ವಿಜಯ್ ದೇವರಕೊಂಡ-ರಶ್ಮಿಕಾ ಮದುವೆ ಬಂದರೇ ಮುಕೇಶ್ ಅಂಬಾನಿ? ಏನಿದರ ಅಸಲಿಯತ್ತು?
ಭಾರತೀಯ ಚಿತ್ರರಂಗದ ಫೇವರಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಇವರಿಬ್ಬರ ಲವ್ ಸ್ಟೋರಿ ಈಗ ವೈವಾಹಿಕ ರೂಪ ಪಡೆದುಕೊಳ್ಳುತ್ತಿದೆ. ಇದೇ ತಿಂಗಳು ಅಂದರೆ, ನಾಳೆ (ಫೆಬ್ರವರಿ 26) ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಈಗಾಗಲೇ ಗಣ್ಯರು ಕೂಡ ಆಗಮಿಸುತ್ತಿದ್ದಾರೆ. ರಾಜಸ್ಥಾನ ವಿಜಯ್-ರಶ್ಮಿಕಾ ವಿವಾಹದ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ನಿನ್ನೆಯಿಂದ ಈ ಜೋಡಿಯ ಮದುವೆಗೆ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮದುವೆಗೆ ಬಂದಿಳಿದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬದ ರಾಜಸ್ಥಾನಕ್ಕೆ ಬಂದಿಳಿದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮುಕೇಶ್ ಅಂಬಾನಿ ಮದುವೆ ಬಂದಿರೋದು ಅವರಿಬ್ಬರ ಅಭಿಮಾನಿಗಳಿಗೂ ಅಚ್ಚರಿಯಾಗಿತ್ತು.

ವಿಜಯ್-ರಶ್ಮಿಕಾ ಮಂದಣ್ಣ ಜೋಡಿ ವಿವಾಹಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಮುಕೇಶ್ ಅಂಬಾನಿ ಮದುವೆ ಬಂದಿರೋ ಸುದ್ದಿನೂ ಕೂಡ ಅಷ್ಟೇ ಸದ್ದು ಮಾಡಿತ್ತು. ಆದರೆ, ಅಸಲಿ ಮ್ಯಾಟರ್ ಬೇರೆನೇ ಇದೆ. ಮುಕೇಶ್ ಅಂಬಾನಿ ಈ ಜೋಡಿ ಮದುವೆ ಬಂದಿರಲಿಲ್ಲ. ಅವರು ಬಂದಿದ್ದೇ ಬೇರೆ ಕಾರಣಕ್ಕೆ ಎಂದೂ ವರದಿಯಾಗಿದೆ. ಅಸಲಿಗೆ ಏನಿದು ಮ್ಯಾಟರ್? ತಿಳಿಯುವುದಕ್ಕೆ ಮುಂದೆ ಓದಿ.
ಉದಯಪುರದ ಐಷಾರಾಮಿ ಐಟಿಸಿ ಮೆಮೆಂಟೋಸ್ ಅರಮನೆಯಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಅರಮನೆಯ ಒಂದು ದಿನ ಬಾಡಿಗೆ ಲಕ್ಷಗಳಲ್ಲಿ ದಾಡುತ್ತೆ ಎಂದು ಹೇಳಾಗುತ್ತಿದೆ. ಮದುವೆಗೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ನಿನ್ನೆಯ ಕ್ಯಾಂಡಲ್‌ಲೈಟ್ ಡಿನ್ನರ್, ಸ್ವಿಮ್ಮಿಂಗ್ ಪೂಲ್ ವಾಲಿಬಾಲ್ ಆಟ ಹಾಗೂ ಪಾರ್ಟಿ ಸೇರಿದಂತೆ ಪೂರ್ವ-ವಿವಾಹ ಸಂಭ್ರಮಗಳು ಪ್ರಾರಂಭವಾಗಿವೆ. ಔತಣಕೂಟದಲ್ಲಿ ಜಪಾನೀ ತಿನಿಸುಗಳನ್ನು ಬಡಿಸಲಾಗಿದೆ. ವೇದಿಕೆಯ ಮೇಲೆ 'VIROSH' ಎಂದು ಕಸೂತಿಯನ್ನೂ ಮಾಡಿಸಿ, ಅಲಂಕಾರ ಮಾಡಲಾಗಿತ್ತು.

