DK Shivakumar:ಚಿತ್ರರಂಗಕ್ಕೆ ಡಿಕೆ ಶಿವಕುಮಾರ್ ವಾರ್ನಿಂಗ್: ಸಿನಿಮಾ-ರಾಜಕೀಯ ಮುಖಂಡರ ಪ್ರತಿಕ್ರಿಯೇನು?
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದ ಬಗ್ಗೆ ಕೊಟ್ಟಿರುವ ಹೇಳಿಕೆ ಈಗ ಪರ ಹಾಗೂ ವಿರೋಧ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಕಲಾವಿದರ ಅನುಪಸ್ಥಿತಿಗೆ ಡಿಕೆಶಿ ಕೆಂಡಾಮಂಡಲವಾಗಿದ್ದರು. ಹೀಗಾಗಿ ವೇದಿಕೆ ಮೇಲೆ ಡಿಕೆಶಿ ಗರಂ ಆಗಿದ್ದರು. ಅಸಮಧಾನ ಹೊರ ಹಾಕಿದ್ದರು.
ಕನ್ನಡದ ಭಾಷೆ, ನೆಲ, ಜಲ ಅಂತ ಬಂದಾಗ ಸ್ಯಾಂಡಲ್‌ವುಡ್‌ನ ಕಲಾವಿದರು ಬೆಂಬಲಕ್ಕೆ ಬರುವುದಿಲ್ಲ. ಮೇಕೆದಾಟು ಪಾದಯಾತ್ರೆ ಮಾಡುವ ವೇಳೆ ಸಾಧುಕೋಕಿಲಾ ಹಾಗೂ ದುನಿಯಾ ವಿಜಯ್ ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ. ಈಗ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನೆಗೂ ತಾರೆಯರು ಬರಲಿಲ್ಲ. ಈ ಕಾರಣಕ್ಕೆ ಡಿಕೆ ಶಿವಕುಮಾರ್ ನೈಟು ಬೋಲ್ಡ್ ಟೈಟ್ ಮಾಡುವುದಕ್ಕೆ ಬರುತ್ತೆ ಎಂದು ಹೇಳಿಕೆ ಕೊಟ್ಟಿದ್ದರು.

ಡಿಕೆ ಶಿವಕುಮಾರ್ ಈ ಹೇಳಿಕೆ ವಿರುದ್ಧ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಮುಖಂಡರು ಪರ ಹಾಗೂ ವಿರೋಧವಾಗಿ ಮಾತಾಡುತ್ತಿದ್ದಾರೆ. ಕನ್ನಡ ನಟಿ ರಮ್ಯಾ, ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಸಿಟಿ ರವಿ ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರು ಆಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಡಿಕೆಶಿ ಪರವಿದ್ದರೆ, ಮತ್ತೆ ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಯಾರ್‍ಯಾರು ಏನೇನು ಪ್ರತಿಕ್ರಿಯೆ ನೀಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಡಿಕೆಶಿ ಹೇಳಿಕೆ ಕೊಡುತ್ತಿದ್ದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಖಾರವಾಗಿ ಪ್ರತಿಕ್ರಿಯಿಸಿದ್ದರು. ಡಿಕೆ ಶಿವಕುಮಾರ್ ಅವರು ತಮ್ಮ ಬಳಿ ಇರುವ ಅಧಿಕಾರ ದರ್ಪದಿಂದ ಹೀಗೆ ಹೇಳಿಯುವುದಕ್ಕೆ ಸಾಧ್ಯವಿದೆ. ನಮ್ಮ ಕಡೆಯಿಂದಾನೂ ತಪ್ಪಾಗಿದೆ. ಆದರೆ, ನಟ್ಟು ಬೋಲ್ಡ್ ಟೈಟ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಹಾಗೇ ಕಲಾವಿದರಿಗೆ ಆಹ್ವಾನ ಬಂದಿರಲಿಲ್ಲ. ಹೀಗಾಗಿ ಅವರು ಬಂದಿಲ್ಲ ಎಂದು ಅಸಮಧಾನವನ್ನು ಹೊರ ಹಾಕಿದ್ದರು.
ಇನ್ನೊಂದು ಕಡೆ ಮೋಹಕತಾರೆ ರಮ್ಯಾ ಹಂಪಿ ಉತ್ಸವದಲ್ಲಿ ಡಿಕೆಶಿ ಪರ ಬ್ಯಾಟ್ ಮಾಡಿದ್ದಾರೆ. ಡಿಕೆ ಸಾಹೇಬ್ರು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ. ಕಲಾವಿದರಾಗಿ ನಮಗೆ ಒಂದು ಜವಾಬ್ದಾರಿಯಿದೆ. ಕನ್ನಡ ಭಾಷೆಗಾಗಿ ಹೋರಾಟ ಅಂತ ಬಂದಾಗ ಎಲ್ಲರೂ ಒಂದಾಗಬೇಕು. ಡಾ.ರಾಜ್‌ಕುಮಾರ್ ಅವರು ಕನ್ನಡ ಭಾಷೆಗಾಗಿ ಎಷ್ಟು ಹೋರಾಟ ಮಾಡಿದ್ದಾರೆ. ಹಿಂದೆ ಕನ್ನಡ ಭಾಷೆ ಹಾಗೂ ನೆಲಕ್ಕಾಗಿ ಇದ್ದ ಪ್ರೋತ್ಸಾಹ ಹಾಗೂ ಬೆಂಬಲ ಈಗಿಲ್ಲ" ಎಂದು ಡಿಕೆಶಿ ಪರ ರಮ್ಯಾ ಹೇಳಿಕೆ ಕೊಟ್ಟಿದ್ದಾರೆ.

