ಡಾರ್ಲಿಂಗ್ ಬರ್ತ್‌ಡೇಗೆ 'ಫಾದರ್' ಪೋಸ್ಟರ್ ಔಟ್; ರಿಲೀಸ್ ಯಾವಾಗ?

ಸ್ಯಾಂಡಲ್‌ವುಡ್‌ನ ಡಾರ್ಲಿಂಗ್, 'ಲವ್ ಮಾಕ್ಟೇಲ್' ಖ್ಯಾತಿಯ ಕೃಷ್ಣ ನಾಳೆ (ಜೂನ್ 12) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ, ನಿರ್ದೇಶಕನಾಗಿ ಯಶಸ್ಸು ಕಂಡಿರುವ ಡಾರ್ಲಿಂಗ್ ಕೃಷ್ಣ ಭಾವನಾತ್ಮಕ ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ 'ಫಾದರ್'. ಇವರ ಹುಟ್ಟಹಬ್ಬದ ಸಲುವಾಗಿ ಈ ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದೆ.

ಆರ್‌. ಚಂದ್ರು ಅವರ ಆರ್.ಸಿ. ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಸಿನಿಮಾ 'ಫಾದರ್' ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ಸಿನಿಮಾದ ಟೈಟಲ್‌ನಿಂದಲೇ ಇದೊಂದು ಭಾವನಾತ್ಮಕ ಸಿನಿಮಾ ಎಂದು ಗೆಸ್ ಮಾಡಬಹುದು. 'ಕಬ್ಜ' ಸಿನಿಮಾ ನಿರ್ದೇಶಿಸಿದ ಬಳಿಕ ಆರ್‌.ಚಂದ್ರು ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಆ ಸಂಸ್ಥೆಯ ಮೂಲಕ 'ಫಾದರ್' ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದ್ದರು.

Father Kannada film first look has been released as part of Darling Krishna s birthday

'ಫಾದರ್' ಅನ್ನೋದು ಕಾಳಜಿಯ ಸಂಕೇತ. ಸುಂದರ ಬದುಕು ರೂಪಿಸುವ ಜೀವ. ಪ್ರತಿಯೊಬ್ಬರ ಬದುಕಿನಲ್ಲೂ 'ಫಾದರ್' ಪ್ರಮುಖ ಪಾತ್ರ ವಹಿಸಿರುತ್ತಾನೆ. ಹೀಗಾಗಿ ತಂದೆಯನ್ನು ಮುಂದಿಟ್ಟುಕೊಂಡು ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಅವು ಪ್ರೇಕ್ಷಕರಿಗೆ ಇಷ್ಟ ಕೂಡ ಆಗಿವೆ. ಇದರ ಜೊತೆಗೆ ಮತ್ತೊಂದು ಅಪರೂಪದ ಕಥಾಹಂದರದ ಸಿನಿಮಾವನ್ನು ಆರ್.ಚಂದ್ರು ನಿರ್ಮಾಣ ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಫಾದರ್' ಸಿನಿಮಾ ಬಹುತೇಕ ಕಂಪ್ಲೀಟ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ಇದೀಗ ಪ್ರೇಕ್ಷಕರ ಮುಂದೆ ಬರುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಕೃಷ್ಣ ಹಾಗೂ ಪ್ರಕಾಶ್ ರಾಜ್ ಕಾಂಬಿನೇಷನ್ ಪ್ರೇಕ್ಷಕರನ್ನು ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಸಫಲ ಆಗುತ್ತಾ? ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗುತ್ತಿದೆ.

ಜೂನ್ 12ಕ್ಕೆ 'ಫಾದರ್' ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬ. ಹೀಗಾಗಿ ನಿರ್ಮಾಪಕ ಆರ್‌.ಚಂದ್ರು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ. ಅಂದ್ಹಾಗೆ ಇಲ್ಲಿ 'ಫಾದರ್' ಪಾತ್ರದಲ್ಲಿ ನಟಿಸಿರುವುದು ಪ್ರಕಾಶ್ ರಾಜ್. ಈ ಸಿನಿಮಾದ ಹೈಲೈಟ್ ಇವರೇ. ಇವರೊಂದಿಗೆ ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ಡಾರ್ಲಿಂಗ್ ಕೃಷ್ಣ ಹಾಗೂ ತಂದೆಯಾಗಿ ಪ್ರಕಾಶ್‌ ರಾಜ್ ಕಾಂಬಿನೇಷನ್‌ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎನ್ನುತ್ತಾರೆ ನಿರ್ದೇಶಕ ಆರ್. ಚಂದ್ರು.

'ಫಾದರ್' ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ, 'ಲವ್‌ ಮಾಕ್ಟೇಲ್' ಜೋಡಿ. ಹೌದು 'ಫಾದರ್' ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ತೆರೆಮೇಲೆ ಮೋಡಿ ಮಾಡುವುದಕ್ಕೆ ಮುಂದಾಗಿದ್ದಾರೆ. ಇವರೊಂದಿಗೆ ಜನಪ್ರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷ. ಹೀಗಾಗಿ 'ಫಾದರ್' ಕನ್ನಡ ಚಿತ್ರರಂಗ ಮತ್ತೊಂದು ನಿರೀಕ್ಷಿತ ಸಿನಿಮಾ ಎನ್ನಬಹುದು.

ಆರ್‌.ಚಂದ್ರು ನಿರ್ದೇಶಿಸಿದ ಎಮೋಷನಲ್ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗಿದೆ. 'ತಾಜ್‌ ಮಹಲ್' ಹಾಗೂ 'ಚಾರ್‌ಮಿನಾರ್' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಗೆದ್ದಿವೆ. ಈಗ ನಿರ್ಮಾಣಕ್ಕೆ ಇಳಿದಿರುವುದರಿಂದ ಆರ್‌. ಚಂದ್ರು ಮತ್ತೊಂದು ಭಾವನಾತ್ಮಕ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುತ್ತಾರೆಂಬ ನಿರೀಕ್ಷೆಯಿದೆ. 'ಫಾದರ್' ಕೂಡ ಇದೇ ಎಕ್ಸ್‌ಪೆಕ್ಟೆಷನ್ ಅನ್ನು ದುಪ್ಪಟ್ಟು ಮಾಡಿದೆ. ಈಗ 'ಫಾದರ್' ಕೂಡ ಒಂದೊಳ್ಳೆಯ ಸಿನಿಮಾ ಆಗಿ ಹೊರ ಹೊಮ್ಮುತ್ತೆ ಎಂಬ ಲೆಕ್ಕಾಚಾರವಿದೆ. ಸದ್ಯ ಭರವಸೆ ಮೂಡಿಸಿರುವ 'ಫಾದರ್' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು.

'ಫಾದರ್' ಸಿನಿಮಾ ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಶೂಟಿಂಗ್ ಆಗಿದೆ. ಹಾಗೇ ವಾರಣಾಸಿಯಲ್ಲೂ ಈ ಸಿನಿಮಾ ಚಿತ್ರೀಕರಣಗೊಂಡಿದೆ. ಮುಂಬೈನ ಉದ್ಯಮಿ ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಾಂಡ್ಯನ್ ಆರ್.ಸಿ.ಸ್ಟುಡಿಯೋಸ್‌ಗೆ ಬೆಂಬಲ ನೀಡಿದ್ದಾರೆ. ರಾಜ್‍ ಮೋಹನ್‍ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

More from Filmibeat

English summary
Father Kannada film first look has been released as part of Darling Krishna's birthday;
Read more about: darling krishna father r chandru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X