ಈ 2 ಥಿಯೇಟರ್‌ಗಳಲ್ಲಿ 'ಕಾಂತಾರ ಚಾಪ್ಟರ್ 1' ರಿಲೀಸ್‌ಗೆ ಫ್ಯಾನ್ಸ್ ಬೇಡಿಕೆ; 'ಕಾಂತಾರ', 'ಕೆಜಿಎಫ್ 2' ಕಲೆಕ್ಷನ್ ಎಷ್ಟಾಗಿತ್ತು?

ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ ಚಾಪ್ಟರ್ 1' ಅದ್ಧೂರಿಯಾಗಿ ರಿಲೀಸ್ ಆಗಿದೆ. ದೇಶಾದ್ಯಂತ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಮತ್ತೆ ತಮ್ಮ ನಟನೆ ಹಾಗೂ ನಿರ್ದೇಶನದಿಂದ ಪ್ರೇಕ್ಷಕರಿಗೆ ಮನ ಗೆಲ್ಲುತ್ತಾರಾ? ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಆದರೆ, ಫಸ್ಟ್ ಡೇ ಫಸ್ಟ್ ಶೋ ನೋಡಿದವರಿಗೆ ಸಿನಿಮಾ ಇಷ್ಟ ಆಗಿದೆ.

2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಮೆಗಾ ಬ್ಲಾಕ್‌ಬಸ್ಟರ್ ಆದ್ಮೇಲೆ 'ಕಾಂತಾರ ಚಾಪ್ಟರ್ 1' ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ ಜನರು ಕುಟುಂಬ ಸಮೇತ ಸಿನಿಮಾ ನೋಡುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಮುಂದಿನ ನಾಲ್ಕು ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮೇಲೆ ಪ್ರೇಕ್ಷಕರು ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಎರಡು ಚಿತ್ರಮಂದಿರಗಳ ಬಗ್ಗೆ ಚರ್ಚೆಯಾಗುತ್ತಿದೆ.

Fans Demanding to release Kantara Chapter 1 Releasing in Bengaluru Urvashi and Mukunda Theater

'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ತಮ್ಮ ನೆಚ್ಚಿನ ಚಿತ್ರಮಂದಿರದಲ್ಲಿಯೇ ನೋಡುವ ಉತ್ಸಾಹದಲ್ಲಿದ್ದಾರೆ. ತಮಗೆ ಹತ್ತಿರವಿರುವ ಚಿತ್ರಮಂದಿರಗಳಲ್ಲಿಯೇ ಸಿನಿಮಾ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಎರಡು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಮಾಡುವಂತೆ ಬೇಡಿಕೆ ಹೆಚ್ಚಾಗುತ್ತಿದೆಯಂತೆ. ಆ ಚಿತ್ರಮಂದಿರಗಳು ಊರ್ವಶಿ ಹಾಗೂ ಮುಕುಂದ.

ಊರ್ವಶಿ ಹಾಗೂ ಮುಕುಂದದಲ್ಲಿ ಬೇಡಿಕೆ

ಬೆಂಗಳೂರಿನ ಪ್ರಮುಖ ಏರಿಯಾದಲ್ಲಿ ಊರ್ವಶಿ ಚಿತ್ರಮಂದಿರವಿದೆ. ಇದು ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾ ಸೆಂಟರ್ ಆಗಿದೆ. ಇತ್ತೀಚೆಗೆ ಕನ್ನಡ ಚಿತ್ರಗಳು ಕೂಡ ಅದ್ಭುತವಾಗಿ ಪ್ರದರ್ಶನ ಕಂಡಿವೆ. ಅದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ 'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾಗಳ ಕಲೆಕ್ಷನ್ ಸಾಕ್ಷಿ. ಆದರೆ, ಈ ಬಾರಿ 'ಕಾಂತಾರ ಚಾಪ್ಟರ್ 1' ಈ ಎರಡೂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಜನರು ಚಿತ್ರಮಂದಿರಗಳಿಗೆ ಕರೆ ಮಾಡಿ 'ಕಾಂತಾರ ಚಾಪ್ಟರ್ 1' ಪ್ರದರ್ಶನ ಮಾಡುವಂತೆ ಬೇಡಿಕೆ ಇಡುತ್ತಿದ್ದಾರಂತೆ.