ಇನ್ನು ರಾಜಕೀಯ ಕ್ಷೇತ್ರದಲ್ಲೂ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಿಜೆಪಿ ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದರೆ, ಕಾಂಗ್ರೆಸ್ ಮುಖಂಡರು ಡಿಕೆಶಿ ಪರ ಬ್ಯಾಟ್ ಮಾಡಿದ್ದಾರೆ. ಡಿಕೆಶಿ ಹೇಳಿಕೆಯನ್ನು ಕಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ. ಡಿಕೆ ಶಿವಕುಮಾರ್ ಹತಾಶೆಯಿಂದ ಇಂತಹ ಮಾತು ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಹೇಳಿಕೆ ಕೊಡುವುದಕ್ಕೆ ಆಗದೆ ಕನ್ನಡ ಚಿತ್ರರಂಗಕ್ಕೆ ವಿರುದ್ಧ ಹೇಳಿಕೆ ಕೊಟ್ಟು ಸಮಾಧಾನ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿರುದ್ಧ ಮಂಡ್ಯ ಎಂಎಲ್‌ಎ ಗಣಿಗ ರವಿಕುಮಾರ್ ಕಿಡಿಕಾರಿದ್ದಾರೆ. "ಸ್ಯಾಂಡಲ್‌ವುಡ್‌ಗೆ ಲಾಸ್ಟ್ ವಾರ್ನಿಂಗ್ ಕೊಡುತ್ತಿದ್ದೇನೆ. ಫಿಲ್ಮ್ ಚೇಂಬರ್ ಸುಮ್ಮನೆ ಇರಬೇಕು. ಸಿನಿಮಾಗಳಿಗೆ ನೀಡುವ ಸಬ್ಸಿಡಿಯನ್ನು ನಿಲ್ಲಿಸುವಂತೆ ಹೇಳುತ್ತೇನೆ" ಎಂದು ಗಣಗ ರವಿಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಈಗ ಸಿನಿಮಾ ಮಂದಿಯ ನಿದ್ದೆ ಕೆಡಿಸಿತ್ತು.
ಡಿಕೆ ಶಿವಕುಮಾರ್ ಹೇಳಿಕೆಗೆ ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರ ಸಾ ರಾ ಗೋವಿಂದು ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಮಾತನಾಡುವಾಗ ಹಿಡಿತದಲ್ಲಿ ಇರಬೇಕು. ಮಾತಾಡುವಾಗ ಹಿಂದೆ ಮುಂದೆ ನೋಡಿ ಮಾತಾಡಬೇಕು. ಕನ್ನಡ ಚಿತ್ರರಂಗ ಗೋಕಾಕ್ ಚಳುವಳಿ ಮಾಡಿ ಅಂದಿನ ಸರ್ಕಾರವನ್ನು ಬೀಳಿಸಿತ್ತು. ಕನ್ನಡ ಭಾಷೆಗೆ ಅನ್ಯಾಯ ಆಗುವಾಗ ಬೆಂಬಲ ನೀಡುವುದಕ್ಕೆ ನಮ್ಮ ಕರ್ತವ್ಯ ಎಂದು ಸಾರಾ ಗೋವಿಂದು ಕಿಡಿ ಕಾರಿದ್ದಾರೆ.


Click it and Unblock the Notifications











