ಪ್ರಥಮ್ ಹೇರ್‌ ಕಟ್‌ಗೆ ಒಂದು ಲಕ್ಷ ಖರ್ಚಾಗ್ತಿದೆಯಂತೆ; ಯಾವ ಸಿನಿಮಾ?

ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಪ್ರಥಮ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿರುವ ಬಿಗ್‌ ಬಾಸ್‌ ಸ್ಪರ್ಧಿ ಆಕ್ಷನ್ ಮೂಡ್‌ನಲ್ಲಿ ಇದ್ದಾರೆ. ಕಳೆದ ಕೆಲವು ದಿನಗಳಿಂದ ಸಿನಿಮಾದಲ್ಲಿ ನಟಿಸುತ್ತಿದ್ದು, ಆಕ್ಷನ್ ಸೀನ್‌ಗಳ ಚಿತ್ರೀಕರಣ ಮಾಡುತ್ತಿದ್ದಾರೆ. ಕಾಮಿಡಿ ಜೊತೆ ಜೊತೆಗೆ ಭರ್ಜರಿ ಆಕ್ಷನ್ ಮೂಡ್‌ಗೆ ಶೂಟಿಂಗ್ ಮಾಡುತ್ತಿದ್ದಾರೆ.

ಒಳ್ಳೆಯ ಹುಡುಗ ಪ್ರಥಮ್ 'ನೋ ಕೊಕೇನ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈಗ ಅದೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಫಿಲ್ಮಿ ಬೀಟ್ ಕನ್ನಡದೊಂದಿಗೆ ಪ್ರಥಮ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಹೇರ್‌ ಸ್ಟೈಲ್‌ಗೇನೆ ಒಂದು ಲಕ್ಷ ರೂಪಾಯಿ ಖರ್ಷು ಆಗಿದೆಯಂತೆ. ಅಷ್ಟೇ ಅಲ್ಲದೆ ಬೆಸ್ಟ್ ಆಕ್ಷನ್ ಸಿನಿಮಾ ಆಗುತ್ತೆ ಎನ್ನುತ್ತಾರೆ ಪ್ರಥಮ್. ಈ ಸಂದರ್ಶನದ ತುಣುಕು ಇಲ್ಲಿದೆ.

Ex Bigg Boss Kannada contestant Pratham spent Rs 1 lakh for hair style for his next movie

ಫೈಟ್ ಮಾಡಿ ಸುಸ್ತಾಗಿದೆ

"ಸಾಯಿ ಪ್ರಕಾಶ್ ಸಿನಿಮಾ ಮಾಡಿದರೆ ಅಳೋದು ಕಲಿಯಬೇಕು. ತವರಿಗೆ ಬಾ ತಂಗಿ, ಅಣ್ಣ ತಂಗಿ, ದೇವರು ಕೊಟ್ಟ ತಂಗಿ ಹೀಗೆ. ರವಿಚಂದ್ರನ್ ಜೊತೆ ಸಿನಿಮಾ ಮಾಡಿದರೆ ರೊಮ್ಯಾನ್ಸ್ ಮಾಡೋದು ಕಲಿಬೇಕು. ಅದೇ ಥ್ರಿಲ್ಲರ್ ಮಂಜು ಜೊತೆ ಸಿನಿಮಾ ಮಾಡಿದರೆ ಡೈಲಾಗ್ ಹೇಳುವುದನ್ನು ಕಲಿಯಬೇಕು. ಈಗ ಮಾಸ್ಟರ್ ಜೊತೆ ಕಲಿಯುತ್ತಿದ್ದೇನೆ. ಈಗ ಏನು ಕಲಿಯೋದು ಫೈಟ್. ಅಯ್ಯೋ ಹೊಡೆದು ಮಲಗಿಸಿದ್ದಾರೆ. ಸುಸ್ತಾಗಿ ಬಿಟ್ಟಿದ್ದೀನಿ."

ಬೆಸ್ಟ್ ಆಕ್ಷನ್ ಸಿನಿಮಾ ಆಗುತ್ತೆ

"ಈ ವರ್ಷದ ಬೆಸ್ಟ್ ಆಕ್ಷನ್ ಸಿನಿಮಾ ಆಗುತ್ತೆ ಬರೆದಿಟ್ಟುಕೊಳ್ಳಿ. ಪರೀಕ್ಷೆ ಬರೆದವನಿಗೆ ಗೊತ್ತಾಗುತ್ತೆ ಫಸ್ಟ್ ರ್‍ಯಾಂಕ್ ಬರುತ್ತೇನೆ ಅಂತ. ಅದಕ್ಕೆ ಹೇಳುತ್ತಿದ್ದೇನೆ. ತಯಾರಿ ಅಂದರೆ, ಇವರು ಸುಮ್ಮನೆ ಆಕ್ಷನ್ ಮಾಡಿಸುತ್ತೇನೆ ಅಂತ ಕರೆದುಕೊಂಡು ಬಂದರು. ಈಗ ಹಿಂಡುತ್ತಿದ್ದಾರೆ. ಏರೋಪ್ಲೈನ್ ಹತ್ತಿಸುತ್ತಾರೆ ಅನ್ನೋದು ಗೊತ್ತಾ. ಇವರು ಏರೋಪ್ಲೈನ್ ಹತ್ತಿಸಿದವರು ಇಳಿಸಲೇ ಇಲ್ಲ. ಇವರು ಒಳ್ಳೆ ಥ್ರಿಲ್ಲರ್ ಮಂಜು ತಂಗಿ ಮಗನ ತರ ಹೊಡೆದು ಹೊಡೆದು ಮಲಗಿಸುತ್ತಿದ್ದಾರೆ. ನನ್ನ ಹತ್ತಿರ ಆಗುತ್ತಿಲ್ಲ ಇವರು ಬಿಡುತ್ತಿಲ್ಲ."

