ಅಪಘಾತದಲ್ಲಿ ಖ್ಯಾತ ನಿರೂಪಕ ಚಂದನ್ ಸಾವು
Recommended Video

ಬಾರದ ಲೋಕಕ್ಕೆ ಹೋದ ಉದಯ ಮ್ಯೂಸಿಕ್ ನಿರೂಪಕ | Filmibeat Kannada
ಭಾಷೆಯ ಮೇಲಿನ ಹಿಡಿತ ಹಾಗೂ ಅಚ್ಚ ಕನ್ನಡದಲ್ಲಿಯೇ ಮಾತನಾಡುತ್ತಾ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡು ಪ್ರಖ್ಯಾತಿಗಳಿಸಿದ್ದ ನಿರೂಪಕ ಚಂದನ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ನಿಂತಿದ್ದ ವಾಹನವೊಂದಕ್ಕೆ ಗುದ್ದಿದ ಪರಿಣಾಮ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಚಂದನ್ ಹಾಗೂ ಜೊತೆಯಲ್ಲಿದ್ದ ಸಂತೋಷಿ ಎಂಬುವವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬಲ್ಲಿ ಈ ಘಟನೆ ನಡೆದಿದೆ.

ಚಂದನ್ ಕೇವಲ ನಿರೂಪಕನಾಗಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಡಾ ರಾಜ್ ಕುಮಾರ್ ಅವರ ಬಗ್ಗೆ ಅಪಾರ ಅಭಿಮಾನವನ್ನಿಟ್ಟುಕೊಂಡಿದ್ದ ಚಂದನ್ ಅಣ್ಣಾವ್ರ ಬಗ್ಗೆ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸಾಕಷ್ಟು ಫೇಮಸ್ ಆಗಿತ್ತು.
ಸದ್ಯ ಚಂದನ್ ಅವರ ಸಾವು ಅವರ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.
More from Filmibeat
English summary
In a tragic Accident, Famous Kannada TV Anchor Chandan passes away. The incident took place in Hanagavadi in Davanagere district.


Click it and Unblock the Notifications











