ಗುರು.. 25 ವಾರ ಆದ್ರೂ ಇನ್ನೂ ಓಡ್ತಿದೆ ಈ 'ಟಗರು'

By Naveen

'ಟಗರು' ಸಿನಿಮಾ ಮಾಡಿದ ಮೋಡಿಯ ಬಗ್ಗೆ ಹೆಚ್ಚು ಹೇಳ ಬೇಕಾಗಿಲ್ಲ. ಈ ವರ್ಷದ ಸೂಪರ್ ಹಿಟ್ ಹಾಗೂ ಈ ವರ್ಷ ನೂರು ದಿನ ಪೂರೈಸಿದ ಏಕೈಕ ಸಿನಿಮಾ ಇದಾಗಿದೆ. ಈಗ 'ಟಗರು' ಮತ್ತೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

'ಟಗರು' ಸಿನಿಮಾ ಈಗ 25 ವಾರಗಳ ಸಂಭ್ರಮದಲ್ಲಿದೆ. ಈ ವಿಷಯ ಇಡೀ ತಂಡಕ್ಕೆ ಸಾಕಷ್ಟು ಖುಷಿ ನೀಡಿದೆ. ಸದ್ಯ ಸಿನಿಮಾ ಮೈಸೂರಿನ ಶಾಂತಲ ಚಿತ್ರಮಂದಿರ ಹಾಗೂ ಬೆಂಗಳೂರಿನ ಗೊಟ್ಟಿಗೇರೆಯ ವಿನಾಯಕ ಚಿತ್ರಮಂದಿರದಲ್ಲಿ ಸಿನಿಮಾ ಇನ್ನೂ ಪ್ರದರ್ಶನ ಆಗುತ್ತಿದೆ.

tagaru kannada movie completed 25 weeks

'ಟಗರು' ಸಿನಿಮಾದ 125 ದಿನದ ಯಶಸ್ವಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಚಿತ್ರತಂಡ ಮಾಡಿತ್ತು. ಇದೀಗ 25 ವಾರ ಪೂರೈಸಿದ ಹಿನ್ನಲೆಯಲ್ಲಿ ಸಿನಿಮಾದ ವಿಶೇಷ ಪೋಸ್ಟರ್ ಗಳನ್ನು ಹೊರ ತಂದಿದೆ. ಶಿವಣ್ಣನ ಅಭಿಮಾನಿಗಳಿಗೆ 'ಟಗರು' ಗೆಲುವು ಹೊಸ ಜೋಶ್ ತುಂಬಿದೆ.

tagaru kannada movie completed 25 weeks

ಅಂದಹಾಗೆ, 'ಟಗರು' ನಿರ್ದೇಶಕ ಸೂರಿ ಹಾಗೂ ಶಿವಣ್ಣ ಎರಡನೇ ಸಿನಿಮಾವಾಗಿತ್ತು. ಸಿನಿಮಾದ ವಿಭಿನ್ನ ಸ್ಕ್ರೀನ್ ಪ್ಲೇ ಜನರ ಗಮನ ಸೆಳೆಯಿತು. ಅದೇ ಕಾರಣಕ್ಕೆ ಸಿನಿಮಾ ವಿಶೇಷ, ವಿಭಿನ್ನ ಎನಿಸಿತು. ಈ ಚಿತ್ರದ ಪ್ರತಿ ಪಾತ್ರಗಳು ಜನ ಮನ್ನಣೆ ಗಳಿಸಿತು.

More from Filmibeat

English summary
Kannada Actor Shiva Rajkumar's 'Tagaru' movie completed 25 weeks. The movie is directed by duniya soori.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X