twitter
    For Quick Alerts
    ALLOW NOTIFICATIONS  
    For Daily Alerts

    ಸಾಹಸ ಕಲಾವಿದ ವಿವೇಕ್ ಸಾವು: ಚಂದನವನದಲ್ಲಿ ಇಂಥ ದುರಂತ ಘಟನೆ ಮೊದಲಲ್ಲ

    |

    ನಟ ಅಜಯ್ ಮತ್ತು ರಚಿತಾ ರಾಮ್ ನಟನೆಯ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಫೈಟರ್ (ಸಾಹಸ ಕಲಾವಿದ) ವಿವೇಕ್ ಮೃತಪಟ್ಟಿದ್ದಾರೆ. ಬಿಡದಿ ಹೊಬಳಿಯ ಜೋಗರಪಾಳ್ಯ ಗ್ರಾಮದಲ್ಲಿ ಸಿನಿಮಾದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    Recommended Video

    ಚಿತ್ರತಂಡದ ಬೇಜವಾಬ್ದಾರಿಯನ್ನು ಒಪ್ಪಿಕೊಂಡ ಅಜಯ್ ರಾವ್

    ಫೈಟ್ ಮಾಸ್ಟರ್ ವಿನೋದ್ ನಿರ್ದೇಶನದಲ್ಲಿ ಲವ್ ಯು ರಚ್ಚು ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಹೈಟೆನ್ಷನ್ ವಿದ್ಯುತ್ ಲೈನ್ ಕೆಳಗೆ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಹೈಟೆನ್ಷನ್ ವೈರ್ ತಗುಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದಾರೆ. ಚಿತ್ರೀಕರಣ ಪ್ರಾರಂಭ ಮಾಡುವ ಮೊದಲೇ ಈ ಘಟನೆ ನಡೆದಿದೆ.

    11 ಕೆವಿ ವಿದ್ಯುತ್ ತಂತಿ ಇದ್ದ ಸ್ಥಳದಲ್ಲೇ ಚಿತ್ರೀಕರಣ ಮಾಡಲಾಗುತ್ತಿತ್ತು. ಫೈಟ್ ದೃಶ್ಯದ ಚಿತ್ರೀಕರಣದ ವೇಳೆ ವಿವೇಕ್‌ಗೆ ಆ ವೈಯರ್ ತಗುಲಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿವೇಕ್ ಸಾವನ್ನಪ್ಪಿದ್ದಾರೆ. ಸದ್ಯ ವಿವೇಕ್ ಮೃತದೇಹ ಬೆಂಗಳೂರಿನ ಆರ್ ಆರ್ ನಗರ ಆಸ್ಪತ್ರೆಯಲ್ಲಿದೆ. ಆಸ್ಪತ್ರೆ ಬಳಿ ಕುಟುಂಬದವರ ಆಕ್ರಂದನ ಮುಗಿಸು ಮುಟ್ಟಿದೆ. ಮಗನನ್ನು ಕಳೆದುಕೊಂಡು ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಚಿಕ್ರತಂಡದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಂದೆ ಓದಿ..

    ನಟ ಅಜಯ್ ರಾವ್ ಪ್ರತಿಕ್ರಿಯೆ

    ನಟ ಅಜಯ್ ರಾವ್ ಪ್ರತಿಕ್ರಿಯೆ

    ಘಟನೆ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ನಟ ಅಜಯ್ ರಾವ್, "ಇಂದು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿತ್ತು. ಘಟನೆ ವೇಳೆ ದೊಡ್ಡ ಶಬ್ದ ಬಂದ ಬಳಿಕವಷ್ಟೆ ಅಲ್ಲಿ ಏನೋ ಆಗಿದೆ ಎಂದು ಗೊತ್ತಾಯಿತು.ಆ ಸೀನ್ ನಲ್ಲಿ ನಾನು ಇರಲಿಲ್ಲ ಹಾಗಾಗಿ ನಾನು ತುಂಬ ದೂರದಲ್ಲಿದ್ದೆ. ವಿವೇಕ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವಿವೇಕ್ ಗೆ ನ್ಯಾಯ ಸಿಗುವವೆರಗೂ ತಾನು ಚಿತ್ರೀಕರಣಕ್ಕೆ ಹೋಗಲ್ಲ" ಎಂದು ಅಜಯ್ ರಾವ್ ಹೇಳಿದ್ದಾರೆ.

