ಲಾಂಗ್ ಹಿಡಿದು ರೀಲ್ಸ್; ಸಾಕ್ಷಿ ನಾಶ ಮಾಡಿದ ಆರೋಪದಡಿ ಬಂಧನ.. ಮಧ್ಯ ರಾತ್ರಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ದಿನಗಳ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು ವಿಚಾರಣೆ ನಡೆಸಿದ್ದರು. ಬಳಿಕ ಇಬ್ಬರನ್ನು ರಿಲೀಸ್ ಮಾಡಿದ್ದರು. ಆದ್ರೀಗ ಮತ್ತೆ ಬಂಧಿಸಿ, ಅವರನ್ನು ಪರಪ್ಪನ ಅಗ್ರಹಾರ ಜೈಲ್‌ಗೆ ಕಳುಹಿಸಲಾಗಿದೆ.

ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರನ್ನೂ ಪೊಲೀಸರು ಮತ್ತೆ ಬಂಧಿಸಿದ್ದರು. ವಿಚಾರಣೆ ವೇಳೆ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರೂ ಸಾಕ್ಷಿ ನಾಶ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಇಬ್ಬರೂ ಪೊಲೀಸರು ಮತ್ತೆ ಬಂಧಿಸಿ, ಸ್ಥಳ ಮಹಜರು ನಡೆಸಿದರು. ಬಳಿಕ ಇಂದು (ಮಾರ್ಚ್ 26) ಮಧ್ಯರಾತ್ರಿ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲ್‌ಗೆ ಕಳುಹಿಸಲಾಗಿದೆ.

Ex Bigg Boss contestants Vinay Gowda and Rajath Kishan shifted to Parappana Agrahara Jail

ಇಂದು (ಮಾರ್ಚ್ 26) ವಿನಯ್ ಗೌಡ ಹಾಗೂ ರಜತ್ ಕಿಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಮಾರಾಕಾಸ್ತ್ರಗಳನ್ನು ಹಿಡಿದು ಇಬ್ಬರೂ ರೀಲ್ಸ್ ಮಾಡಿದ್ದ ಆರೋಪದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನೂ ಪೊಲೀಸರು ಬಂಧಿಸಲಾಗಿದೆ. ಈಗ ಸಾಕ್ಷಿ ನಾಶದ ಕೇಸ್ ಕೂಡ ಹಾಕಲಾಗಿದ್ದು, ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡುತ್ತಾ? ಇಲ್ಲ ಪೊಲೀಸರ ಕಸ್ಟಡಿಗೆ ನೀಡುತ್ತಾ? ಅನ್ನೋದನ್ನು ಗೊತ್ತಾಗಲಿದೆ.

ಇನ್ನು ಘಟನೆಯ ಬಗ್ಗೆ ನೋಡುವುದಾದರೇ, ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋ ಬಳಿಕ ವಿನಯ್ ಗೌಡ ಹಾಗೂ ರಜತ್ ಇಬ್ಬರೂ ಮತ್ತೊಂದು ಶೋನಲ್ಲಿ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡದ 'ಬಾಯ್ಸ್ Vs ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋ ಶೂಟಿಂಗ್‌ನ ಬಿಡುವಿನ ವೇಳೆ ರಜತ್ ಹಾಗೂ ವಿನಯ್ ಗೌಡ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಅದನ್ನು ರಜತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇಲ್ಲಿಂದ ಇಬ್ಬರಿಗೂ ಸಂಕಷ್ಟ ಶುರುವಾಗಿದೆ.

ಶಸ್ತ್ರಸ್ತ್ರಾ ಕಾಯ್ದೆಯಡಿ ಮಾರಕಾಸ್ತ್ರಗಳನ್ನು ಹಿಡಿದು ವಿಡಿಯೋ ಮಾಡುವುದು ಕಾನೂನು ಬಾಹಿರ. ಇದೇ ಕಾಯ್ದೆಯಡಿ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ವಿನಯ್ ಗೌಡ ಹಾಗೂ ರಜತ್ ಇಬ್ಬರೂ ತಾವು ಬಳಸಿದ ಲಾಂಗ್ ಫೈಬರ್‌ದು , ಸೆಟ್ ಪ್ರಾಪರ್ಟಿ ಎಂದು ಹೇಳಿದ್ದರು. ಈ ಸಂಬಂಧ ಇಬ್ಬರಿಗೂ ಸ್ಟೇಷನ್ ವಾರೆಂಟ್ ನೀಡಿ ಕಳುಹಿಸಲಾಗಿತ್ತು. ಆದರೆ, ತನಿಖೆ ವೇಳೆ ನಕಲಿ ಲಾಂಗ್ ನೀಡಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಮತ್ತೆ ಬಂಧಿಸಿದ್ದರು.

ನಿನ್ನೆ (ಮಾರ್ಚ್ 26) ವಿನಯ್ ಗೌಡ ಹಾಗೂ ರಜತ್ ಕಿಶನ್ ರೀಲ್ಸ್ ಮಾಡಿದ ಜಾಗಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಅಲ್ಲದೆ ಇಬ್ಬರನ್ನು ಸಾಕ್ಷಿ ನಾಶ ಮಾಡಿದ ಆರೋಪದಡಿ ಬಂಧಿಸಲಾಗಿದ್ದು, ಮಧ್ಯರಾತ್ರಿ ಪರಪ್ಪನ ಅಗ್ರಹಾರ ಜೈಲ್‌ಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಇಂದು (ಮಾರ್ಚ್ 26) ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಇಬ್ಬರ ಭವಿಷ್ಯ ಏನಾಗುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
Ex Bigg Boss contestants Vinay Gowda and Rajath Kishan shifted to Parappana Agrahara Jail in mid night:
Read more about: bigg boss jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X