Dr.ಬ್ರೋ ಕಾಣೆಯಾಗಿದ್ದಾರಾ? ದೇಶ ದ್ರೋಹಿ ಅಂದಿದ್ದಕ್ಕೆ ವಿಡಿಯೋ ಮಾಡೋದನ್ನೇ ನಿಲ್ಸಿದ್ರಾ? ಏನಿದೆ ಅಪ್‌ಡೇಟ್?

ಈ ಡಿಜಿಟಲ್ ಯುಗದಲ್ಲಿ ಯೂಟ್ಯೂಬರ್‌ಗಳು ಮೇಲು ಗೈ ಸಾಧಿಸಿದ್ದಾರೆ. ಅವರಲ್ಲಿ ನಮ್ಮ ಕನ್ನಡದ ಸ್ಟಾರ್ ಯೂಟ್ಯೂಬರ್ ಡಾ. ಬ್ರೋ ಕೂಡ ಇದ್ದಾರೆ. ವಿದೇಶ ವಿದೇಶಗಳಲ್ಲಿ ಪ್ರಯಾಣ ಮಾಡಿ ಅಲ್ಲಿನ ವಿಷಯಗಳನ್ನು ಕನ್ನಡಿಗರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೆಲವು ದಿನಗಳಿಂದ ಡಾ. ಬ್ರೋ ಹೊಸ ವಿಡಿಯೋವನ್ನು ಅಪ್‌ಲೋಡ್ ಮಾಡಿಲ್ಲ.

ಕನ್ನಡದಲ್ಲಿ ಒರಿಜಿನಲ್ ಕಂಟೆಂಟ್ ಹೊತ್ತು ತರುವ ಜನಪ್ರಿಯ ಯೂಟ್ಯೂಬರ್ 'ಡಾ ಬ್ರೋ' ಎಲ್ಲಿ ಹೋದ್ರು? ಕೆಲವು ದಿನಗಳ ಹಿಂದಷ್ಟೇ ಸ್ಟಾರ್‌ ಸ್ಪೋರ್ಟ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ಡಾ.ಬ್ರೋ ಕಾಣೆಯಾಗಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಹರಿದಾಡುತ್ತಿರುವ ಸುದ್ದಿಯೇನು? ಅಸಲಿಗೆ ಅವ್ರಿಗೆ ಏನಾಗಿದೆ?

Famous Youtuber Dr.Bro went missing after China episode Global Kannadiga revealing the truth

ಅಷ್ಟಕ್ಕೂ ಈ ಪ್ರಶ್ನೆ ಮೂಡುವುದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಡಾ. ಬ್ರೋ ಬಗ್ಗೆ ಆಗುತ್ತಿರುವ ಚರ್ಚೆ. ಚೀನಾ ದೇಶದ ಬಗ್ಗೆ ವಿಡಿಯೋ ಮಾಡಿ, ಅಲ್ಲಿನ ಬೆಳವಣಿಗೆಯನ್ನು ಹೊಗಳಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಡಾ.ಬ್ರೋ ಅನ್ನು ದೇಶ ದ್ರೋಹಿ ಎಂದು ಕರೆದಿದ್ದರು. ಮತ್ತೆ ಕೆಲವರು ಕಿಡಿಕಾರಿದ್ದರು. ಇದರಿಂದ ಬೇಸರಗೊಂಡು ವಿಡಿಯೋ ಮಾಡೋದನ್ನೇ ನಿಲ್ಲಿಸಿದ್ದಾರಂತೆ ಅಂತೆಲ್ಲ ಸುದ್ದಿ ಓಡಾಡುತ್ತಿದೆ.

ಇನ್ನು ಕೆಲವರು ಡಾ. ಬ್ರೋ ಆರೋಗ್ಯ ಸರಿಯಿಲ್ವಂತೆ. ಅದಕ್ಕೆ ವಿಡಿಯೋ ಮಾಡುವುದನ್ನೇ ನಿಲ್ಲಿಸಿದ್ದಾರಂತೆ ಅಂತನೂ ಹೇಳುತ್ತಿದ್ದಾರೆ. ಅಸಲಿಗೆ ಡಾ. ಬ್ರೋ ಎಲ್ಲಿದ್ದಾರೆ? ಅವರು ಹೇಗಿದ್ದಾರೆ? ಈಗೇನು ಮಾಡುತ್ತಿದ್ದಾರೆ ಅನ್ನೋದನ್ನು ಮತ್ತೊಬ್ಬ ಯೂಟ್ಯೂಬರ್ ಗ್ಲೋಬಲ್ ಕನ್ನಡಿಗ ಈ ಎಲ್ಲಾ ಪ್ರಶ್ನೆಗಳಿಗೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

Famous Youtuber Dr.Bro went missing after China episode Global Kannadiga revealing the truth

ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನ ಮಹಾಬಲ ರಾಮ್ ಹಾಗೂ ಡಾ.ಬ್ರೋ ಕ್ಲೋಸ್ ಆಗಿದ್ದಾರೆ. ಅವರ ಬಗ್ಗೆ ಹರಿದಾಡುತ್ತಿರುವ ಸುದ್ದಿ ಬಗ್ಗೆ ಏನ್ ಹೇಳಿದ್ದಾರೆ ಕೇಳಿ. "ಡಾ. ಬ್ರೋ ಕಾಣೆಯಾಗಿದ್ದಾರಂತೆ. ಚೀನಾ ದೇಶದ ಸರ್ಕಾರ ಅವರನ್ನು ಅರೆಸ್ಟ್ ಮಾಡಿ ಸೀಕ್ರೆಟ್ ಜೈಲಿನಲ್ಲಿ ಇಟ್ಟಿದ್ದಾರಂತೆ. ಚೀನಾ ದೇಶವನ್ನು ಹೊಗಳಿ, ಅವರ ಆಧುನಿಕರಣ, ಡೆವೆಲಪ್‌ಮೆಂಟ್ ಬಗ್ಗೆ ಮಾತಾಡಿದ್ದಕ್ಕೆ, ನಾವು ಹೇಗೆ ಬದಲಾಗಬೇಕು ಅನ್ನೋ ವಿಷಯ ತಿಳಿಸಿಕೊಟ್ಟಿದ್ದಕ್ಕೆ ನಮ್ಮಲ್ಲಿರೋ ಕೆಲವರು ಬೇಜಾರು ಮಾಡಿಕೊಂಡು ಅಥವಾ ಮನಸ್ಸಿಗೆ ತಗೊಂಡು, ಅವರನ್ನು ದೇಶ ದ್ರೋಹಿ ಅಂತ ಹೇಳಿ, ಆ ಪಟ್ಟ ಕಟ್ಟಿ ವಿಡಿಯೋ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರಂತೆ. ಡಾ.ಬ್ರೋಗೆ ಆರೋಗ್ಯ ಸರಿಯಿಲ್ವಂತೆ. ಬಹಳ ಹುಷಾರಿಲ್ವಂತೆ. ಅದಕ್ಕೆ ವಿಡಿಯೋ ಮಾಡೋದನ್ನು ಬಿಟ್ಟಿದ್ದಾರಂತೆ. ಈ ಎಲ್ಲಾ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಸಿಗುತ್ತೆ ಎಂದು" ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನ ಮಹಾಬಲ ರಾಮ್ ಹೇಳಿದ್ದಾರೆ.

ಡಾ.ಬ್ರೋ ಎಲ್ಲೂ ಹೋಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಅಂತ ಗ್ಲೋಬಲ್ ಕನ್ನಡಿಗ ಹೇಳಿದ್ದಾರೆ. "ಡಾ. ಬ್ರೋ ವಿಷಯಕ್ಕೆ ಬರೋದಾದರೆ ಅವರು ಎಲ್ಲೂ ಹೋಗಿಲ್ಲ. ಅವರಿಗೆ ಏನೂ ಆಗಿಲ್ಲ. ಅವರು ಹುಷಾರಾಗಿ, ಆರೋಗ್ಯವಾಗಿ, ಆರಾಮಾಗಿ ಇದ್ದಾರೆ. ಹೇಗೆ ಹೇಳ್ತಿದ್ದೀರಾ ನೀವು? ಅಂತ ಹೇಳಿದ್ರೆ, ಮೊನ್ನೆಯಷ್ಟೇ ನಾನು, ಡಾ. ಬ್ರೋ, ಪ್ಲಯಿಂಗ್ ಪಾಸ್‌ಪೋರ್ಟ್‌ನ ಆಶಾ ಕಿರಣ್ ಮೂರು ಜನರೂ ಕೂಡಿ ಒಂದು ದಿನದ ಟ್ರಿಪ್‌ಗೆ ಹೋಗಿದ್ದೆವು" ಎಂದು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನ ಮಹಾಬಲ ರಾಮ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇತ್ತೀಚೆಗೆಷ್ಟೇ ಡಾ. ಬ್ರೋ, ಗ್ಲೋಬಲ್ ಕನ್ನಡಿಗ ಹಾಗೂ ಫ್ಲೈಯಿಂಗ್ ಪಾಸ್‌ಪೊರ್ಟ್ ಮೂವರೂ ಸೇರಿ ಆಗುಂಬೆ ಹಾಗೂ ಶೃಂಗೇರಿಗೆ ಒಂದು ದಿನದ ಟ್ರಿಪ್ ಮಾಡಿ ಬಂದಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್ ಕನ್ನಡದ ಕೆಲಸ ಮುಗಿಸಿ, ಸ್ವಲ್ಪ ಬ್ರೇಕ್ ತೆಗೆದುಕೊಂಡು ಮತ್ತೆ ಯೂಟ್ಯೂಬ್‌ಗೆ ಮರಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

More from Filmibeat

English summary
Kannada Youtuber Dr.Bro went missing is it true?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X