Exclusive: 'KD' ಸೆಟ್ಟಿಗೆ ಶಿಲ್ಪ ಶೆಟ್ಟಿ ಎಂಟ್ರಿ.. ಯಾವಾಗ ಬಂದ್ರು, ಯಾವಾಗ ಹೋದ್ರು?

ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'KD' ಕೂಡ ಒಂದು. ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಸೆಟ್ಟೇರಿದೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

'KD' ಸೆಟ್ಟೇರಿದ ಕ್ಷಣದಿಂದಲೇ ಈ ಸಿನಿಮಾದಲ್ಲಿ ನಟಿಸುತ್ತಿರುವ ತಾರೆಯರ ಹೆಸರುಗಳು ಓಡಾಡುತ್ತಿದ್ದರು. ಸಂಜಯ್ ದತ್, ಮೋಹನ್ ಲಾಲ್,ವಿಜಯ್ ಸೇತುಪತಿ, ಶಿಲ್ಪಾ ಶೆಟ್ಟಿ ಹೆಸರುಗಳು ಓಡಾಡಿದ್ದವು. ಇವುಗಳಲ್ಲಿ ಈಗಾಗಲೇ ಸಂಜಯ್ ದತ್ 'KD' ಅಡ್ಡಾಗೆ ಬಂದಾಗಿದೆ. ಆದರೆ, ಶಿಲ್ಪಾ ಶೆಟ್ಟಿ ಕಥೆಯೇನು? ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

Exclusive: Shilpa Shetty finished 3 Days of KD Shoot Dhruva Sarja Jogi Prem Combo

'KD' ಸೆಟ್ಟಿಗೆ ಶಿಲ್ಪ ಶೆಟ್ಟಿ ಎಂಟ್ರಿ

ಶಿಲ್ಪಾ ಶೆಟ್ಟಿ ಈಗಾಗಲೇ 'KD' ಸೆಟ್ಟಿಗೆ ಎಂಟ್ರಿ ಕೊಟ್ಟಾಗಿದೆ. ಅಲ್ಲದೆ ಮೊದಲ ಹಂತದ ತಮ್ಮ ಪೋಷನ್ ಅನ್ನು ಮುಗಿಸಿದ್ದು ಆಗಿದೆ. ಈ ಸುದ್ದಿ ಸ್ಯಾಂಡ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಜೋಗಿ ಪ್ರೇಮ್ ಬಾಲಿವುಡ್ ನಟಿಯ ಕೆಲವು ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಹೌದು, ಶಿಲ್ಪಾ ಶೆಟ್ಟಿ 'KD' ಸಿನಿಮಾಗಾಗಿ ಮೂರು ದಿನಗಳ ಕಾಲ ಬೆಂಗಳೂರಿಗೆ ಬಂದಿದ್ದರು. ಮೂರು ದಿನಗಳ ಕಾಲ ಈ ಸಿನಿಮಾದಲ್ಲಿರುವ ಶಿಲ್ಪಾ ಶೆಟ್ಟಿಯ ದೃಶ್ಯಗಳನ್ನು ಪ್ರೇಮ್ ಸೆರೆಹಿಡಿದಿದ್ದಾರೆ. 3 ದಿನ ಶೂಟಿಂಗ್ ಮುಗಿಸಿ ಶಿಲ್ಪಾ ಶೆಟ್ಟಿ ಮುಂಬೈಗೆ ಪಯಣ ಬೆಳೆಸಿದ್ದಾರೆ ಬಲ್ಲ ಮೂಲಗಳು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿವೆ.

