For Quick Alerts
  ALLOW NOTIFICATIONS  
  For Daily Alerts

  Exclusive: ಕರ್ನಾಟಕದಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್': 'ಗಂಧದ ಗುಡಿ' ಫ್ಲೇವರ್ಸ್ ಸವಿಯಲು ರೆಡಿಯಾಗಿ!

  |

  ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕೊನೆಯ ಬಾರಿ ದರ್ಶನ ನೀಡುತ್ತಿದ್ದಾರೆ. ತೆರೆಮೇಲೆ ಪವರ್‌ಸ್ಟಾರ್ ಆಗಿರದೆ ಪುನೀತ್ ರಾಜ್‌ಕುಮಾರ್ ಆಗಿಯೇ ದರ್ಶನ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ 'ಗಂಧದ ಗುಡಿ' ಕನ್ನಡ ಚಿತ್ರರಂಗಕ್ಕೆ, ಅಪ್ಪು ಅಭಿಮಾನಿಗಳಿಗೆ ವಿಶೇಷ ಸಿನಿಮಾ.

  'ಗಂಧದ ಗುಡಿ' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿವೆ. ಈ ಬೆನ್ನಲ್ಲೇ ತೆರೆಮರೆಯಲ್ಲಿ ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆಗಳು ಆರಂಭ ಆಗಿವೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಜನರಿಂದ ಮೆಚ್ಚುಗೆ ಗಳಿಸಿದೆ.

  67ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಡಾ.ಪುನೀತ್ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ!67ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಡಾ.ಪುನೀತ್ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ!

  ಅಪ್ಪು ಕನಸಿನ ಕೂಸು 'ಗಂಧದ ಗುಡಿ' ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಹಬ್ಬ ಆಚರಿಸುವುದಕ್ಕೆ ಸಜ್ಜಾಗಿದ್ದಾರೆ. ಭೋಜನ ಪ್ರಿಯ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕರ್ನಾಟಕದಾದ್ಯಂತ ವಿನೂತನ ಪ್ರಚಾರ ಮಾಡಲು ಸಜ್ಜಾಗಿದ್ದು, ಅಪ್ಪು ಹೆಸರಲ್ಲಿ ಫುಡ್‌ಫೆಸ್ಟಿವಲ್ ನಡೆಯಲಿದೆ. ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

  ಫ್ಯಾನ್ಸ್‌ನಿಂದ 'ಪುನೀತ್ ಫುಡ್ ಫೆಸ್ಟಿವಲ್'

  ಫ್ಯಾನ್ಸ್‌ನಿಂದ 'ಪುನೀತ್ ಫುಡ್ ಫೆಸ್ಟಿವಲ್'

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇದೇ ತಿಂಗಳು (ಅಕ್ಟೋಬರ್ 29ಕ್ಕೆ ) ಒಂದು ವರ್ಷ ಆಗುತ್ತೆ. ಒಂದು ದಿನ ಮುನ್ನ (ಅಕ್ಟೋಬರ್ 28)ರಂದು 'ಗಂಧದ ಗುಡಿ' ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಅಭಿಮಾನಿಗಳು ಕರ್ನಾಟದಾದ್ಯಂತ ವಿನೂತನ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅಪ್ಪು ಭೋಜನ ಪ್ರಿಯ ಅನ್ನೋದು ಗೊತ್ತಿದೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ರಾಜ್ಯಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್' ಅನ್ನು ಎರಡು ದಿನಗಳ ಕಾಲ ನಡೆಸಲು ಮುಂದಾಗಿದ್ದಾರೆ. ಅಕ್ಟೋಬರ್ 22 ಹಾಗೂ 23 ಈ ಎರಡು ದಿನಗಳ ಕಾಲ ನಡೆಯಲಿದೆ.

  'ಗಂಧದ ಗುಡಿ'ಯಲ್ಲಿ ಬದುಕಿದ ದೊಡ್ಮನೆ: ಡಾ.ರಾಜ್‌, ಶಿವಣ್ಣ, ಪುನೀತ್ ಸಿನಿಮಾ ಹೈಲೈಟ್ ಏನು?'ಗಂಧದ ಗುಡಿ'ಯಲ್ಲಿ ಬದುಕಿದ ದೊಡ್ಮನೆ: ಡಾ.ರಾಜ್‌, ಶಿವಣ್ಣ, ಪುನೀತ್ ಸಿನಿಮಾ ಹೈಲೈಟ್ ಏನು?

