For Quick Alerts
  ALLOW NOTIFICATIONS  
  For Daily Alerts

  ವಿಶೇಷವಾಗಿ ನಡೆಯಲಿದೆ 'ಟಗರು' 25ನೇ ವಾರದ ಸಂಭ್ರಮಾಚರಣೆ

  By Pavithra
  |
  ಶಿವಣ್ಣನ ಟಗರಿನ ಪೊಗರು ಜೋರಾಗಿದೆ..! | Filmibeat Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಥಿಯೇಟರ್ ನಲ್ಲಿ 25 ವಾರಗಳು ಪ್ರದರ್ಶನವಾಗಿದೆ. 'ರಾಜಕುಮಾರ' ಸಿನಿಮಾದ ನಂತರ 25 ವಾರಗಳು ಥಿಯೇಟರ್ ನಲ್ಲಿ ಉಳಿದುಕೊಂಡಿರುವ ಚಿತ್ರ 'ಟಗರು'.

  ಸಿಂಗಲ್ ಥಿಯೇಟರ್ ಗಳು ಕಣ್ಮರೆ ಆಗುತ್ತಿವೆ, ಚಿತ್ರಮಂದಿರಕ್ಕೆ ಜನ ಬರುವುದಿಲ್ಲ ಎನ್ನುವ ಸಂದರ್ಭದಲ್ಲಿ ಬೆಂಗಳೂರು ಹಾಗೂ ಮೈಸೂರಿನ ಎರಡು ಚಿತ್ರಮಂದಿರದಲ್ಲಿ 'ಟಗರು' ಚಿತ್ರವನ್ನು ಪ್ರೇಕ್ಷಕರು 25 ವಾರಗಳು ನೋಡಿದ್ದಾರೆ ಎನ್ನುವುದು ಖುಷಿಯ ವಿಚಾರ. ಈ ಸಂಭ್ರಮವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ.


  ಗುರು.. 25 ವಾರ ಆದ್ರೂ ಇನ್ನೂ ಓಡ್ತಿದೆ ಈ 'ಟಗರು'

  'ಟಗರು' ಸಿನಿಮಾ ಯಶಸ್ವಿಯನ್ನು ಮೈಸೂರಿನ ಡಾ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಆರಂಭಿಸಿದ ಶಕ್ತಿಧಾಮ ಆಶ್ರಮದಲ್ಲಿ ಆಚರಣೆ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಸಿಹಿ ಹಂಚಿ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲಿದ್ದಾರೆ.

  Fans celebrating Tagaru 25th week festival at the Shakti Dhama Ashrama of Mysore

  ದುನಿಯಾ ಸೂರಿ 'ಟಗರು' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಕೆ ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಶಿವರಾಜ್ ಕುಮಾರ್, ಮಾನ್ವಿತಾ ಹರೀಶ್, ಭಾವನಾ, ಧನಂಜಯ, ವಸಿಷ್ಠ ಸಿಂಹ ಇನ್ನು ಅನೇಕರು ಚಿತ್ರದಲ್ಲಿ ಅಭಿನಯ ಮಾಡಿದ್ದರು.

  English summary
  Kannada Tagaru Cinema complete 25 week in theaters. Fans celebrating 25th week festival at the Shakti Dhama Ashrama of Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X