    ವಿವೇಕ್ ತಾಯಿಯ ಆಕ್ರಂದನ

    ವಿವೇಕ್ ತಾಯಿಯ ಆಕ್ರಂದನ

    ಮಗನನ್ನು ಕಳೆದುಕೊಂಡು ವಿವೇಕ್ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ವಿವೇಕ್ ತಾಯಿ "ಮಗನಿಗೆ ಈ ಕೆಲಸ ಬೇಡ, ತುಂಬ ಕಷ್ಟದ ಕೆಲಸ ಎಂದು ಹೇಳುತ್ತಿದ್ದೆ. ಆದರೆ ಕೊನೆಯ ದಿನದ ಚಿತ್ರೀಕರಣ, ಫೈಟ್ ಮಾಸ್ಟರ್ ಫೋನ್ ಮಾಡಿದ್ದಾರೆ ಹೋಗಬೇಕು ಎಂದು ಹೋದವನು ಬಂದೇ ಇಲ್ಲ" ಎಂದು ಮಗನನ್ನು ಕಳೆದುಕೊಂಡು ತಾಯಿ ರೋದಿಸುತ್ತಿದ್ದಾರೆ.

    ದೇಶವನ್ನೇ ಬೆಚ್ಚಿಬೀಳಿಸಿದ್ದ ಮಾಸ್ತಿಗುಡಿ ದುರಂತ

    ದೇಶವನ್ನೇ ಬೆಚ್ಚಿಬೀಳಿಸಿದ್ದ ಮಾಸ್ತಿಗುಡಿ ದುರಂತ

    ಅಂದಹಾಗೆ ಕನ್ನಡ ಚಿತ್ರರಂಗದಲ್ಲಿ ಇಂಥ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥ ದುರಂತಗಳು ಸಂಭವಿಸಿದ ಉದಾಹರಣೆಗಳಿವೆ. ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಮಾಸ್ತಿಗುಡಿ ಸಿನಿಮಾ ದುರಂತ ಇನ್ನು ಹಸಿರಾಗೆ ಇದೆ. ಈ ದುರಂತದಿಂದ ಸ್ಯಾಂಡಲ್ ವುಡ್ ನ ಇಬ್ಬರು ಖಳನಟರಾದ ಅನಿಲ್ ಮತ್ತು ಉದಯ್ ಅವರನ್ನು ಕಳೆದುಕೊಳ್ಳಬೇಕಾಯಿತು. ದುನಿಯ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ನಡೆಯುತ್ತಿತ್ತು. ಆಕ್ಷನ್ ದೃಶ್ಯ ಚಿತ್ರೀಕರಣವೇಳೆ ಹೆಲಿಕಾಪ್ಟರ್ ನಿಂದ ನೀರಿಗೆ ಜಿಗಿಯುವ ದೃಶ್ಯದಲ್ಲಿ ಕೆಳಗೆ ನೀರಿಗೆ ಜಿಗಿದ ಅನಿಲ್ ಮತ್ತು ಉದಯ್ ಮೇಲೆ ಬಂದಿಲ್ಲ. ಈ ದುರಂತ ಭಾರತೀಯ ಸಿನಿಮಾರಂಗವನ್ನೇ ಬೆಚ್ಚಿಬೀಳಿಸಿತ್ತು.

    'ರಣಂ' ಚಿತ್ರೀಕರಣ ದುರಂತ

    'ರಣಂ' ಚಿತ್ರೀಕರಣ ದುರಂತ

    ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಅಭಿನಯಿಸುತ್ತಿರುವ ರಣಂ ಸಿನಿಮಾ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದರು. ಚಿತ್ರದ ಸಾಹಸ ದೃಶ್ಯ ಚಿತ್ರೀಕರಣ ಮಾಡುವ ವೇಳೆ ಸ್ಫೋಟ ಆದ ಪರಿಣಾಮ ಚಿತ್ರೀಕರಣ ನೋಡಲು ಬಂದ ಸುಮೈರಾ ಮತ್ತು ಆಯಿಶಾ ಎನ್ನುವ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರು ಬ್ಲಾಸ್ಟ್ ಮಾಡುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆಗ ನಡೆದ ದುರ್ಘಟನೆಯಲ್ಲಿ ಇಬ್ಬರು ಪ್ರಾಣ ಚೆಲ್ಲಿದ್ದರು. ಚಿತ್ರರಂಗದಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತ್ತಲೆ ಇದೆ. ಆದರೂ ಚಿತ್ರತಂಡ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸುರಕ್ಷಿತವಾಗಿ ಚಿತ್ರೀಕರಣ ಮಾಡುವಲ್ಲಿ ಎಡವುತ್ತಿದೆ.

    English summary
    Fighter Vivek Death: Cases of Accidents and Deaths at Shooting Locations in Kannada Film Industry.
    Monday, August 9, 2021, 19:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X