"ಸಿನಿಮಾ ಇಲ್ಲ ಅಂದರೂ ಜೀವನ ಇದೆಯಲ್ಲ"; 'ಕೆಜಿಎಫ್‌ 2' ಬಳಿಕ ಮೂರು ವರ್ಷ ಗ್ಯಾಪ್.. ಶ್ರೀನಿಧಿ ಶೆಟ್ಟಿ ಪ್ರತಿಕ್ರಿಯೆ

'ಕೆಜಿಎಫ್' ಸೀರಿಸ್‌ನಿಂದ ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಿಗೆ ಪರಿಚಯವಾದ ನಟಿ ಶ್ರೀನಿಧಿ ಶೆಟ್ಟಿ. 'ಕೆಜಿಎಫ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಷ್ಟು ಜೋರಾಗಿ ಸದ್ದು ಮಾಡಿದರೂ ಕರಾವಳಿ ಮೂಲದ ಶ್ರೀನಿಧಿ ಶೆಟ್ಟಿಗೆ ಬಿಗ್ ಬಜೆಟ್ ಸಿನಿಮಾ ಸಿಗುವುದಕ್ಕೆ ಮೂರು ವರ್ಷ ಕಾಯಬೇಕಾಯ್ತು. 'ಕೆಜಿಎಫ್ 2' ರಿಲೀಸ್ ಆದ ಮೂರು ವರ್ಷಗಳ ಬಳಿಕ ಅವರ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ ತೆಲುಗು ನಟ ನಾನಿ ಜೊತೆ ನಟಿಸಿದ 'ಹಿಟ್'.

ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಹಿಟ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಮೇ 1ಕ್ಕೆ ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಸಿನಿಮಾದ ಹೀರೋ ನಾನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ಶ್ರೀನಿಧಿ ಶೆಟ್ಟಿ ಇದೂವರೆಗಿನ ಸಿನಿಮಾ ಜರ್ನಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

Even if there is no cinema there is life Srinidhi Shetty for a three-year gap after KGF 2

'ಕೆಜಿಎಫ್ 2' ಅಂತಹ ಮೆಗಾ ಹಿಟ್ ಸಿನಿಮಾ ಕೊಟ್ಮೇಲೂ ಶ್ರೀನಿಧಿ ಶೆಟ್ಟಿ ಮೂರು ವರ್ಷಗಳ ಕಾಲ ಯಾಕೆ ಸಿನಿಮಾ ಮಾಡಿಲ್ಲ? ಆಫರ್ ಇರಲಿಲ್ಲವೇ? ಈ ಮೂರು ವರ್ಷ ಏನು ಮಾಡಿದರು? ಅವಕಾಶಗಳು ಸಿಗದ ದಿನಗಳು ಹೇಗಿತ್ತು? ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡುತ್ತಿದ್ದಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಶ್ರೀನಿಧಿ ಶೆಟ್ಟಿ ಓಪನ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಮಾಧ್ಯಮಗಳಿಗೆ ಈ ಗ್ಯಾಪ್‌ ಬಗ್ಗೆ ಏನು ಪ್ರತಿಕ್ರಿಯೆ ನೀಡಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

"ಸಿನಿಮಾ ಇಲ್ಲ ಅಂದರೂ ಜೀವನ ಇದೆಯಲ್ಲ"

ಕನ್ನಡ ನಟಿ ಶ್ರೀನಿಧಿ ಶೆಟ್ಟಿ 'ಕೆಜಿಎಫ್ 2' ಬಳಿಕ ಸೈಲೆಂಟ್ ಆಗಿದ್ದೇಕೆ? 3 ವರ್ಷ ಗ್ಯಾಪ್ ಕೊಟ್ಟಿದ್ದೇಕೆ? ಎನ್ನುವುದನ್ನು ರಿವೀಲ್ ಮಾಡಿದ್ದಾರೆ. "ಏನಿಲ್ಲ ದಿನನಿತ್ಯದ ಕೆಲಸಗಳು, ಎದ್ದೇಳೋದು, ತಿನ್ನೋದು, ಜಿಮ್‌ಗೆ ಹೋಗೋದು, ಊಟ ಮಾಡುವುದು, ಮನೆಯಲ್ಲಿ ಅಪ್ಪನನ್ನು ನೋಡಿಕೊಳ್ಳುವುದು, ತಂಗಿಯಂದಿರನ್ನು ನೋಡಿಕೊಳ್ಳುವುದು, ಮಕ್ಕಳನ್ನು ನೋಡಿಕೊಳ್ಳುವುದು ಇವೇ ಇದ್ದವು. ಸಿನಿಮಾ ಇಲ್ಲ ಅಂದರೂ ಜೀವನ ಇದೆಯಲ್ಲ. ನಿಮ್ಮನ್ನು ನಿಮಗೆ ಹ್ಯಾಂಡಲ್‌ ಮಾಡುವುದಕ್ಕೆ ಗೊತ್ತಿಲ್ಲ ಅಂದರೆ, ಏನೂ ಕೆಲಸ ಇಲ್ಲದೆ ಕೂತು ಕೊಳ್ಳುವುದಕ್ಕೆ ಕಷ್ಟ ಆಗುತ್ತೆ. ನಿಮಗೆ ರಿಯಾಲಿಟಿಯ ಅರಿವಿದ್ದರೆ, ಕೆಲಸ ಇಲ್ಲ ಅಂತ ಒಪ್ಪಿಕೊಳ್ಳುವುದರಲ್ಲಿ ಕಷ್ಟ ಆಗಲ್ಲ. ಹಾಗಾಗಿ ನನಗೆ ಅದರಲ್ಲೇನೂ ತೊಂದರೆ ಆಗಿಲ್ಲ. ಒಳ್ಳೆಯ ಫ್ಯಾಮಿಲಿ ಟೈಮ್ ಸಿಕ್ಕಿತು. ನಾಲ್ಕು ತಿಂಗಳು ನಾನು ಮನೆಯಲ್ಲಿಯೇ ಇರಲಿಲ್ಲ. ಈ ನಾಲ್ಕು ತಿಂಗಳಲ್ಲಿ 10 ದಿನ ಅಷ್ಟೇ ಮನೆಯಲ್ಲಿ ಇದ್ದೆ." ಎಂದು ಹೇಳಿದ್ದಾರೆ.

