»   » ರಜನಿಕಾಂತ್ ಭೇಟಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಭೂಪ ಯಾರು.?

ರಜನಿಕಾಂತ್ ಭೇಟಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಭೂಪ ಯಾರು.?

Posted By:
Subscribe to Filmibeat Kannada

ದಕ್ಷಿಣ ಭಾರತದ ಸ್ಟಂಟ್ ಗಾಡ್... ಕ್ರೇಜ್ ಕಾ ಬಾಪ್...ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ..? ಜೀವನದಲ್ಲಿ ಒಮ್ಮೆ ಆದರೂ ರಜನಿಕಾಂತ್ ರವರನ್ನ ಭೇಟಿ ಮಾಡಿ, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಕನಸು ಕಾಣುವವರು ಲೆಕ್ಕವಿಲ್ಲದಷ್ಟು ಮಂದಿ.!

ಅಭಿಮಾನಿಗಳ ಮನಸ್ಸನ್ನು ನೋಯಿಸಲು ಇಚ್ಛಿಸದ ರಜನಿಕಾಂತ್, ತಮ್ಮ 'ಭಕ್ತ'ರ ಆಸೆಗೆ 'ತಥಾಸ್ತು' ಎಂದು ಮೊನ್ನೆಯಷ್ಟೇ ಫ್ಯಾನ್ಸ್ ಗಳನ್ನ ಭೇಟಿ ಮಾಡಿದ್ದರು. ಆಗಲೇ ಓರ್ವ ಅಭಿಮಾನಿಯ ಕಥೆ ಬೆಳಕಿಗೆ ಬಂದಿದ್ದು. [ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸೂಪರ್ ಚಾನ್ಸ್.!]

ರಜನಿಕಾಂತ್ ರವರನ್ನ ಮೀಟ್ ಮಾಡಬೇಕು ಎಂಬ ಕನಸು ಕಂಡಿದ್ದ ಆತ ಒಂದುವರೆ ಲಕ್ಷ ರೂಪಾಯಿಗೂ ಹೆಚ್ಚು ದುಡ್ಡು ಖರ್ಚು ಮಾಡಿದ್ದನಂತೆ. ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿರಿ....

ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಭೂಪ ಯಾರು.?

ಸೂಪರ್ ಸ್ಟಾರ್ ರಜನಿಕಾಂತ್ ರವರ ಆರಾಧಕ ಆಗಿರುವ ಚೆನ್ನೈ ಮೂಲದ ಶ್ರೀನಿವಾಸನ್ ಜಯಶೀಲನ್, ತಲೈವಾ ರವರನ್ನ ಭೇಟಿ ಮಾಡಲು ಒಂದುವರೆ ಲಕ್ಷಕ್ಕೂ ಹೆಚ್ಚು ರೂಪಾಯಿ ಖರ್ಚು ಮಾಡಿದ್ದರಂತೆ.

ಯಾಕೆ ಅಷ್ಟೊಂದು ಖರ್ಚು.?

ಚೆನ್ನೈನಲ್ಲಿಯೇ ವಾಸ ಇದ್ದರೂ, ಒಮ್ಮೆಯೂ ರಜನಿಕಾಂತ್ ರವರನ್ನ ಭೇಟಿ ಮಾಡಲು ಶ್ರೀನಿವಾಸನ್ ಜಯಶೀಲನ್ ರವರಿಗೆ ಸಾಧ್ಯ ಆಗಲಿಲ್ಲ. ಹೀಗಾಗಿ ಶ್ರೀನಿವಾಸನ್ ಜಯಶೀಲನ್ ಒಂದು ಪ್ಲಾನ್ ಮಾಡಿದರು. ಅದೇನು ಅಂದ್ರೆ....

ಪ್ಲಾನ್ ಏನು.?

2014 ರಲ್ಲಿ 'ಲಿಂಗಾ' ಸಿನಿಮಾದ ಶೂಟಿಂಗ್ ಗಾಗಿ ರಜನಿಕಾಂತ್ ಹಾಂಕಾಂಗ್ ಗೆ ಹಾರಬೇಕಿತ್ತು. ಈ ವಿಚಾರ ತಿಳಿದ ಶ್ರೀನಿವಾಸನ್ ಜಯಶೀಲನ್ ಕೂಡ ಕುಟುಂಬ ಸಮೇತ ಹಾಂಕಾಂಗ್ ಗೆ ಫ್ಲೈಟ್ ಹತ್ತಿದರು.

ಒಂದೇ ಫ್ಲೈಟ್ ನಲ್ಲಿ ಪಯಣ

ರಜನಿಕಾಂತ್ ಹೊರಟ್ಟಿದ್ದ ಫ್ಲೈಟ್ ನಲ್ಲಿಯೇ ತಮ್ಮ ಟಿಕೆಟ್ ಕೂಡ ಕಾಯ್ದಿರಿಸಿದ ಶ್ರೀನಿವಾಸನ್, ಅದಕ್ಕಾಗಿ ಬರೋಬ್ಬರಿ ಒಂದುವರೆ ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದ್ದರಂತೆ.

ಒಂದೇ ಹೋಟೆಲ್ ನಲ್ಲಿ ಠಿಕಾಣಿ

ಸಾಲದಕ್ಕೆ ರಜನಿಕಾಂತ್ ಇದ್ದ ಸ್ಟಾರ್ ಹೋಟೆಲ್ ನಲ್ಲಿಯೇ ಶ್ರೀನಿವಾಸನ್ ಕೂಡ ಠಿಕಾಣಿ ಹೂಡಿದರಂತೆ. ಕೊನೆಗೆ ಅದೇ ಹೋಟೆಲ್ ನಲ್ಲಿ ರಜನಿಕಾಂತ್ ರವರನ್ನ ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡರಂತೆ.

ರಜನಿಕಾಂತ್ ಸಲಹೆ

ತಮ್ಮನ್ನ ಭೇಟಿ ಆಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಂದಿದ್ದನ್ನು ತಿಳಿದ ರಜನಿಕಾಂತ್, ಶ್ರೀನಿವಾಸನ್ ರವರಿಗೆ ''ದುಡ್ಡನ್ನ ಹೀಗೆ ಅನವಶ್ಯಕವಾಗಿ ಪೋಲ್ ಮಾಡಬೇಡಿ. ಉಪಯುಕ್ತ ಕೆಲಸಗಳಿಗೆ ಮಾತ್ರ ಬಳಸಿ'' ಎಂದು ಸಲಹೆ ನೀಡಿದ್ದರಂತೆ.

English summary
Fan spent more than Rs.1.50 lakhs to meet Super Star Rajinikanth.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada