Fact Check: ಡೆವಿಲ್ ಸಿನಿಮಾಗೆ ಶುಭ ಕೋರಿದರೇ ಕಿಚ್ಚ? ಅಸಲಿಗೆ 'X' ಪೋಸ್ಟ್‌ನ ಅಸಲಿಯತ್ತೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ರಿಲೀಸ್ ಆಗುತ್ತಿದೆ. ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ತಂಡ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳು ಕೂಡ ಎರಡು ವಾರಕ್ಕೆ ಮುನ್ನವೇ ಥಿಯೇಟರ್‌ಗಳನ್ನು ಸಿಂಗಾರ ಮಾಡಿಟ್ಟುಕೊಂಡು ಕೂತ್ತಿದ್ದಾರೆ. ಮೊದಲು ಈ ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗುತ್ತೆಂದು ಅನೌನ್ಸ್ ಮಾಡಿದ್ದರು. ಆದ್ರೀಗ ಒಂದು ದಿನ ಸಿನಿಮಾವನ್ನು ಪ್ರೀಪೋಸ್ ಮಾಡಿಕೊಂಡು ಡಿಸೆಂಬರ್ 11ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜೈಲಿನಲ್ಲಿದ್ದಾರೆ. ಹೀಗಾಗಿ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. 'ಡೆವಿಲ್'ನ ಉಳಿದ ಸದಸ್ಯರು ಹಾಗೂ ಅಭಿಮಾನಿಗಳೇ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.

ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ 'ಡೆವಿಲ್' ಸಿನಿಮಾಗೆ ಕಿಚ್ಚ ಸುದೀಪ್ ಶುಭ ಕೋರಿದ್ದಾರೆಂಬ ಪೋಸ್ಟ್ ಒಂದು ಹರಿದಾಡುತ್ತಿದೆ. ಈ ಪೋಸ್ಟ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಅಸಲಿಗೆ ಈ ಪೋಸ್ಟ್‌ನಲ್ಲಿ ಕಿಚ್ಚ ಸುದೀಪ್ ಏನಂತ ಶುಭ ಕೋರಿದ್ದಾರೆ? ಮೈಮಸ್ಸು ಮರೆತು ದರ್ಶನ್ ವಿಶ್ ಮಾಡಿದರೇ? ಈ ಪೋಸ್ಟ್‌ನ ಅಸಲಿಯತ್ತೇನು? ತಿಳಿಯುವುದಕ್ಕೆ ಮುಂದೆ ಓದಿ.
ಸುದೀಪ್ ಹಾಗೂ ದರ್ಶನ್ ಒಂದು ಕಾಲದ ಕುಚಿಕು ಗೆಳೆಯರು. ಒಂದು ಕಾಲದಲ್ಲಿ ಇವರಿಬ್ಬರನ್ನೂ ವಿಷ್ಣುದಾದ ಹಾಗೂ ಅಂಬರೀಶ್‌ಗೆ ಹೋಲಿಕೆ ಮಾಡುತ್ತಿದ್ದರು. ಇಷ್ಟೊಂದು ಅನ್ಯೋನ್ಯವಾಗಿದ್ದ ಗೆಳೆಯರು ಕೆಲವು ಕಾರಣಕ್ಕೆ ಬೇರೆಯಾಗಿದ್ದಾರೆ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಪ್ರೀತಿ ಇದ್ದರೂ ಅದನ್ನು ಕ್ಯಾಮರಾ ಮುಂದೆ ತೋರಿಸಿಕೊಳ್ಳುತ್ತಿಲ್ಲ. ಒಬ್ಬರ ಬಗ್ಗೆ ಇನ್ನೊಬ್ಬರು ಮಾತಾಡುತ್ತಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದ ಸಂದರ್ಶನದಲ್ಲಿಯೂ ಕಿಚ್ಚ ಸುದೀಪ್ ಕೊಟ್ಟ ಹೇಳಿಕೆಗೆ ಮೆಚ್ಚುಗೆ ವ್ಯಕ್ತವಾಗಿದ್ದವು. ದರ್ಶನ್ ಅಭಿಮಾನಿಗಳೇ ಮೆಚ್ಚುಗೆ ಸೂಚಿಸಿದ್ದರು. ಇವರಿಬ್ಬರ ಗೆಳೆತನ ಇಷ್ಟಕ್ಕೆ ಸೀಮಿತವಾಗಿದೆ. ಹೀಗಿರುವಾಗ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ದರ್ಶನ್ ಸಿನಿಮಾ 'ಡೆವಿಲ್'ಗೆ ಶುಭ ಕೋರಿದ್ರಾ? ವೈರಲ್ ಆಗುತ್ತಿರುವ ಪೋಸ್ಟ್ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.

ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಈ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದೆ. ಇದರ ಅಸಲಿಯತ್ತು ಏನು ಅಂತ ನೋಡುವುದಾರೇ, ಇದು ಕಿಚ್ಚ ಸುದೀಪ್ ಹೆಸರಲ್ಲಿ ಕ್ರಿಯೇಟ್ ಮಾಡಿರುವ ನಕಲಿ ಖಾತೆ. ಇದಕ್ಕೆ ಬ್ಯೂ ಟಿಕ್ ಕೂಡ ಇರುವುದರಿಂದ ನೆಟ್ಟಿಗರು ಒಂದು ಕ್ಷಣಕ್ಕೆ ಕನ್ಫ್ಯೂಸ್ ಆಗಿದ್ದು ನಿಜ. ಆದರೆ, ಆ ಖಾತೆಯ ಕೆಳಗೆ ಪರೋಡಿ ಅಕೌಂಟ್ ಎಂದು ಹೇಳಲಾಗಿದೆ. ಹೀಗಾಗಿ ಈ ಸಿನಿಮಾ ನಕಲಿ ಖಾತೆ. ಕಿಚ್ಚ ಸುದೀಪ್ 'ಡೆವಿಲ್' ಸಿನಿಮಾಗೆ ವಿಶ್ ಮಾಡಿ ಯಾವುದೇ ಪೋಸ್ಟ್ ಇದೂವರೆಗೂ ಮಾಡಿಲ್ಲ.
ಇನ್ನು ಡಿಸೆಂಬರ್ 11ರಂದು ರಿಲೀಸ್ ಆಗುತ್ತಿರುವ 'ಡೆವಿಲ್' ಸಿನಿಮಾ ಬಾಕ್ಸಾಫೀಸ್ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ಯಾವ ಮಟ್ಟಿಗೆ ಕಲೆಕ್ಷನ್ ಮಾಡುತ್ತೆ ಎನ್ನುವುದನ್ನು ಇಡೀ ಚಿತ್ರರಂಗ ಎದುರು ನೋಡುತ್ತಿದೆ. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಸಿನಿಮಾ ಕರ್ನಾಟದಲ್ಲಿ ಸುಮಾರು 300ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇನ್ನೂ ಚಿತ್ರತಂಡದ ಸದಸ್ಯರು 'ಡೆವಿಲ್' ಪ್ರಚಾರದಲ್ಲಿ ತೊಡಗಿದ್ದಾರೆ. ಶೀಘ್ರದಲ್ಲಿಯೇ ಟ್ರೇಲರ್ ಕೂಡ ರಿಲೀಸ್ ಆಗುತ್ತಿದೆ.


Click it and Unblock the Notifications