Even if there is no cinema there is life Srinidhi Shetty for a three-year gap after KGF 2

"ಸಿನಿಮಾ ಮಾಡದೇ ಇದ್ದರೂ ಪ್ರೀತಿ ಸಿಕ್ಕಿದೆ"

"ನನ್ನ ಸಿನಿಮಾ ಸ್ವಲ್ಪ ಸಮಯ ಆದ್ಮೇಲೆ ಬರುತ್ತಿದೆ. ನನ್ನನ್ನು ನಾನು ತೆರೆಮೇಲೆ ನೋಡಿಕೊಳ್ಳುತ್ತಿರುವುದು ಎರಡೂವರೆ ಮೂರು ವರ್ಷ ಆದ್ಮೇಲೆ. ನನಗೂ ಸಿಕ್ಕಾಪಟ್ಟೆ ಕುತೂಹಲವಿದೆ. 'ಕೆಜಿಎಫ್ 1' ಹಾಗೂ 'ಕೆಜಿಎಫ್ 2'ರಿಂದ ನೀವು ಕೊಟ್ಟಿರುವಂತಹ ಪ್ರೀತಿ ಅದರಲ್ಲೂ ಎರಡು ಮೂರು ವರ್ಷ ಸಿನಿಮಾ ಮಾಡಿಲ್ಲ ಅಂದರೂ ಅಷ್ಟೇ ಪ್ರೀತಿ ಸಪೋರ್ಟ್ ಯಾವಾಗಲೂ ಇತ್ತು. ಅದಕ್ಕೆ ನಾನು ಯಾವಾಗಲೂ ಚಿರಋಣಿ." ಎನ್ನುತ್ತಾರೆ ಶ್ರೀನಿಧಿ ಶೆಟ್ಟಿ.

ಕಿಚ್ಚ ಸುದೀಪ್ ಜೊತೆಗಿನ ಸಿನಿಮಾ ಏನಾಯ್ತು?

"ಹೌದು, ಪ್ರೊಡಕ್ಷನ್ ಕಡೆಯಿಂದ ಅನೌನ್ಸ್‌ಮೆಂಟ್ ಆಗಿತ್ತು. ನನ್ನದೂ ಅನೌನ್ಸ್‌ಮೆಂಟ್ ಆಗಿತ್ತು. ಆಮೇಲೆ ಸ್ವಲ್ಪ ಹೋಲ್ಡ್‌ನಲ್ಲಿ ಇದೆ. ನಾನೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಯಾಕಂದ್ರೆ, ಪ್ರೊಡಕ್ಷನ್‌ ಹೌಸ್‌ನಿಂದಲೇ ಅನೌನ್ಸ್‌ಮೆಂಟ್ ಆಗಬೇಕಲ್ವಾ? ನನಗೆ ಅವರ ಕಡೆಯಿಂದ ಏನೂ ಅಪ್‌ಡೇಟ್ ಸಿಕ್ಕಿಲ್ಲ. ಸದ್ಯಕ್ಕೆ ನಿಂತಿದೆ. ಮುಂದಿನ ದಿನಗಳಲ್ಲಿ ಸುದೀಪ್ ಅವರೊಂದಿಗೆ ನಟಿಸುವುದಕ್ಕೆ ಅವಕಾಶ ಸಿಗುತ್ತೆ ಅಂತ ನಾನು ಒಬ್ಬ ಅಭಿಮಾನಿಯಾಗಿ, ನಟಿಯಾಗಿ ಕಾಯುತ್ತಿದ್ದೇನೆ." ಎಂದು ಈಗಾಗಲೇ ಅನೌನ್ಸ್ ಆಗಿದ್ದ ಪ್ರಾಜೆಕ್ಟ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಬಿಲ್ಲ ರಂಗ ಬಾಷಾದಲ್ಲಿ ನಟಿಸುತ್ತಿದ್ದಾರಾ?

ಇನ್ನು ಕೆಲವು ದಿನಗಳಿಂದ ಕಿಚ್ಚ ಸುದೀಪ್ ನಟಿಸುತ್ತಿರುವ 'ಬಿಲ್ಲ ರಂಗ ಬಾಷಾ' ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಆ ಬಗ್ಗೆನೂ ಶ್ರೀನಿಧಿ ಶೆಟ್ಟಿ ಕ್ಲಾರಿಟಿ ಕೊಟ್ಟಿದ್ದಾರೆ. "ಬಿಲ್ಲ ರಂಗ ಬಾಷಾ ಬಗ್ಗೆ ನನಗೆ ಏನೋ ಗೊತ್ತಿಲ್ಲ. ನೀವು ಅದಕ್ಕೆ ಕ್ಲಾರಿಟಿಯನ್ನು ತೆಗೆದುಕೊಳ್ಳಿ. ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಸದ್ಯಕ್ಕೆ ಆತರದ್ದು ಏನೂ ಆಗಿಲ್ಲ." ಎಂದು ಹೇಳಿದ್ದಾರೆ.

More from Filmibeat

English summary
Even if there is no cinema, there is life. Srinidhi Shetty reacts for a three-year gap after KGF 2;
Read more about: srinidhi shetty kgf 2 sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X