ದರ್ಶನ್ ಬರ್ತ್‌ಡೇ 10 ದಿನಗಳಷ್ಟೇ ಬಾಕಿ; ಫ್ಯಾನ್ಸ್ ಬಿಟ್ರು ಡಿಸೈನ್.. ಡಿಸೈನ್ ಪೋಸ್ಟರ್!

ಫೆಬ್ರವರಿ ತಿಂಗಳು ಬಂತಂದ್ರೆ ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅಭಿಮಾನಿಗಳು ಆಕ್ಟಿವ್ ಆಗುತ್ತಾರೆ. ಕಾರಣ ಏನು ಅಂತ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ನೆಚ್ಚಿನ ಡಿ ಬಾಸ್ ಹುಟ್ಟುಹಬ್ಬಕ್ಕೆ 15 ದಿನಗಳಿಗೂ ಮುನ್ನವೇ ಸಿದ್ಧತೆಗಳು ಆರಂಭ ಆಗುತ್ತವೆ. ಈ ಬಾರಿ ಕೂಡ ದರ್ಶನ್ ಬರ್ತ್‌ಡೇಯನ್ನು ಜೋರಾಗಿಯೇ ಆಚರಿಸುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ರಾಜ್ಯದ ಮೂಲೆ ಮೂಲೆಯಲ್ಲಿ ಈಗಾಗಲೇ ಬ್ಯಾನರ್, ಕಟೌಟ್ ಅಂತ ಕಟ್ಟುವುದಕ್ಕೆ ಶುರುಮಾಡಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾದಲ್ಲೂ ತಾವೇ ಕ್ರಿಯೇಟಿವ್ ಆಗಿ ಪೋಸ್ಟರ್‌ಗಳನ್ನು ಡಿಸೈನ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೇವಲ 10 ದಿನ ಬಾಕಿ ಇದೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್ ಟ್ರೆಂಡಿಂಗ್‌ನಲ್ಲಿದ್ದಾರೆ.

 Fans and Sanju Basaiyya started celebrating Darshan birthday before 10 days

ಎಕ್ಸ್ (ಟ್ವಿಟರ್) ಸೋಶಿಯಲ್ ಮೀಡಿಯಾದಲ್ಲಿ ಇಂದು (ಫೆಬ್ರವರಿ 6) #DevilTheHero ಟ್ರೆಂಡಿಂಗ್‌ನಲ್ಲಿದೆ. ಈ ಹ್ಯಾಶ್‌ಟ್ಯಾಗ್ ಮೂಲಕ ದರ್ಶನ್ ಹುಟ್ಟುಹಬ್ಬಕ್ಕೆ 10 ದಿನಗಳು ಬಾಕಿ ಉಳಿದಿರುವಾಗಲೇ ಪೋಸ್ಟರ್‌ಗಳನ್ನು ವೈರಲ್ ಮಾಡುತ್ತಿದ್ದಾರೆ. ಹಾಗಿದ್ರೆ, ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಬರ್ತ್‌ಡೇ ಬಗ್ಗೆ ಫ್ಯಾನ್ಸ್ ಹೇಗೆಲ್ಲ ಟ್ರೆಂಡ್ ಮಾಡುತ್ತಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ..

"ಅಡ್ವಾನ್ಸ್ ಬರ್ತ್‌ಡೇ ಬಾಸು"

ಮತ್ತೊಬ್ಬ ಅಭಿಮಾನಿ ಈ ಹಿಂದಿನ ಹುಟ್ಟುಹಬ್ಬದಂದು ದರ್ಶನ್ ಕೇಕ್ ಕಟ್ ಮಾಡುತ್ತಿರುವ ವಿಡಿಯೋಗಳನ್ನು ಒಟ್ಟಿಗೆ ಸೇರಿಸಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. "ಬಾಸ್ ಪರ್ವ.. ಸುಲ್ತಾನ್ ಸಂಭ್ರಮ. ಇನ್ನು 10 ದಿನಗಳು ಅಷ್ಟೇ ಬಾಕಿ. ಅಡ್ವಾನ್ಸ್ ಹ್ಯಾಪಿ ಬರ್ತ್‌ಡೇ ಬಾಸು" ಎಂದು ಬರೆದುಕೊಂಡಿದ್ದಾರೆ.

ಡಿ ಬಾಸ್ ಬರ್ತ್‌ಡೇಗೆ 10 ದಿನ ಬಾಕಿ

ಈಗಾಗಲೇ ಗ್ರಾಮವೊಂದರಲ್ಲಿ ದರ್ಶನ್ ಕಟೌಟ್ ಎದ್ದು ನಿಂತಿದೆ. ಅದರಲ್ಲಿ "ಆಕಾಶದಲ್ಲಿರೋ ನಕ್ಷತ್ರ, ಸಮುದ್ರದಲ್ಲಿರೋ ಮೀನು, ನನ್ನ ಜೊತೆ ಇರೋ ಜನ ಯಾವತ್ತೂ ಬದಲಾಗಲ್ಲ" ಎಂದು ಬರೆಯಲಾಗಿದೆ. ಈ ಕಟೌಟ್‌ಗೆ ಒಂದಿಷ್ಟು ಮಂದಿ ಯುವಕರು ಅಡ್ಡ ಬೀಳುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿ ಹಂಚಿಕೊಂಡಿದ್ದಾರೆ. ಹಾಗೇ "ಬಾಸ್ ಪರ್ವಕ್ಕೆ 10 ದಿನ" ಎಂದು ಬರೆದುಕೊಂಡಿದ್ದಾರೆ.

ಸುಲ್ತಾನ್ ಸಂಭ್ರಮ

ಚಾಲೆಂಜಿಂಗ್‌ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು 10 ದಿನಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಇಂದಿನಿಂದ ನಿರಂತರವಾಗಿ ದರ್ಶನ್ ಹುಟ್ಟುಹಬ್ಬದ ಸಂಭ್ರಮ ನಡೆಯಲಿದೆ. 10ನೇ ದಿನದಿಂದಲೇ ಅಭಿಮಾನಿಗಳು ಪೋಸ್ಟರ್‌ಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಯೊಬ್ಬರು "ಸುಲ್ತಾನ್ ಸಂಭ್ರಮ.. ಇನ್ನು ಕೇವಲ 10 ದಿನ ಅಷ್ಟೆ ಬಾಕಿ" ಎಂದು ಸಂಗೊಳ್ಳಿರಾಯಣ್ಣ ಗೆಟಪ್‌ನಲ್ಲಿರುವ ದರ್ಶನ್ ಪೋಸ್ಟರ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಸಂಜು ಬಸಯ್ಯ ವಿಡಿಯೋ

"ಡಿಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಸಂಜು ಬಸಯ್ಯನವರು ಇದೇ ತಿಂಗಳು 11ರಂದು ವಿಶೇಷ ಹಾಡು ಬಿಡುಗಡೆ ಮಾಡಲಿದ್ದಾರೆ. ಸಂಜು ಬಸಯ್ಯ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ಬಿಡುಗಡೆ ಗೊಳ್ಳಲಿದೆ." ಎಂದು ನೆಟ್ಟಿಗರೊಬ್ಬರು ಸಂಚು ಬಸಯ್ಯ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ದರ್ಶನ್ ಹುಟ್ಟುಹಬ್ಬಕ್ಕೆ ವಿಡಿಯೋ ಸಾಂಗ್ ಒಂದನ್ನು ಬಿಡುವುದಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.

More from Filmibeat

English summary
Darshan birthday celebration starts 10 days before;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X