UI Box Office:ಸಿಂಗಲ್ ಸ್ಕ್ರೀನ್‌ಗಳಲ್ಲಿ 'ಯುಐ' ಅಬ್ಬರ; ಊರ್ವಶಿಯಲ್ಲಿ ₹19 ಲಕ್ಷ.. ಬೇರೆ ಥಿಯೇಟರ್‌ಗಳಲ್ಲಿ ಗಳಿಸಿದ್ದೆಷ್ಟು?
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮೊದಲ ಮೂರು ದಿನಗಳಲ್ಲಿ ಹೆಚ್ಚು ಕಡಿಮೆ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಉಪೇಂದ್ರ ನಿರ್ದೇಶನದ ಸಿನಿಮಾ ಆಗಿದ್ದರಿಂದ 'ಯುಐ' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೊದಲ ದಿನವೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಹೀಗಿದ್ದರೂ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ಮೊದಲ ಮೂರು ದಿನ ಉಪೇಂದ್ರ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದಕ್ಕೆ ಸಿನಿಮಾ ಮಂದಿ ಖುಷಿಯಾಗಿದ್ದಾರೆ. ಕನ್ನಡ ಹಾಗೂ ಕನ್ನಡೇತರ ಚಿತ್ರಮಂದಿರಗಳಲ್ಲಿ 'ಯುಐ' ಸಿನಿಮಾಗಳಿಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.

ಇತ್ತೀಚೆಗೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಿನಿಮಾ ನೋಡುವುದಕ್ಕೆ ಜನರು ಬರುತ್ತಿಲ್ಲ. ಕನ್ನಡದ ಐಕಾನಿಕ್ ಥಿಯೇಟರ್‌ಗಳು ಮುಚ್ಚುತ್ತಿವೆ ಅನ್ನೋ ಆತಂಕ ಶುರುವಾಗಿತ್ತು. ಈ ಬೆನ್ನಲ್ಲೇ ಸಿಂಗಲ್ ಸ್ಕ್ರೀನ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಬೆಂಗಳೂರು, ಮೈಸೂರು ಅಂತಹ ನಗರಗಳಲ್ಲಿ ಸಿಂಗಲ್ ಸ್ಕ್ರೀನ್‌ಗಳು ಲಕ್ಷ ಲೆಕ್ಕದಲ್ಲಿ ಕಲೆಕ್ಷನ್ ಮಾಡಿವೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ಮೂರು ದಿನ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಊರ್ವಶಿ ಚಿತ್ರಮಂದಿರದಲ್ಲೆಷ್ಟು ಕಲೆಕ್ಷನ್?
ದಕ್ಷಿಣ ಬೆಂಗಳೂರಿನಲ್ಲಿರುವ ಊರ್ವಶಿ ಚಿತ್ರಮಂದಿರ ಪರಭಾಷೆಯ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದ್ದು, ಇಲ್ಲಿ ಕನ್ನಡ ಸಿನಿಮಾಗಳಿಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶಿಸಿದ 'ಯುಐ' ಕೂಡ ರಿಲೀಸ್ ಆಗಿತ್ತು. ಮೊದಲ ಮೂರು ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮೊದಲ ಮೂರು ದಿನ 18 ಲಕ್ಷ ರೂಪಾಯಿ (Nett) ಕಲೆಕ್ಷನ್ ಮಾಡಿದೆ ಎಂದು ವಿತರಕರು ಲೆಕ್ಕ ಕೊಡುತ್ತಿದ್ದಾರೆ.

