'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಷ್ಟೇ ಅಲ್ಲ.. ಪಾರ್ಕಿಂಗ್‌ನಿಂದಲೂ ಭರ್ಜರಿ ಕಲೆಕ್ಷನ್; ಎಲ್ಲೆಲ್ಲಿ ಎಷ್ಟೆಷ್ಟು?
'ಕಾಂತಾರ' ಬಳಿಕ ಸ್ಯಾಂಡಲ್‌ವುಡ್ ಕಡೆಗೆ ಪರಭಾಷೆಯ ಸಿನಿಮಾ ಮಂದಿನೂ ತಿರುಗಿ ನೋಡುವಂತಾಗಿದೆ. ಮತ್ತೆ ಮೂರು ವರ್ಷಗಳ ಹಿಂದಿನ ಕನ್ನಡ ಚಿತ್ರರಂಗ ಕಣ್ಮುಂದೆ ಬರುತ್ತಿದೆ. ಸಿನಿಮಾಗಳನ್ನು ಮಾಡಿ ಸೋತು ಸೋತು ಸುಣ್ಣವಾಗಿದ್ದ ಸಿನಿಮಾ ಮಂದಿಯ ಮುಖ ಅರಳಿದೆ. 'ಸು ಫ್ರಮ್ ಸೋ' ಕನ್ನಡ ಫಿಲ್ಮ್ ಮೇಕರ್ಸ್‌ಗೆ ಮತ್ತೆ ಭರವಸೆಯ ಬೆಳಕಾಗಿ ಕಂಡಿದೆ. ಪ್ರತಿ ದಿನ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.
ಕಳೆದ ಮೂರು ವರ್ಷಗಳಿಂದ ಥಿಯೇಟರ್ ಮಾಲೀಕರು ಮಂಕಾಗಿದ್ದರು. ಒಂದೊಂದು ವಾರಕ್ಕೆ ಸೊರಗಿ ಹೋಗುತ್ತಿದ್ದ ಸಿನಿಮಾಗಳನ್ನು ಕಂಡು ಹತಾಶರಾಗುತ್ತಿದ್ದರು. ಒಂದು ಕಾಲದಲ್ಲಿ ಥಿಯೇಟರ್ ಮುಂದೆ ಸಾಲು ಸಾಲು ವಾಹನಗಳು ಕಿಕ್ಕಿರಿದು ಪಾರ್ಕ್ ಮಾಡುತ್ತಿದ್ದವು. ಆದರೆ, ಈ ಮೂರು ವರ್ಷಗಳಲ್ಲಿ ಒಂದೆರಡು ಸಿನಿಮಾಗಳು ಬಿಟ್ಟರೆ, ಥಿಯೇಟರ್ ಪಾರ್ಕಿಂಗ್ ಜಾಗ ತುಂಬುತ್ತಲೇ ಇರಲಿಲ್ಲ. ಈಗ 'ಸು ಫ್ರಮ್ ಸೋ' ರಿಲೀಸ್ ಆದಲ್ಲಿಂದ ಸಿಂಗಲ್ ಸ್ಕ್ರೀನ್‌ಗಳ ಮುಂದೆ ವಾಹನ ದಟ್ಟನೆ ನೋಡಿ ಮಾಲೀಕರು ಖುಷಿಯಾಗಿದ್ದಾರೆ.

