ಮಹಾಲಕ್ಷ್ಮಿ ಲೇಔಟ್‌ನ ವಾರ್ಡ್‌ಗೆ ಪುನೀತ್ ಹೆಸರಿಡುವಂತೆ ಅಭಿಮಾನಿಗಳಿಂದ ಮನವಿ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅವರು ಮಾಡಿದ ಸಾಮಾಜಿಕ ಕೆಲಸಗಳು ಅಭಿಮಾನಿಗಳ ಮನಗೆದ್ದಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಯುವಕರು ಅಪ್ಪು ಕೆಲಸದಿಂದ ಪ್ರೇರಣೆ ಪಡೆದು ಸಮಾಜ ಮುಖಿ ಕೆಲಸಕ್ಕೆ ಕೈ ಹಾಕಿದ್ದಾರೆ.

ಪುನೀತ್ ರಾಜ್‌ಕುಮಾರ್ ಕಣ್ಮರೆಯಾಗಿ ಈಗಾಗಲೇ 8 ತಿಂಗಳುಗಳಾಗಿವೆ. ಆದರೂ, ಪುನೀತ್ ಅಭಿಮಾನಿಗಳು ಅವರ ಹೆಸರನ್ನು ಅಜರಾಮರ ಮಾಡುವುದಕ್ಕೆ ಮುಂದಾಗಿದ್ದಾರೆ. ಒಂದಲ್ಲ ಒಂದು ರೀತಿ ಅಪ್ಪುನಾ ಜೀವಂತವಾಗಿಡುವಂತೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನ ವಾರ್ಡ್‌ಗೆ ಅಪ್ಪು ಹೆಸರಿಡುವಂತೆ ಮನವಿ

ಬೆಂಗಳೂರಿನ ವಾರ್ಡ್‌ಗೆ ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. ವಿಧಾನ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಗೆ ಇಂದು (ಜುಲೈ 05) ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Fans Requested Officials That Mahalakshmi Layout New Wards to Be Name Puneeth Rajkumar

ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್‌ಗಳು ವಿಂಗಡಣೆಯಾಗಿದೆ. ವಾರ್ಡ್ ನಂ 55 ಹಾಗೂ ವಾರ್ಡ್ ನಂ 54ಕ್ಕೆ ಕಾವೇರಿ ನಗರ ಹಾಗೂ ಜೈ ಮಾರುತಿ ನಗರ ಎಂದು ಹೆಸರಿಡಲಾಗಿದೆ. ಈ ವಾರ್ಡ್‌ಗಳಲ್ಲೊಂದಕ್ಕೆ ಡಾ. ಪುನೀತ್ ರಾಜ್‌ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಬೇಕು ಎಂದು ಅಭಿಮಾನಿಗಳು ವಿಧಾನಸೌಧದ ನಗರಾಭಿವೃದ್ಧಿ ಇಲಾಖೆಗೆ ತೆರಳಿ ಮನವಿ ಮಾಡಿಕೊಂಡಿದ್ದಾರೆ.

ಮಹಾಲಕ್ಷ್ಮಿ ವಾರ್ಡ್‌ ಯಾಕೆ ಬೇಕು?

ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದಲ್ಲಿಯೇ ಡಾ. ರಾಜ್‌ಕುಮಾರ್, ಡಾ. ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ಅವರ ಪುಣ್ಯಭೂಮಿ ಬರುತ್ತೆ. ಈ ಕಾರಣಕ್ಕೆ ಪುಣ್ಯಭೂಮಿಗೆ ಹೊಂದಿಕೊಂಡಂತಹ ವಾರ್ಡ್‌ಗಳು ವಿಂಗಡಣೆಯಾಗಿರುವುದರಿಂದ ಎರಡರಲ್ಲಿ ಒಂದಕ್ಕೆ ಡಾ. ಪುನೀತ್ ರಾಜ್‌ಕುಮಾರ್ ವಾರ್ಡ್ ಎಂದು ಹೆಸರಿಡಬೇಕು ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಜುಲೈ 8ರವರೆಗೆ ಆಕ್ಷೇಪಣೆ ಸಲ್ಲಿಸುವವರಿಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಅಷ್ಟರೊಳಗೆ ಯಾರೂ ಆಕ್ಷೇಪಣೆ ವ್ಯಕ್ತ ಪಡಿಸದೇ ಹೋದರೆ, ಮಹಾಲಕ್ಷ್ಮಿಯ ಎರಡು ವಾರ್ಡ್‌ಗಳಲ್ಲಿ ಒಂದಕ್ಕೆ ಪುನೀತ್ ರಾಜ್‌ಕುಮಾರ್ ವಾರ್ಡ್ ಎಂದು ಹೆಸರಿಡುವ ಸಾಧ್ಯತೆ ಇದೆ.

Fans Requested Officials That Mahalakshmi Layout New Wards to Be Name Puneeth Rajkumar

ನಿರಂತರ ಅಪ್ಪು ಅಭಿಮಾನಿಗಳಿಂದ ಮನವಿ

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನಾಳೆ( ಜುಲೈ 06) ಕೂಡ ಮನವಿ ಮಾಡಿಕೊಳ್ಳಲಿದ್ದಾರೆ. ಅಭಿಮಾನಿಗಳು ಗುಂಪಾಗಿ ಹೋಗಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಮತ್ತೆ ಮನವಿ ಮಾಡಿಕೊಳ್ಳಲಿದ್ದಾರೆ.

ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಸಾವಿರಾರು ರೋಗಿಗಳಿಗೆ ಪುನೀತ್ ರಾಜ್‌ಕುಮಾರ್ ಸಹಾಯ ಹಸ್ತ ನೀಡಿದ್ದರು. ಇದರಿಂದ ಮಹಾಲಕ್ಷ್ಮಿ ವಾರ್ಡ್‌ನ ಯಾವುದಾದ್ರೂ ಒಂದು ವಾರ್ಡ್‌ಗೆ ಡಾ. ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವುದು ಮುಖ್ಯ ಎಂದು ಅಭಿಮಾನಿಗಳ ಅಭಿಪ್ರಾಯ.

More from Filmibeat

English summary
Fans Requested Officials That Mahalakshmi Layout New Wards to Be Name Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X