Exclusive: Shilpa Shetty finished 3 Days of KD Shoot Dhruva Sarja Jogi Prem Combo

'ಯುಗಾದಿ'ಗೆ ಸತ್ಯವತಿಯ ಅನಾವರಣ

ಜೋಗಿ ಪ್ರೇಮ್ ತಮ್ಮ ಸಿನಿಮಾದ ಪ್ರತಿಯೊಂದು ಪಾತ್ರವನ್ನು ತಮ್ಮದೇ ಸ್ಟೈಲ್‌ನಲ್ಲಿ ರಿವೀಲ್ ಮಾಡುತ್ತಾರೆ. ಆದರೆ, ಶಿಲ್ಪ ಶೆಟ್ಟಿ 'KD' ಸಿನಿಮಾ ಶೂಟಿಂಗ್ ಮುಗಿಸಿ ಹಿಂತಿರುಗಿದ್ದರೂ, ಪ್ರೇಮ್ ಮಾತ್ರ ಆ ಸಂಗತಿಯನ್ನು ಗುಟ್ಟಾಗಿಯೇ ಇಟ್ಟಿದ್ದರು. ಕೊನೆಗೂ ಈ ವಿಷಯವನ್ನು ರಿವೀಲ್ ಮಾಡಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

ಯುಗಾದಿ ಹಬ್ಬಕ್ಕೆ 'KD' ತಂಡ ಸತ್ಯವತಿಯನ್ನು ಸ್ವಾಗತ ಮಾಡಲು ಮುಂದಾಗಿದೆ. " ಎರಡು ಸಾಮ್ರಾಜ್ಯಗಳ ನಡುವೆ ಯುದ್ಧ. ಅಂದ್ಮೇಲೆ ಆ ಸಾಮ್ರಾಜ್ಯಗಳಿಗೆ ಒಬ್ಬ ಪವರ್‌ಫುಲ್ ಸತ್ಯವತಿ ಬೇಕೆ ಬೇಕು. ಸತ್ಯವತಿಯನ್ನು ಸ್ವಾಗತ ಮಾಡಲು ಸಿದ್ಧರಾಗಿ" ಅನ್ನೋ ಪೋಸ್ಟರ್‌ ಅನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ. ಈ ಮೂಲಕ ಶಿಲ್ಪ ಶೆಟ್ಟಿನೇ ಸತ್ಯವತಿಯಾಗಿ ದರ್ಶನ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

17 ವರ್ಷಗಳ ಬಳಿಕ ಶಿಲ್ಪ ಶೆಟ್ಟಿ ಎಂಟ್ರಿ

ಶಿಲ್ಪಾ ಶೆಟ್ಟಿಗೆ ಕನ್ನಡ ಚಿತ್ರರಂಗ ಹೊಸತೇನು ಅಲ್ಲ. ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 2005ರಲ್ಲಿ ತೆರೆಕಂಡ 'ಆಟೋ ಶಂಕರ್' ಕೊನೆಯ ಸಿನಿಮಾ. ಆ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ ಕಡೆ ಮುಖ ಮಾಡಿರಲಿಲ್ಲ. ಈಗ 'KD' ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

1998ರಲ್ಲಿ ಶಿಲ್ಪ ಶೆಟ್ಟಿ 'ಪ್ರೀತ್ಸೋದ್ ತಪ್ಪಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಒಂದಾಗೋಣ ಬಾ' ಚಿತ್ರದಲ್ಲಿ ಕನ್ನಡಕ್ಕೆ ಬಂದಿದ್ದರು. ಆ ಬಳಿಕ 2005ರಲ್ಲಿ ಉಪ್ಪಿ ಜೊತೆ 'ಆಟೋ ಶಂಕರ್' ಸಿನಿಮಾದಲ್ಲಿ ನಟಿಸಿದ್ದರು. ಏನೇ ಇದ್ರೂ, ಸತ್ಯವತಿಯ ಲುಕ್ ಇದೇ ಮಾರ್ಚ್ 22ರಂದು 11.31ಕ್ಕೆ ರಿವೀಲ್ ಆಗಲಿದೆ. ಅಲ್ಲಿವರೆಗೂ ಕಾಯಲೇಬೇಕು.

More from Filmibeat

English summary
Exclusive: Shilpa Shetty finished 3 Days of KD Shoot Dhruva Sarja Jogi Prem Combintion. Shilpa Shetty finished 3 days of her kd shoot. KDTeam Planning to wellcome shilpa shetty as satyavati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X