿದ್ದೀರಾ? ಅಂತ. ಅವರು ಯೆಸ್ ಅಂದರು. ಅಲ್ಲಿಂದ ಜರ್ನಿ ಶುರುವಾಯ್ತು."

"ನಾನು ರವಿ ಸರ್ ಜೊತೆ ಕೆಲಸ ಮಾಡುವಾಗ ಅವರು ನನ್ನನ್ನು ಹೊಗಳಿಲ್ಲ. 18 ವರ್ಷಗಳಾದ್ಮೇಲೆ ಅವರು ಹೊಗಳುತ್ತಿದ್ದಾರೆ. ಅದೂ ಕೆಡಿ ಸ್ಟೇಜ್ ಮೇಲೆ. ನೀವು ಯಾವಾಗಲೂ ಇಂತಹ ಒಳ್ಳೆಯ ಮಾತುಗಳನ್ನು ಹೇಳಿಲ್ಲ." ಎಂದು ಕ್ರೇಜಿ ಸ್ಟಾರ್ ಕಾಳೆದರು.

ಆಗ ಕ್ರೇಜಿಸ್ಟಾರ್ ರವಿಚಂದ್ರನ್ "ಅಯ್ಯೋ ಪ್ರಡ್ಯೂಸರ್ ಪ್ರೀತ್ಸೋದ್ ತಪ್ಪಾ ಸಿನಿಮಾದ 100 ಡೇಸ್ ಪ್ರೋಗ್ರಾಂ ಕೂಡ ಮಾಡಿಲ್ಲ. ಮತ್ತೆ ಭೇಟಿ ಮಾಡುವುದಕ್ಕೆ ಆಗಲಿಲ್ಲ. ಮತ್ತೆ ಸಿಕ್ಕಿದ್ದೇ ಒಂದಾಗೋಣ ಬಾ ಸಿನಿಮಾದಲ್ಲಿ. ನಮಗೆ ಹೀಗೆ ಸ್ಟೇಜ್ ಮೇಲೆ ಬರುವುದಕ್ಕೆ ಅವಕಾಶವೇ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಸಿಕ್ಕಿದೆ." ಎಂದು ಹೇಳಿದ್ದರು.

Even if I leave the girl my hand won t leave her saree Ravichandran says infront of Shilpa Shetty

ಆಗ ಶಿಲ್ಪಾ ಶೆಟ್ಟಿ ಒಂದಾಗೋಣ ಬಾ ಸಿನಿಮಾ ಹಾಡಿನ ಚಿತ್ರೀಕರಣದ ಅನುಭವಗಳನ್ನು ಹೇಳಿದರು. ಮೋಟರ್ ಸೈಕಲ್‌ನಲ್ಲಿ ಸಾಂಗ್ ಶೂಟ್ ಮಾಡಿದ ರವಿಚಂದ್ರನ್ ಕ್ರಿಯೇಟಿವಿಯನ್ನು ಹೊಗಳಿದರು. "ಪ್ರೀತ್ಸೋದ್ ತಪ್ಪಾ ಸಿನಿಮಾದ ರಾಜಾ ರಾಜಾ ಸಾಂಗ್‌ನಲ್ಲಿ ನನ್ನ ದೇಹದ ಬೇರೆ ಬೇರೆ ಭಾಗದಿಂದ ಕಾರ್ಡ್‌ಗಳು ಬರುತ್ತಿದ್ದವು. ಅದನ್ನು ಹೇಗೆ ಶೂಟ್ ಮಾಡಿದರು ಅಂತ ಕೇಳಬೇಡಿ. ನಾನು ಟವೆಲ್ ಅನ್ನು ಹಿಡಿದುಕೊಂಡಿದ್ದೆ ಸಡನ್ ಆಗಿ ಕಾರ್ಡ್. ಹಿಂದೆ ಮುಂದೆಯಿಂದೆಲ್ಲ ಬರುವುದಕ್ಕೆ ಶುರುವಾಗಿತ್ತು." ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕ್ರೇಜಿಸ್ಟಾರ್‌ಗೆ ಕಿಂಗ್ ಆಫ್ ಸಾಂಗ್ಸ್ ಎಂದು ಕರೆದಿದ್ದಾರೆ.

ಇದೇ ವೇಳೆ ವೇದಿಕೆ ಮೇಲೇ ಬಂಗಾರದಿಂದ ಹಾಡನ್ನು ರೀ ಕ್ರಿಯೇಟ್ ಮಾಡಲಾಗಿತ್ತು. ಆ ವೇಳೆ ರವಿಚಂದ್ರನ್ ಕೈನ ಬ್ರಾಸ್‌ಲೆಟ್‌ಗೆ ಶಿಲ್ಪಾ ಶೆಟ್ಟಿಯ ಸೆರಗು ಸಿಕ್ಕಿಕೊಂಡಿತ್ತು. ಆಗ ಕ್ರೇಜಿಸ್ಟಾರ್ ಸ್ಪಾಟ್‌ನಲ್ಲೇ ಒಂದು ಡೈಲಾಗ್ ಬಿಟ್ಟರು. "ನಾನು ಹುಡುಗಿಯನ್ನು ಬಿಟ್ಟರೂ.. ನನ್ನ ಕೈ ಹುಡುಗಿಯ ಸೆರಗನ್ನು ಬಿಡಲ್ಲ" ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದರು.

ಈ ಸಿನಿಮಾದ ವೇಳೆನೂ ಕ್ರೇಜಿಸ್ಟಾರ್ ಪ್ರೇಮ್ ವಿರುದ್ಧ ದೂರಿದ್ದರು. ಈ ಸಿನಿಮಾದಲ್ಲೂ ನನಗೆ ಹೀರೋಯಿನ್ ಕೊಟ್ಟಿಲ್ಲ. ಧ್ರುವ ನನಗೆ ಬರೀ ಬೈಯ್ಯೋದೇ ಸೀನ್ ಇದೆ. ಅದರಲ್ಲೂ ನನ್ನ ಪಂಚೆ ಎಲ್ಲಾ ಕಿತ್ತಾಗುತ್ತಾನೆ. ಅವನಿಗೆ ಅದೇನೋ ಆಸೆ. ನನ್ನ ಪಂಚೆ ಕಿತ್ತಾಕೋ ಆಸೆ. ನೀವು ಬೇರೆ ಹಾಡು ಹಾಡಿ ಅಂತೀರ. ಅವರೇ ಬೇರೆ. ನಾನೇ ಬೇರೆ. ನಾವು ಮೀಟ್ ಮಾಡೋದೇ ಇಲ್ಲ." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.

More from Filmibeat

English summary
Even if I leave the girl my hand won't leave her saree Ravichandran says infront of Shilpa Shetty.
Read more about: ravichandran shilpa shetty movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X