ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬ: ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ 'ಭಜರಂಗಿ 2' ಗಿಫ್ಟ್

ಕೊರೊನಾ ವೈರಸ್ ಸಂಕಷ್ಟದ ನಡುವೆಯೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮದಿನದ ಸಂಭ್ರಮವೇನೂ ಕಳೆಗುಂದಿಲ್ಲ. ಬದಲಾಗಿ ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬದ ಜೋಷ್ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಬ್ಬದ ಆಚರಣೆಯ ಮೂಡ್‌ನಲ್ಲಿದ್ದಾರೆ.

Recommended Video

ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

ಶಿವಣ್ಣ ಜುಲೈ 12ರಂದು 58ನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಇನ್ನೂ ಚಿರಯುವಕನಂತೆ ಮಿಂಚುತ್ತಿರುವ ಶಿವರಾಜ್ ಕುಮಾರ್ ಅವರಿಗೆ ವಯಸ್ಸು ನಂಬರ್ ಅಷ್ಟೇ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಅವರ ಜನ್ಮದಿನದ ಮುನ್ನಾದಿನವಾದ ಶನಿವಾರ ಸಂಜೆ ಬಹುನಿರೀಕ್ಷಿತ 'ಭಜರಂಗಿ 2' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಎ. ಹರ್ಷ ನಿರ್ದೇಶನದ ಚಿತ್ರದ ಪೋಸ್ಟರ್‌ನಲ್ಲಿನ ಶಿವಣ್ಣ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಅದರಲ್ಲಿಯೂ ಕಣ್ಣುಗಳಲ್ಲಿನ ಕಿಡಿ ಎಲ್ಲರ ಗಮನ ಸೆಳೆದಿದೆ. ಮುಂದೆ ಓದಿ...

ಭಜರಂಗಿ 2 ಅಡ್ವಾನ್ಸ್ ಶುಭಾಶಯ

ಭಜರಂಗಿ 2 ಅಡ್ವಾನ್ಸ್ ಶುಭಾಶಯ

'ಭಜರಂಗಿ 2' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವುದು ಶಿವರಾಜ್ ಕುಮಾರ್ ಜನ್ಮದಿನದ ಮುಂಗಡ ಶುಭಾಶಯ ಕೋರುವ ಸಲುವಾಗಿಯಷ್ಟೇ. ಅಭಿಮಾನಿಗಳಿಗೆ ಈ ಪೋಸ್ಟರ್ ಎಷ್ಟರಮಟ್ಟಿಗೆ ಮೋಡಿ ಮಾಡಿದೆಯೆಂದರೆ ಭಾನುವಾರ ಬೆಳಿಗ್ಗೆ 11.30 ಯಾವಾಗ ಆಗುತ್ತದೆಯೋ ಎಂದು ಕಾತರದಿಂದ ಚಡಪಡಿಸುವಂತೆ ಆಗಿದೆ.

ಭಾನುವಾರ ಟೀಸರ್ ಬಿಡುಗಡೆ

ಭಾನುವಾರ ಟೀಸರ್ ಬಿಡುಗಡೆ

ಏಕೆಂದರೆ ಶಿವರಾಜ್ ಕುಮಾರ್ ಅವರ ಜನ್ಮದಿನದ ನಿಜವಾದ ಹಬ್ಬ ಇರುವುದು ಭಾನುವಾರ. ಅಂದು ಎ. ಹರ್ಷ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದೆ. ಶಿವಣ್ಣ ಹುಟ್ಟುಹಬ್ಬದ ಅಂಗವಾಗಿ 'ಭಜರಂಗಿ 2' ಚಿತ್ರದ ಅಧಿಕೃತ ಟೀಸರ್ ಬೆಳಿಗ್ಗೆ 11.30ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಸಾವಿರಾರು ಮಂದಿ ಟ್ವೀಟ್‌ಗಳನ್ನು ಮಾಡುತ್ತಿದ್ದು, 'ಭಜರಂಗಿ 2' ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಶಿವಣ್ಣ 58ನೇ ಜನ್ಮದಿನ, ಹ್ಯಾಪಿ ಬರ್ಥಡೇ ಶಿವಣ್ಣ ಮುಂತಾದ ಹ್ಯಾಷ್ ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿದೆ.

ಸಿಗಲಿದೆ ಮತ್ತೊಂದು ಗಿಫ್ಟ್

ಸಿಗಲಿದೆ ಮತ್ತೊಂದು ಗಿಫ್ಟ್

ತೆಲುಗಿನ ರಾಮ್ ಧುಳಿಪುಡಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವುದು ಈ ಹಿಂದೆ ಸುದ್ದಿಯಾಗಿತ್ತು. ಈ ಚಿತ್ರದ ಹೆಸರು ಮತ್ತು ಮಾಹಿತಿ ಭಾನುವಾರ ಬೆಳಿಗ್ಗೆ ಬಹಿರಂಗವಾಗಲಿದೆ. ಇದರಲ್ಲಿ ಶಿವಣ್ಣ ಸೇನಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಮತ್ತು ಡಾಲಿ ಧನಂಜಯ್ ಪುನಃ ಜತೆಗೂಡುತ್ತಿದ್ದು, ಈ ಚಿತ್ರದ ಹೆಸರನ್ನು ತಮಿಳಿನ ಖ್ಯಾತ ನಟ ಸೂರ್ಯ ಅನಾವರಣ ಮಾಡಲಿದ್ದಾರೆ.

ಶಿವಣ್ಣ ಬರ್ಥಡೇ ಪೋಸ್ಟರ್

ಶಿವಣ್ಣ ಬರ್ಥಡೇ ಪೋಸ್ಟರ್

ಶಿವಣ್ಣ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗ ಶಿವು ಅಡ್ಡಾ ವಿನ್ಯಾಸಗೊಳಿಸಿರುವ ವಿಶಿಷ್ಟ ಬರ್ಥಡೇ ಪೋಸ್ಟರ್‌ಅನ್ನು ಕನ್ನಡದ ಚಿತ್ರರಂಗದ ವಿವಿಧ ಖ್ಯಾತನಾಮರು ಬಿಡುಗಡೆ ಮಾಡಿದ್ದಾರೆ. ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ಅವರ ವಿವಿಧ ಸಿನಿಮಾಗಳ ಸ್ಟಿಲ್‌ಗಳನ್ನು ಈ ಪೋಸ್ಟರ್ ಒಳಗೊಂಡಿದೆ. ರಾಜ್ಯದ ವಿವಿಧೆಡೆ ಶಿವರಾಜ್ ಕುಮಾರ್ ಅಭಿಮಾನಿಗಳು ಸಂಭ್ರಮೋತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಲು, ಸಾಮಾಜಿಕ ಕಾರ್ಯಗಳ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಯೋಜನೆ ರೂಪಿಸಿದ್ದಾರೆ.

More from Filmibeat

English summary
Fans celebrating the 58th birthday of Dr Shiva Rajkumar. A Harsha directed Bhajarangi 2 teaser will be out on Sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X