Fans Demanding to release Kantara Chapter 1 Releasing in Bengaluru Urvashi and Mukunda Theater

ಊರ್ವಶಿಯಲ್ಲಿ 'ಕೆಜಿಎಫ್ 2'-'ಕಾಂತಾರ' ದಾಖಲೆ

ಬೆಂಗಳೂರಿನ ಲಾಲ್‌ಬಾಗ್ ಸಮೀಪವಿರುವ ಊರ್ವಶಿ ಚಿತ್ರಮಂದಿರದಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳು ರಿಲೀಸ್ ಆಗಿವೆ. ಲಾಲ್ ಬಾಗ್‌ ಸುತ್ತಮುತ್ತ ಇರುವ ಏರಿಯಾಗಳಿಂದ ಜನರು ಸಿನಿಮಾ ನೋಡುವುದಕ್ಕೆ ಇಲ್ಲಿಗೆ ಬರುತ್ತಾರೆ. ಅದರಲ್ಲೂ ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ಪ್ರದರ್ಶನ ಮಾಡುತ್ತಿದೆ. ಹೀಗಾಗಿ ಕನ್ನಡಿಗರು ಊರ್ವಶಿಯಲ್ಲಿ ಕನ್ನಡ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇನ್ನು 'ಕೆಜಿಎಫ್ 2', 'ಕಾಂತಾರ' ಸಿನಿಮಾಗಳು ಇಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿವೆ.

ಊರ್ವಶಿ ಕಲೆಕ್ಷನ್

'ಕಾಂತಾರ' ₹1.47 ಕೋಟಿ
'ಕೆಜಿಎಫ್ 2' ₹2.13 ಕೋಟಿ
'ಸು ಫ್ರಮ್ ಸೋ' ₹49 ಲಕ್ಷ

ಮುಕುಂದದಲ್ಲಿ 'ಕೆಜಿಎಫ್ 2'-'ಕಾಂತಾರ' ದಾಖಲೆ

ಕನ್ನಡ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುವ ಮತ್ತೊಂದು ಚಿತ್ರಮಂದಿರ ಮುಕುಂದ. ಇಲ್ಲೂ ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿವೆ. ಅದರಲ್ಲೂ 'ಕೆಜಿಎಫ್ 2', 'ಕಾಂತಾರ' ಹಾಗೂ 'ಸು ಫ್ರಮ್ ಸೋ' ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡಿವೆ. ಹೀಗಾಗಿ ಈ ಚಿತ್ರಮಂದಿರಕ್ಕೂ ಪ್ರೇಕ್ಷಕರು ಕರೆ ಮಾಡಿ ಸಿನಿಮಾ ಪ್ರದರ್ಶನ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಮುಕುಂದ ಕಲೆಕ್ಷನ್

'ಕಾಂತಾರ' ₹86 ಲಕ್ಷ
'ಕೆಜಿಎಫ್ 2' ₹1.70 ಕೋಟಿ
'ಸು ಫ್ರಮ್ ಸೋ' ₹66 ಲಕ್ಷ

ಸೋಶಿಯಲ್ ಮೀಡಿಯಾದಲ್ಲಿಯೂ ಊರ್ವಶಿ ಹಾಗೂ ಮುಕುಂದ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಮಾಡುವಂತೆ ಒತ್ತಡಗಳು ಹೆಚ್ಚಾಗಿವೆ. ಕನ್ನಡ ಸಿನಿಮಾವೊಂದಕ್ಕೆ ಈ ಮಟ್ಟಿಗೆ ಬೇಡಿಕೆ ಬರುತ್ತಿರೋದು ಖುಷಿ ವಿಚಾರವೇ. ಪ್ರೇಕ್ಷಕರ ಒತ್ತಡಕ್ಕೆ ಮಣಿದು ಈ ಎರಡೂ ಚಿತ್ರಮಂದಿರಗಳು ಪ್ರದರ್ಶನ ಮಾಡುತ್ತವೆಯೇ? ಅನ್ನೋದನ್ನು ನೋಡಬೇಕಿದೆ.

More from Filmibeat

English summary
Fans Demanding to release Kantara Chapter 1 Releasing in Bengaluru Urvashi and Mukunda Theater;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X