  'ಗಂಧದ ಗುಡಿ' ಮೆನ್ಯೂ ಹೇಗಿರುತ್ತೆ?

  'ಗಂಧದ ಗುಡಿ' ಮೆನ್ಯೂ ಹೇಗಿರುತ್ತೆ?

  ಕರ್ನಾಟಕದ ಮೂಲೆ ಮೂಲೆಯಲ್ಲಿ ಪುನೀತ್ ಫುಡ್ ಫೆಸ್ಟಿವಲ್ ಅನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಎಷ್ಟು ಸಾಧ್ಯವೋ ಅಷ್ಟು ಹೊಟೇಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಇಷ್ಟು ಪಡುತ್ತಿದ್ದ ಆಹಾರವನ್ನು ಸಿದ್ಧಪಡಿಸಲಿದ್ದಾರೆ. ಈ ಮೆನ್ಯೂಗಳಿಗೆ 'ಫ್ಲೇವರ್ಸ್ ಆಫ್ ಗಂಧದ ಗುಡಿ' ಎಂದು ಹೆಸರಿಡಲಾಗಿದೆ. ಸಸ್ಯಾಹಾರಿ ಹೊಟೇಲ್‌ಗಳಲ್ಲಿ ವೆಬ್ ಮೆನ್ಯೂ ಹಾಗೂ ಮಾಂಸಹಾರಿ ಹೊಟೇಲ್‌ಗಳಲ್ಲಿ ನಾನ್ ವೆಜ್ ಇರುತ್ತೆ. ಈ ಆಹಾರವನ್ನು ಹಣ ನೀಡಿ ಜನರು ಸವಿಯಬಹುದು.

  ಅಪ್ಪು ಭೋಜನ ಪ್ರಿಯ

  ಅಪ್ಪು ಭೋಜನ ಪ್ರಿಯ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭೋಜನ ಪ್ರಿಯ ಅನ್ನೋದು ಗೊತ್ತೇ ಇದೆ. ಅದರಲ್ಲೂ ಬಿರಿಯಾನಿ ಅಂದ್ರೆ, ನಾನ್ ವೆಜ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ಅವರು ಇಷ್ಟ ಪಡುವ ಫುಡ್ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡೇ ಫುಡ್ ಮೆನ್ಯು ಸಿದ್ಧವಾಗುತ್ತಿದೆ. ಸದ್ಯದ್ರಲ್ಲೇ ಅಪ್ಪು ಅಭಿಮಾನಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದಾರೆ. ಪುನೀತ್ ರಾಜ್‌ಕುಮಾರ್ ಫುಡ್‌ಫೆಸ್ಟಿವಲ್‌ನಲ್ಲಿ ಭಾಗವಹಿಸಿದವರಿಗೆ ಸರ್ಪ್ರೈಸ್ ಕೂಡ ಇರುತ್ತೆ.

  'ಗಂಧದ ಗುಡಿ' ಈವೆಂಟ್ ಸಿದ್ಧತೆ

  'ಗಂಧದ ಗುಡಿ' ಈವೆಂಟ್ ಸಿದ್ಧತೆ

  'ಗಂಧದ ಗುಡಿ' ಪ್ರೀ-ರಿಲೀಸ್ ಈವೆಂಟ್‌ಗೆ ಅಭಿಮಾನಿಗಳು ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಸ್ವತ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಅಖಾಡಕ್ಕಿಳಿದಿದ್ದಾರೆ. ದಕ್ಷಿಣ ಭಾರತದ ದಿಗ್ಗಜರಾದ ರಜನಿಕಾಂತ್ ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಇನ್ನೊಂದು ಕಡೆ ಅಮಿತಾಭ್ ಬಚ್ಚನ್‌ಗೆ ಕೂಡ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಕರ್ನಾಟಕದ ಸಿಎಮ ಬಜವರಾಜ್ ಬೊಮ್ಮಾಯಿ ಅವರಿಗೂ ಇನ್ವಿಟೇಷನ್ ಕೊಡಲಾಗಿದೆ.

  English summary
  Fans Organising Puneeth Rajkumar Food Festival In Karnataka On Gandhada Gudi Release, Know More.
  Wednesday, October 12, 2022, 14:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X