ರಾಕಿಂಗ್ ಜೋಡಿಯಂತೆ ಅಭಿಮಾನಿ ನಿಶ್ಚಿತಾರ್ಥ.. ಕಾಸ್ಟೂಮ್, ಸೆಟ್ ಸೇಮ್ ಟು ಸೇಮ್: ರಾಧಿಕಾ ಹೇಳಿದ್ದೇನು?
ಸ್ಯಾಂಡಲ್‌ವುಡ್‌ನ ರಾಕಿಂಗ್ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್. ಇವರಿಬ್ಬರ ನಿಶ್ಚಿತಾರ್ಥದಿಂದ ಹಿಡಿದು ಮದುವೆವರೆಗೂ ಅದ್ಧೂರಿ ಸಮಾರಂಭವೇ ನಡೆದಿತ್ತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ನಿಶ್ಚಿತಾರ್ಥ ಕಣ್ತುಂಬಿಕೊಂಡ ಅದೆಷ್ಟೋ ಮಂದಿ ನಾವೂ ಹೀಗೆ ಆಗ್ಬೇಕು ಅಂದುಕೊಂಡಿದ್ದರು.
ನಿಶ್ಚಿತಾರ್ಥದಲ್ಲಿ ಕಡು ನೀಲಿ ಬಣ್ಣದ ಲೆಹೆಂಗದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದರು. ಡಿಸೈನರ್ ಶೇರ್ವಾನಿ ತೊಟ್ಟು ರಾಕಿ ಭಾಯ್ ಮಿಂಚಿದ್ದರು. ಈಗ ರಾಧಿಕಾ ಪಂಡಿತ್ ಅವರ ವಿಶೇಷ ಅಭಿಮಾನಿಯೊಬ್ಬರು ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಯಶ್-ರಾಧಿಕಾ ಪಂಡಿತ್‌ರಂತೆಯೇ ನಿಶ್ಚಿತಾರ್ಥ ಸಮಾರಂಭವನ್ನು ಆ ಅಭಿಮಾನಿ ರೀ-ಕ್ರಿಯೇಟ್ ಮಾಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗಿದೆ. ಅಲ್ಲದೆ ಅಭಿಮಾನಿಯನ್ನು ನಿಶ್ಚಿತಾರ್ಥದ ವಿಡಿಯೋ ನೋಡಿ ಸ್ವತ: ರಾಧಿಕಾ ಪಂಡಿತ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಅಷ್ಟಕ್ಕೂ ಯಾರು ಈ ಅಭಿಮಾನಿ? ರಾಕಿಂಗ್ ಜೋಡಿಯ ನಿಶ್ಚಿತಾರ್ಥವನ್ನೇ ರೀ-ಕ್ರಿಯೇಟ್ ಮಾಡಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಗೋವಾದಲ್ಲಿ ರಾಕಿಂಗ್ ಜೋಡಿ ನಿಶ್ಚಿತಾರ್ಥ
ಸ್ಯಾಂಡಲ್‌ವುಡ್‌ನ ರಾಕಿಂಗ್ ಜೋಡಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2016ರಲ್ಲಿ ನಡೆದ ಸಮಾರಂಭದಲ್ಲಿ ರಾಧಿಕಾ ಹಾಗೂ ಯಶ್ ಎಂಗೇಜ್ ಆಗಿದ್ದರು. ಆ ವೇಳೆ ರಾಧಿಕಾ ಪಂಡಿತ್ ಕಟು ನೀಲಿ ಬಣ್ಣದ ಲೆಹೆಂಗ ತೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದರು.
ರಾಧಿಕಾ ಪಂಡಿತ್ ಡಿಸೈನರ್ ಕಾಸ್ಟ್ಯೂಮ್ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ ಶೋಭಿತಾ ಅನ್ನೋ ಅಭಿಮಾನಿಯೊಬ್ಬರು ಅವರಂತೆಯೇ ಕಾಸ್ಟ್ಯೂಮ್ ಧರಿಸಿದ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿ ರಾಧಿಕಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಧಿಕಾ ಪಂಡಿತ್‌ರಂತೆ ಮಿಂಚಿದ ಅಭಿಮಾನಿ
ಶೋಭಿತಾ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದರು. ನಿಶ್ಚಿತಾರ್ಥದಲ್ಲಿ ರಾಧಿಕಾ ಧರಿಸಿದಂತೆಯೇ ಲೆಹೆಂಗಾ ಡಿಸೈನ್ ಮಾಡಿಸಿದ್ದರು. ಅಲ್ಲದೆ ಬ್ಯಾಕ್‌ಗ್ರೌಂಡ್ ಕೂಡ ಸೇಮ್ ಟು ಸೇಮ್ ರೀ-ಕ್ರಿಯೇಟ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ಅಭಿಮಾನಿ ಶೋಭಿತಾ ಮೈಸೂರಿನಲ್ಲಿ ಕಿರಣ್ ಬಾಬು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಧಿಕಾ-ಯಶ್ ನಿಶ್ಚಿತಾರ್ಥದಂತೆ ಸೇಮ್ ಟು ಸೇಮ್ ಮರುಸೃಷ್ಟಿ ಮಾಡಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ರಾಧಿಕಾ ಪಂಡಿತ್ ಪ್ರತಿಕ್ರಿಯೆ ಏನು?
ರಾಧಿಕಾ ಕಾಸ್ಟ್ಯೂಮ್ ಅಷ್ಟೇ ಕಾಪಿ ಮಾಡಿರಲಿಲ್ಲ. ಬದಲಾಗಿ, ಹೇರ್ ಸ್ಟೈಲ್, ಮೇಕಪ್, ಮೂಗುತಿ ಎಲ್ಲವನ್ನೂ ನಕಲಿ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ರಾಧಿಕಾ ಪಂಡಿತ್ ಅವರಿಗೆ ಟ್ಯಾಗ್ ಕೂಡ ಮಾಡಿದ್ದರು. ಈ ವಿಡಿಯೋಗೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಧಿಕಾ ಪಂಡಿತ್ ತನ್ನ ಅಭಿಮಾನಿಯ ವಿಡಿಯೋ ನೋಡಿ "ಇದೊಂದು ಬ್ಯೂಟಿಫುಲ್ ರೀ-ಕ್ರಿಯೇಷನ್.. ಡಿಯರ್ ಶೋಭಿತಾ.. ನೀವು ಸುಂದರವಾಗಿ ಕಾಣುತ್ತಿದ್ದಿರ. ಕಾರಣವೇನಂದ್ರೆ, ನೀವು ಸಹಜ ಸುಂದರಿ" ಎಂದು ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಎಂಗೇಜ್ ಆದ ಜೋಡಿಗೆ ಶುಭ ಕೋರಿದ್ದಾರೆ.


Click it and Unblock the Notifications