ಹೇರ್‌ ಕಟಿಂಗ್‌ಗೆ ಒಂದು ಲಕ್ಷ ಆಯ್ತು

"ಈ ಸಿನಿಮಾದ ಕಟಿಂಗ್ ಚಾರ್ಜ್ ಒಂದು ಲಕ್ಷ ಆಗುತ್ತೆ. ನಾಳೆ ಶೂಟಿಂಗ್ ಅಂದರೆ, ಇವತ್ತು ಒಂದು ಚೂರು ಕೂದಲು ಬಂದರೂ ಮತ್ತೆ ಕಟಿಂಗ್ ಮಾಡಿಸುತ್ತಾರೆ. ಇದೊಂದು ಡ್ರಗ್ ಮಾಫಿಯಾ ಕುರಿತು ಆಕ್ಷನ್ ಸಿನಿಮಾ. ಒಂದು ದಿನ ಬಿಟ್ಟು ಶೂಟಿಂಗ್‌ಗೆ ಬಂದೆ. ಆಗಲ್ಲ ಸರ್ ಕಟಿಂಗ್ ಮಾಡಿಸಿಕೊಂಡು ಬನ್ನಿ ಅಂದರು. ಒಂದು ಚೂರು ಕೂದಲು ಬಂದರೂ ಬಿಡುವುದಿಲ್ಲ. ಈ ಸಿನಿಮಾದ ಕಂಟಿನ್ಯೂಟಿ ಹಾಗಿದೆ. ಬೇರೆ ತರನೇ ಆಕ್ಷನ್ ಮಾಡುತ್ತಿದ್ದಾರೆ"

Ex Bigg Boss Kannada contestant Pratham spent Rs 1 lakh for hair style for his next movie

ಲೈಫ್‌ನಲ್ಲೇ ಸಿಗರೇಟ್ ಸೇದಿಲ್ಲ

"ನನ್ನ ಲೈಫ್‌ನಲ್ಲಿ ನಾನು ಒಂದು ಸಾರಿನೂ ಸ್ಮೋಕ್ ಮಾಡಿಲ್ಲ. ಒಂದೇ ಒಂದು ಡ್ರಾಪ್ ಬಿಯರ್ ಅನ್ನು ಕುಡಿದಿಲ್ಲ. ನಾನು ನಾನ್‌ ವೆಜ್ ಅನ್ನೂ ತಿನ್ನುವುದಿಲ್ಲ. ನನಗೆ ಯಾವುದೇ ಹ್ಯಾಬಿಟ್ ಕೂಡ ಇಲ್ಲ. ಈ ಸಿನಿಮಾ ಹೇಗಿದೆ ಅಂದರೆ, ನೋ ಕೊಕೈನ್ ಅಂತ. ಇಂಡಿಯಾದಲ್ಲಿ ಡ್ರಗ್ಸ್ ಇರಬಾರದು ಅನ್ನೋದೇ ಕಥೆ. ಸಖತ್ ಕಾಮಿಡಿ ಹಾಗೂ ಆಕ್ಷನ್ ಇದೆ. ಬಿದ್ದು ಬಿದ್ದು ನಗುತ್ತೀರ."

ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ

"ನಾನು ಸಿನಿಮಾ ಮಾಡುತ್ತಿದ್ದೇನೆ. ಜನರು ಬಿಗ್ ಬಾಸ್ ಗೆಲ್ಲಿಸಿದರು. ನಾನು ಕಷ್ಟ ಪಟ್ಟು ಸಿನಿಮಾ ಮಾಡಿದ್ದೇನೆ. ಸಾಲ ಮಾಡಿದ್ದೀನಿ. ನಾನು ಬದುಕುತ್ತೇನೆ. ನನ್ನ ಕೈಯಲ್ಲಿ ಆಗಿದ್ದನ್ನು ನಾನು ಮಾಡುತ್ತೇನೆ." ಎನ್ನುತ್ತಾರೆ ಬಿಗ್ ಬಾಸ್ ಪ್ರಥಮ್.

More from Filmibeat

Read more about: pratham sandalwood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X