Exclusive:: ಜೈಲಿಂದ ಬರ್ತಿದ್ದಂತೆ ಚಿತ್ರದುರ್ಗದ ಕಡೆಗೆ ದರ್ಶನ್; 'ರಾಜ ವೀರ ಮದಕರಿ ನಾಯಕ' ಸಿನಿಮಾ ಆಗುತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ 'ರಾಜ ವೀರ ಮದಕರಿ ನಾಯಕ' ಇತ್ತು. ಕೋವಿಡ್ ಶುರುವಾಗುವುದಕ್ಕೂ ಮುನ್ನ ಆರಂಭ ಆಗಿದ್ದ ಈ ಸಿನಿಮಾ ಈಗ ನಿಂತಿದೆ. ರಾಕ್‌ಲೈನ್ ವೆಂಕಟೇಶ ನಿರ್ಮಾಣ ಮಾಡುತ್ತಿದ್ದ ಈ ಸಿನಿಮಾ ಮೇಲೆ ಇಡೀ ಸ್ಯಾಂಡಲ್‌ವುಡ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿತ್ತು. ಆದರೆ, ಕೋವಿಡ್ ಬಂದಿದ್ದರಿಂದ ಈ ಸಿನಿಮವನ್ನು ಅಲ್ಲಿಗೆ ನಿಲ್ಲಿಸಬೇಕಾಯ್ತು.

ಇನ್ನೊಂದು ಕಡೆ ಕಿಚ್ಚ ಸುದೀಪ್ ಅವರೇ ಸಿನಿಮಾ ಮಾಡಬೇಕು ಅಂತ ವಾಲ್ಮೀಕಿ ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದರು. ಇದು ಒಂದಿಷ್ಟು ವಿವಾದಗಳು ಸೃಷ್ಟಿ ಮಾಡಿತ್ತು. ಆದರೆ, ಕೊನೆಗೂ 'ರಾಜ ವೀರ ಮದಕರಿ ನಾಯಕ' ಸಿನಿಮಾ ಸೆಟ್ಟೇರಿತ್ತು. ಕೇರಳದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ಅದ್ಧೂರಿಯಾಗಿ ಆರಂಭ ಕೂಡ ಆಗಿತ್ತು. ಸುಮಾರು ₹10 ಕೋಟಿ ವೆಚ್ಚದಲ್ಲಿ ಸಿನಿಮಾಗಾಗಿ ಅದ್ಧೂರಿ ಸೆಟ್ಟನ್ನು ಹಾಕಲಾಗಿತ್ತು.

Exclusive S V Rajendra Singh Babu said Veera Madakari will happen after Darshan out of Jail

ಈ ಗ್ಯಾಪ್‌ನಲ್ಲಿ ಕೋವಿಡ್ ಬಂದಿದ್ದರಿಂದ ಅಲ್ಲಿಗೆ ನಿಲ್ಲಿಸಲಾಗಿತ್ತು. ಮತ್ತೆ ಈ ಸಿನಿಮಾ ಆರಂಭ ಆಗಲಿಲ್ಲ. ದರ್ಶನ್ 'ಕಾಟೇರ'ಗೆ ಗ್ರೀನ್ ಸಿಗ್ನಲ್ ಕೊಟ್ಟರು. ಬಳಿಕ 'ಡೆವಿಲ್' ಶುರು ಮಾಡಿದ್ದರು. ಹೀಗಾಗಿ 'ರಾಜ ವೀರ ಮದಕರಿ ನಾಯಕ'ನ ಕಥೆ ಅಲ್ಲಿಗೆ ಮುಗೀತು ಅಂತಲೇ ಅಂದುಕೊಂಡಿದ್ದರು. ಆದ್ರೀಗ ರಾಜೇಂದ್ರ ಸಿಂಗ್ ಬಾಬು ಫಿಲ್ಮಿಬೀಟ್‌ಗೆ ನೀಡದ ಸಂದರ್ಶನದಲ್ಲಿ ದರ್ಶನ್ ಜೈಲಿನಿಂದ ಬರುತ್ತಿದ್ದಂತೆ ವೀರ ಮದಕರಿ ನಾಯಕ ಶುರುವಾಗುತ್ತೆ ಅನ್ನೋ ಭರವಸೆ ನೀಡಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆಂದು ನೋಡುವುದಾರೇ,

'ರಾಜ ವೀರ ಮದಕರಿ ನಾಯಕ' ಸಿನಿಮಾ ನಿಂತಿಲ್ಲ. ಅಂತಹ ಸಿನಿಮಾವನ್ನು ತೆಗೆಯುವುದಕ್ಕೆ ತುಂಬಾನೇ ಸಮಯ ಬೇಕಾಗಿತ್ತು. ಹೀಗಾಗಿ ನಿಲ್ಲಿಸಿರೋದಾಗಿ ಹೇಳಿದ್ಗದಾರೆ. "ದರ್ಶನ್ ಜೊತೆ ವೀರ ಮದಕರಿ ಸಿನಿಮಾ ಮಾಡುತ್ತಿದ್ದೆ. ಅದು ಸ್ಟಾಪ್ ಆಗಿಲ್ಲ. ಕೋವಿಡ್ ಬಂತು ನಿಲ್ತು. ಈ ಮಧ್ಯೆ ತುಂಬಾನೇ ಪ್ರಿಪರೇಷನ್ ಬೇಕಾಗಿತ್ತು. ಹೀಗಾಗಿ ಮಧ್ಯದಲ್ಲಿ ಕಾಟೇರ ಅಂತ ಸಿನಿಮಾ ಮಾಡೋಣ. ಆಮೇಲೆ ವೀರ ಮದಕರಿ ಮಾಡೋಣ ಅಂತಾನೇ ಇದ್ದಿದ್ದು. ಅಷ್ಟರಲ್ಲಿ ಈ ಘಟನೆಗಳೆಲ್ಲ ನಡೆದು ಹೋಯ್ತು." ಎಂದು ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ದರ್ಶನ್ ಜೊತೆ ಮಾಡುತ್ತಿದ್ದ ಸಿನಿಮಾ 'ರಾಜ ವೀರ ಮದಕರಿ ನಾಯಕ' ಎಲ್ಲಿ ಶೂಟಿಂಗ್ ಮಾಡುತ್ತಿದ್ದರು? ಸೆಟ್ಟಿಗೆ ಹಾಕಿದ್ದು ಎಷ್ಟು ಕೋಟಿ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಆಗಿದೆ 15 ದಿನಗಳ ಕಾಲ ಕೇರಳದಲ್ಲಿ ಶೂಟಿಂಗ್ ಮಾಡಿದ್ದೇವೆ. ಎಲ್ಲನೂ ನಮ್ಮ ಹತ್ತಿರ ಹಾಗೇ ಇದೆ. 10 ಕೋಟಿ ರೂಪಾಯಿ ಸೆಟ್ಟು ಹಾಕಿದ್ದು, ಡ್ರೆಸ್, ಕಾಸ್ಟ್ಯೂಮ್ ಎಲ್ಲವನ್ನೂ ಮಾಡಿದ್ದೇವೆ. ಆ ಸ್ಕ್ರಿಪ್ಟ್‌ಗೆ ಮೂರು ವರ್ಷ ಕೆಲಸ ಮಾಡಿದ್ದೇವೆ." ಎಂದು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ 'ರಾಜ ವೀರ ಮದಕರಿ ನಾಯಕ' ಸಿನಿಮಾ ಮತ್ತೆ ಶುರುವಾಗುತ್ತೆ ಅನ್ನೋ ಭರವಸೆ ನೀಡಿದ್ದಾರೆ. ದರ್ಶನ್ ಮತ್ತೆ ಮನಸ್ಸು ಮಾಡುತ್ತಾರೆಂಬ ಭರವಸೆ ನೀಡಿದ್ದಾರೆ. "ದರ್ಶನ್ ಅವರು ಬಂದ ಕೂಡಲೇ ಅವರ ಮನಸ್ಸಿಗೂ ಬಂದೇ ಬರುತ್ತೆ ಅಂತ ಕಾಣುತ್ತೆ. ಯಾಕಂದ್ರೆ, ಅವರ ಫ್ಯಾನ್ಸ್‌ಗೂ ಒಂದು ಆಸೆಯಿದೆ. ನಮಗೂ ಕರ್ನಾಟಕದಲ್ಲಿ ಒಂದು ಹೆಮ್ಮೆಯ ಸಿನಿಮಾ ಆಗುತ್ತೆ ಅನ್ನೋ ಆಸೆ ಇದ್ದೇ ಇದೆ." ಎಂದಿದ್ದಾರೆ.

ಇನ್ನೂ ಸಹಾಯ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಬಗ್ಗೆನೂ ಮಾತಾಡಿದ್ದಾರೆ. "ಆದಿತ್ಯ ಇತ್ತೀಚೆಗೆ ಡೈರೆಕ್ಟ್ ಮಾಡಬೇಕು ಅಂತ ಮನಸ್ಸು ಮಾಡಿ ಕೆಲಸ ಮಾಡುತ್ತಿದ್ದಾನೆ. ಮದಕರಿ ಅಂತಹ ಸಿನಿಮಾದಲ್ಲಿ ಅಸೋಸಿಯೆಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತೀನಿ ಅಂತ ಬಂದಿರೋದು ಗಟ್ಟಿಯಾದ ನಿರ್ಧಾರ. ಆ ನಿರ್ಧಾರಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತೆ. ನನಗಿಂತ ಹೆಚ್ಚಾಗಿ ದರ್ಶನ್ ಹಾಗೂ ಆದಿತ್ಯ ಇಬ್ಬರೂ ಕ್ಲೋಸ್ ಫ್ರೆಂಡ್ಸ್. ಎರಡು ಸಿನಿಮಾ ಒಟ್ಟಿಗೆ ಮಾಡಿದ್ದಾರೆ. ನಮ್ಮ ಸಿನಿಮಾ ಪಿತಾಮಹಾದಿಂದ ದರ್ಶನ್ ಹಾಗೂ ನನ್ನ ಮಗ ಕ್ಲೋಸ್ ಫ್ರೆಂಡ್ಸ್. ಮಾಡಬಹುದೇನೋ ತಪ್ಪೇನು ಇಲ್ಲ." ಎಂದಿದ್ದಾರೆ.

More from Filmibeat

English summary
Exclusive: S V Rajendra Singh Babu said Veera Madakari will happen after Darshan out of Jail.
Read more about: darshan rajendra singh babu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X