ಮದುವೆ ಮಧ್ಯೆ ಮೆಹಂದಿ, ಅರಿಶಿಣ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮಗಳು ಕೂಡ ನಡೆದಿವೆ. ಮದುವೆ ಮುನ್ನ ಕುಟುಂಬದ ಸದಸ್ಯರಿಗಾಗಿ ಕ್ರಿಕೆಟ್ ಪಂದ್ಯಗಳು ಕೂಡ ನಡೆದಿವೆ. ಈ ಮಧ್ಯೆ ಮುಕೇಶ್ ಅಂಬಾನಿ ಕುಟುಂಬದೊಂದಿಗೆ ಆಗಮಿಸಿದ್ದಾರೆಂದು ಗುಲ್ಲೆದಿದ್ದತ್ತು. ಆದರೆ, ಮುಕೇಶ್ ಅಂಬಾನಿ ರಾಜಸ್ಥಾನಕ್ಕೆ ಬಂದಿದ್ದು ನಿಜ. ಆದರೆ, ಅದು ಇವರ ಮದುವೆಗಲ್ಲ, ಬದಲಾಗಿ ದೇವರ ದರ್ಶನ ಪಡೆಯುವುದಕ್ಕೆ ಎಂಬುದು ಅಸಲಿ ಸಂಗತಿ.
ಹೌದು, ಮುಕೇಶ್ ಅಂಬಾನಿ ರಾಜಸ್ಥಾನಕ್ಕೆ ಬಂದಿದ್ದಕ್ಕೂ ವಿಜಯ್-ರಶ್ಮಿಕಾ ಮದುವೆಗೂ ಯಾವುದೇ ಸಂಬಂಧವಿಲ್ಲ. ಇದು ಅವರು ಶ್ರೀನಾಥ್‌ಜಿ ದೇವಸ್ಥಾನಕ್ಕೆ ಕುಟುಂಬದೊಂದು ವಿಸಿಟ್ ಹಾಕುವುದಕ್ಕೆ ಬಂದಿದ್ದಾರೆ. ಆದರೆ, ವಿಜಯ್ ಹಾಗೂ ರಶ್ಮಿಕಾ ಮದುವೆಗೆ ಬರುತ್ತಾರಾ? ಇಲ್ವಾ? ಅನ್ನೋದು ಕೂಡ ಇನ್ನೂ ಕನ್ಫರ್ಮ್ ಆಗಿಲ್ಲ. ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ವಿಮಾನ ನಿಲ್ದಾಣದಿಂದ ಹೊರ ಬರುವ ದೃಶ್ಯವನ್ನು ಪಾಪರಾಜಿಗಳು ಸೆರೆ ಹಿಡಿದಿದ್ದರು. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ.
ಈಗಾಗಲೇ ಈ ಮದುವೆ ಸಲ್ಮಾನ್ ಖಾನ್, ಸಂದೀಪ್ ರೆಡ್ಡಿ ವಂಗಾ, ಕೀರ್ತಿ ಸುರೇಶ್, ಅಲ್ಲು ಅರ್ಜುನ್ ಸೇರಿದಂತೆ ಹಲವು ಗಣ್ಯರ ಭಾಗವಹಿಸುವ ನಿರೀಕ್ಷೆ ಇದೆ. ಅತಿಥಿಗಳ ವಾಸ್ತವ್ಯಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ 100 ಬೌನ್ಸರ್‌ಗಳನ್ನು ಕೋಟಿ ಕೋಟಿ ವೆಚ್ಚದಲ್ಲಿ ನಿಯೋಜಿಸಲಾಗಿದೆ.


Click it and Unblock the Notifications