ಊರ್ವಶಿಯಲ್ಲಿ
ಮೊದಲ ದಿನ - 8.20 ಲಕ್ಷ ರೂ.
ಎರಡನೇ ದಿನ - 5.38 ಲಕ್ಷ ರೂ.
ಮೂರನೇ ದಿನ - 4.48 ಲಕ್ಷ ರೂ.
ಒಟ್ಟು - 18.06 ಲಕ್ಷ ರೂ.
ಕನ್ನಡದ ಚಿತ್ರಮಂದಿರಗಳಲ್ಲಿ ಎಷ್ಟು?
ಬೆಂಗಳೂರಿನ ಅಪ್ಪಟ ಕನ್ನಡದ ಚಿತ್ರಮಂದಿರಗಳಲ್ಲೂ ಕೂಡ ಕಲೆಕ್ಷನ್ ಉತ್ತಮವಾಗಿ ಆಗಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರ ಸಂತೋಷ್, ವೀರೇಶ್, ಸಿದ್ದೇಶ್ವರ, ಬಾಲಾಜಿ ಅಂತಹ ಥಿಯೇಟರ್‌ಗಳು ಲಕ್ಷ ಲೆಕ್ಕದಲ್ಲಿ ಕಲೆಕ್ಷನ್ ಮಾಡಿವೆ. ಸಿಂಗಲ್ ಸ್ಕ್ರೀನ್ ಕಣ್ಮರೆಯಾಗುತ್ತಿವೆ ಅನ್ನೋ ಆತಂಕದ ನಡುವೆ ಭರ್ಜರಿ ಕಲೆಕ್ಷನ್ ಮಾಡಿದ್ದು ಸಮಾಧಾನ ಕೊಟ್ಟಿದೆ. ಇಂತಹ ಚಿತ್ರಮಂದಿರಗಳ ಕಲೆಕ್ಷನ್ ಇಲ್ಲಿದೆ.
ಸಂತೋಷ್ - 13 ಶೋಗಳು -12 ಲಕ್ಷ ರೂ.
ವೀರೇಶ್ - 16 ಶೋಗಳು - 13 ಲಕ್ಷ ರೂ.
ಸಿದ್ದೇಶ್ವರ - 16 ಶೋಗಳು - 12 ಲಕ್ಷ ರೂ.
ಬಾಲಾಜಿ - 16 ಶೋಗಳು - 13 ಶೋ ರೂ.
ಬೇರೆ ಜಿಲ್ಲೆಗಳಲ್ಲೂ ಭರ್ಜರಿ ಕಲೆಕ್ಷನ್
ಇನ್ನು ವಿತರಕರ ವಲಯಕ್ಕೆ ಸಿಕ್ಕಿರುವ ಸಿಂಗಲ್ ಸ್ಕ್ರೀನ್ ಕಲೆಕ್ಷನ್ ಲೆಕ್ಕಾಚಾರ ಉಪ್ಪಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ 14 ಶೋಗಳನ್ನು ಪ್ರದರ್ಶನ ಮಾಡಲಾಗಿದ್ದು, 13 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಮೈಸೂರಿನ ವುಡ್‌ಲ್ಯಾಂಡ್ಸ್‌ನಲ್ಲಿ 13 ಶೋಗಳಿಂದ 12 ಲಕ್ಷ ರೂ., ಮೈಸೂರಿನ ಗಾಯತ್ರಿ ಚಿತ್ರಮಂದಿರದಿಂದ 13 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ನಿರ್ಧಿರಿಸಿದೆ.
ಸೋಮವಾರ ಪರೀಕ್ಷೆ ಗೆಲ್ಲಬೇಕು
ಮೊದಲ ಮೂರು ದಿನಗಳು ಉಪೇಂದ್ರ ನಿರ್ದೇಶಿಸಿದ 'ಯುಐ' ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದಷ್ಟೇ ಚಿತ್ರಮಂದಿರಗಳಲ್ಲ. ಇನ್ನೂ ಹಲವು ಸಿಂಗಲ್ ಸ್ಕ್ರೀನ್‌ಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಇನ್ನು ಸೋಮವಾರದಿಂದ 'ಯುಐ' ಕಲೆಕ್ಷನ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ. 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಬಾಕ್ಸಾಫೀಸ್ ಕಲೆಕ್ಷನ್ ಹೇಗಿರುತ್ತೆ ಅನ್ನೋದು ಟೆನ್ಷನ್ ಕೂಡ ಇದೆ. ಇದೆಲ್ಲವನ್ನೂ ಗೆದ್ದರೆ, 'ಯುಐ' ಬಾಕ್ಸಾಫೀಸ್‌ನಲ್ಲಿ 30 ರಿಂದ 40 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು.
Disclaimer: ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಯುಐ ತಂಡ ಹಾಗೂ ಚಿತ್ರಮಂದಿರಗಳು ಅಧಿಕೃತವಾಗಿ ಹೇಳಬೇಕಿದೆ.


Click it and Unblock the Notifications











