ನಿನ್ನೆ ಹಳದಿ ಶಾಸ್ತ್ರ.. ಇಂದು ಮದುವೆ.. ಗೆಳೆಯನೊಂದಿಗೆ ಹಸೆಮಣೆ ಏರಲು ಸಜ್ಜಾದ ಆಂಕರ್ ಅನುಶ್ರೀ

ಮದುವೆ ಆಗುವುದಕ್ಕೆ ಆಂಕರ್ ಅನುಶ್ರೀಗೆ ಅರ್ಜೆಂಟ್ ಇತ್ತೋ ಇಲ್ಲೋ ಗೊತ್ತಿಲ್ಲ.ಆದರೆ, ಅವರ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಆತರವಿತ್ತು. ಸೋಶಿಯಲ್ ಮೀಡಿಯಾದ ಒಂದು ಪೋಸ್ಟ್ ಹಾಕುವ ಹಾಗಿಲ್ಲ. ನಿಮ್ಮ ಮದುವೆ ಯಾವಾಗ ಅಂತ ಅವರನ್ನು ಕಾಡುವುದಕ್ಕೆ ಶುರು ಮಾಡುತ್ತಿದ್ದರು. ಇತ್ತ ಹೇಳುವುದಕ್ಕೂ ಆಗದೆ. ಅತ್ತ ಹೇಳದೆ ಸುಮ್ಮನೆ ಇರುವುದಕ್ಕೂ ಆಗದೇ ಅನುಶ್ರೀ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೂ ಕೂಡ ಇದೆ.

ಕೊನೆಗೂ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದ್ದಾರೆ. ಇಂದು (ಆಗಸ್ಟ್ 28) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುದಿನದ ಗೆಳೆಯನೊಂದಿಗೆ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹಕ್ಕೂ ಮುನ್ನ ಅನುಶ್ರೀ ವಿವಾಹ ಪೂರ್ವ ನಡೆದ ಹಳದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

Famous Kannada Anchor Anushree amp amp Roshan s Haldi Ceremony and Wedding Details

ಅನುಶ್ರೀ ಬಹಳ ದಿನಗಳಿಂದ ಕೊಡಗು ಮೂಲದ ರೋಷನ್ ಎಂಬುವವರನ್ನು ಪ್ರೀತಿ ಮಾಡುತ್ತಿದ್ದರು. ಹೀಗಾಗಿ ಮದುವೆ ಬಗ್ಗೆ ಕೇಳಿದಾಗ ಅವರು ಪ್ರತಿಕ್ರಿಯೆ ನೀಡದ ತಮ್ಮ ಲವ್ ಸ್ಟೋರಿಯನ್ನು ಗೌಪ್ಯವಾಗಿ ಇಟ್ಟಿದ್ದರು. ಕಳೆದ ವರ್ಷ ಜೀ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಆಂಕರ್ ಅನುಶ್ರೀ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲಿಂದ ಅಭಿಮಾನಿಗಳು ಅವರ ಮದುವೆ ಬಗ್ಗೆನೇ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದರು.

ಅನುಶ್ರೀ ಹೇಳಿ-ಕೇಳಿ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ ಅವರ ಹುಟ್ಟುಹಬ್ಬದಂದೇ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಡಬಹುದೆಂದು ನಿರೀಕ್ಷೆ ಮಾಡಿದ್ದರು. ಆದರೆ, ಆಗಲೂ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿತ್ತು. ಕೊನೆಗೂ ಆಂಕರ್ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ತಮ್ಮ ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆ ಮುನ್ನ ನಡೆಯುವ ಶಾಸ್ತ್ರಗಳಲ್ಲಿ ಆಂಕರ್ ಅನುಶ್ರೀ ಹಾಗೂ ರೋಷನ್ ಮಿಂದೆದ್ದಿದ್ದಾರೆ. ಹಳದಿ ಶಾಸ್ತ್ರದಲ್ಲಿ ಈ ಜೋಡಿ ಒಟ್ಟಿಗೆ ಕೂತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೊಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು, ಈ ನವ ಜೋಡಿಗೆ ಶುಭವನ್ನು ಹಾರೈಸುತ್ತಿದ್ದಾರೆ. ಶುಭ ವಾರ ರಾಯರ ದಿನವೇ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

Famous Kannada Anchor Anushree amp amp Roshan s Haldi Ceremony and Wedding Details

ಹಳದಿ ಶಾಸ್ತ್ರದಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದರೆ, ಬಳಿಕ ಇಬ್ಬರು 'ಸು ಫ್ರಮ್ ಸೋ' ಸಿನಿಮಾದ ಜನಪ್ರಿಯ ಗೀತೆ "ಬಂದರೋ ಬಂದರೋ ಭಾವ ಬಂದರೋ" ಹಾಡಿಗೆ ಹೆಜ್ಜೆಯನ್ನೂ ಹಾಕಿದ್ದಾರೆ. ಇವರ ಹಳದಿ ಶಾಸ್ತ್ರದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿರುವ ಒಂದು ಖಾಸಗಿ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ನಡೆಯಲಿದೆ.

ಇನ್ನು ಅನುಶ್ರಿ ಜೊತೆ ಸಪ್ತಪತಿ ತುಳಿಯುತ್ತಿರುವ ರೋಷನ್ ಮೂಲತ" ಕೊಡಗಿನವರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಈ ಜೋಡಿಯ ಮದುವೆಗೆ ಆತ್ಮೀಯರೊಂದಿಗೆ ಇಡೀ ಸ್ಯಾಂಡಲ್‌ವುಡ್ ಚಿತ್ರರಂಗವೇ ಬೆರಗಾಗಿದೆ. ಈ ಜೋಡಿಯ ಮದುವೆಗೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೇ ಅಣ್ಣಾವ್ರ ಕುಟುಂಬದಿಂದ ಶಿವಣ್ಣ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಬಹುತೇಕ ಇಡೀ ಸ್ಯಾಂಡಲ್‌ವುಡ್ ಭಾಗವಹಿಸಲಿದೆ.

More from Filmibeat

English summary
Popular Kannada anchor Anushree and Roshan’s wedding celebrations begin with a colorful haldi ceremony. Check out exclusive wedding details, rituals, and photos from the grand event.
Read more about: anushree wedding anchor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X