ಯಾಕಂದ್ರೆ, ಪಾರ್ಕಿಂಗ್‌ನಿಂದಲೂ ಥಿಯೇಟರ್ ಮಾಲೀಕರು ಒಂದಿಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದರು. ಪ್ರತಿ ಶೋಗೂ ಪಾರ್ಕಿಂಗ್ ಫುಲ್ ಆದರೆ, ಸಾವಿರಾರು ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು. ಒಂದು ವಾರ ಚಿತ್ರಮಂದಿರ ಕಿಕ್ಕಿರಿದು ತುಂಬಿದರೆ, ಲಕ್ಷದಲ್ಲಿ ಎಣಿಸುತ್ತಿದ್ದರು. ಅದು ನೋಡದೆ ಅದೆಷ್ಟೋ ವರ್ಷಗಳೇ ಆಗಿತ್ತು. ಈಗ 'ಸು ಫ್ರಮ್ ಸೋ'ನಿಂದ ಪಾರ್ಕಿಂಗ್ ಫೀ ಕೂಡ ಭರ್ಜರಿಯಾಗಿ ಕಲೆಕ್ಷನ್ ಆಗುತ್ತಿದೆ ಅನ್ನೋದನ್ನು ಕೇಳಿ ಸಿನಿಮಾ ಮಂದಿಯ ಮುಖದಲ್ಲಿ ಮಂದಹಾಸ ಮೂಡಿದೆ. ಹಾಗಿದ್ದರೆ, ಪಾರ್ಕಿಂಗ್ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಥಿಯೇಟರ್ ಮುಂದೆ ಪಾರ್ಕಿಂಗ್ ಫುಲ್
ಥಿಯೇಟರ್ ಮುಂದೆ ಹೌಸ್‌ಫುಲ್ ಬೋರ್ಡ್ ಬೀಳೋದು ಕಾಮನ್. ಆದರೆ, ಪಾರ್ಕಿಂಗ್ ಫುಲ್ ಬೋರ್ಡ್ ಬಿದ್ದನ್ನು ಇತ್ತೀಚೆಗೆ ನೋಡಿದ್ದು ಅಪರೂಪ. 'ಸು ಫ್ರಮ್ ಸೋ' ಅಂತಹ ಸ್ಮಾಲ್ ಬಜೆಟ್ ಸಿನಿಮಾವೊಂದು ಥಿಯೇಟರ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇಲ್ಲಿವರೆಗೂ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಅಷ್ಟೇ ಸದ್ದಾಗುತ್ತಿತ್ತು. ಆದರೆ, ಪಾರ್ಕಿಂಗ್‌ನಿಂದಲೂ ಭರ್ಜರಿ ಕಲೆಕ್ಷನ್ ಆಗುತ್ತಿದೆ ಅನ್ನೋದು ನಿಮಗೆ ಗೊತ್ತೇ? ಉದಾಹರಣೆಗೆ ಬೆಂಗಳೂರಿನ ಎರಡು ಚಿತ್ರಮಂದಿರಗಳ ಪಾರ್ಕಿಂಗ್ ಕಲೆಕ್ಷನ್ ರಿಪೋರ್ಟ್ ಹೀಗಿದೆ.
ಪಾರ್ಕಿಂಗ್‌ನಿಂದ ಎಷ್ಟು ಕಲೆಕ್ಷನ್?
'ಸು ಫ್ರಮ್ ಸೋ' ಪಾರ್ಕಿಂಗ್ ಕಲೆಕ್ಷನ್ ಬಗ್ಗೆ ಸಿನಿಮಾ ಮಂದಿ ಚರ್ಚೆ ಮಾಡುವಂತಾಗಿದೆ. ಚಿತ್ರಮಂದಿರಗಳು ಹೌಸ್‌ಪುಲ್ ಕಾಣುತ್ತಿರುವುದರಿಂದ ಪಾರ್ಕಿಂಗ್‌ನಲ್ಲಿ ದ್ವಿಚಕ್ರ ಹಾಗೂ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿವೆ. ಬೆಂಗಳೂರಿನ ಊರ್ವಶಿ ಎನ್ನುವ ಚಿತ್ರಮಂದಿರದಲ್ಲಿ 'ಸು ಫ್ರಮ್ ಸೋ' ಸಿನಿಮಾದ ಎರಡು ಶೋ ಪ್ರದರ್ಶನ ಆಗುತ್ತಿವೆ. ಮೊದಲ ವಾರ ಸುಮಾರು 14 ಶೋಗಳನ್ನು ಪ್ರದರ್ಶನ ಮಾಡಲಾಗಿದೆ. ಅಷ್ಟೂ ಶೋಗಳು ಹೌಸ್‌ಫುಲ್ ಆಗಿವೆ. ಹೀಗಾಗಿ ಚಿತ್ರಮಂದಿರದ ಸಿಬ್ಬಂದಿಯೊಬ್ಬರು ಕೊಟ್ಟ ಲೆಕ್ಕಾಚಾರ ಹೀಗಿದೆ.

ಊರ್ವಶಿ ಥಿಯೇಟರ್ ಸೀಟಿಂಗ್ ಕ್ಯಪಾಸಿಟಿ 1100
ಒಂದು ವಾರದಲ್ಲಿ ಪ್ರದರ್ಶನ ಕಂಡ ಶೋಗಳು 14
ಪ್ರತಿಶೋಗೆ 180 ಕಾರು+ 400 ಬೈಕ್‌ಗಳು ಪಾರ್ಕಿಂಗ್ (ಅಂದಾಜು)
ಒಂದು ಕಾರು ಪಾರ್ಕಿಂಗ್ ಫೀ 50 ರೂ.+ ಬೈಕ್ ಫೀ 30 ರೂ.
ಲಕ್ಷ್ಮಿ ತಾವರೆಕೆರೆ ಥಿಯೇಟರ್
ಒಂದು ವಾರದಲ್ಲಿ ಪ್ರದರ್ಶನ ಕಂಡ ಶೋಗಳು 24
ಪ್ರತಿಶೋಗೆ 50 ಕಾರು+ 150 ಬೈಕ್‌ಗಳು ಪಾರ್ಕಿಂಗ್ (ಅಂದಾಜು)
ಒಂದು ಕಾರು ಪಾರ್ಕಿಂಗ್ ಫೀ 50 ರೂ.+ ಬೈಕ್ ಫೀ 20 ರೂ.
"ಕಾಂತಾರ ಆದ್ಮೇಲೆ ಅಂತಹದ್ದೊಂದು ಸಿನಿಮಾ ನೋಡುತ್ತಿರೋದು 'ಸು ಫ್ರಮ್ ಸೋ' ಸಿನಿಮಾದಿಂದಲೇ. ಇಂತಹ ಸಿನಿಮಾಗಳು ಬಂದರೆ ಥಿಯೇಟರ್‌ಗಳು ಬೆಳವಣಿಯಾಗುತ್ತೆ. ಥಿಯೇಟರ್‌ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಸಂಬಳ ಸಿಕ್ಕುತ್ತೆ. ಆಮೇಲೆ ಥಿಯೇಟರ್ ಪಾರ್ಕಿಂಗ್‌ನಿಂದಲೂ ಒಳ್ಳೆಯ ಕಲೆಕ್ಷನ್ ಆಗುತ್ತೆ.
ಇಷ್ಟೇ ಅಲ್ಲ ಕ್ಯಾಂಟಿನ್‌ನಿಂದಲೂ ಹಣ ಒಳ್ಳೆಯ ಕಲೆಕ್ಷನ್ ಆಗಿದೆ. ಇದರಿಂದ ಒಂದಿಷ್ಟು ಮಂದಿಗೆ ಕೆಲಸನೂ ಸಿಕ್ಕಿದೆ. ಊರ್ವಶಿ ಹಾಗೂ ಲಕ್ಷ್ಮಿ ಥಿಯೇಟರ್‌ಗಳಲ್ಲಿ ಇಷ್ಟಾಗಿರಬೇಕಾದರೆ, ಕರ್ನಾಟಕದಾದ್ಯಂತ ಎಷ್ಟಾಗಿರಬಹುದು ಯೋಚನೆ ಮಾಡಿದೆ. ಮೊದಲ ಸುಮಾರು 138 ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ." ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಥಿಯೇಟರ್ ಸಿಬ್ಬಂದಿ.
ಒಟ್ನಲ್ಲಿ 'ಸು ಫ್ರಮ್ ಸೋ' ಸಿನಿಮಾದಿಂದ ಸಿಂಗಲ್ ಸ್ಕ್ರೀನ್‌ಗಳಿಗೆ ಮತ್ತೆ ಜೀವ ಬಂದಂತಾಗಿದೆ. ಜನರು ಸಿಂಗಲ್ ಸ್ಕೀನ್‌ಗಳಿಗೆ ಜನರು ಬರುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಚಿತ್ರಮಂದಿರಗಳು ತುಂಬಿದ ಪ್ರದರ್ಶನ ಕಾಣುತ್ತಿವೆ.


Click it and Unblock the Notifications











