ಜಯಮಾಲ ವಿರುದ್ಧ ಮುನಿರತ್ನ ಪೈಪೋಟಿ; ಭೀಗರನ್ನೇ ನಿಲ್ಲಬೇಡಿ ಎಂದಿದ್ದೇಕೆ ರಾಕ್‌ಲೈನ್?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಇತರೆ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಈಗ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ವಾಣಿಜ್ಯ ಮಂಡಳಿಯ ಒಂದೊಂದು ಗುಂಪುಗಳು ತಮ್ಮ ಪ್ರತಿನಿಧಿಯನ್ನು ಕಣಕ್ಕೆ ಇಳಿಸಿ ಬ್ಯಾಟ್ ಬೀಸುತ್ತಿದ್ದಾರೆ. ಇದು ಪ್ರತಿ ಬಾರಿ ಚುನಾವಣೆ ನಡೆಯುವಾಗಲೂ ಕಾಣ ಸಿಗುವ ದೃಶ್ಯ. ಆದರೆ, ಈ ಬಾರಿ ವಾತಾವರಣ ಕೊಂಚ ಮಟ್ಟಿಗೆ ವಿಭಿನ್ನವಾಗಿದೆ.

ವಾಣಿಜ್ಯ ಮಂಡಳಿ ಚುನಾವಣೆ ಈ ಬಾರಿ ಬೇರೆಯದ್ದೇ ವಾತಾರವಣ ಸೃಷ್ಟಿಸಿರುವುದಕ್ಕೆ ಕಾರಣ ಮುನಿರತ್ನ ಹಾಗೂ ಡಾ.ಜಯಮಾಲ. ಇವರಿಬ್ಬರೂ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಇಬ್ಬರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಗ್ಯಾಪ್‌ನಲ್ಲಿ ಫಿಲ್ಮ್ ಚೇಂಬರ್ ಚುನಾವಣೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

Film Chamber election Rockline Venkatesh requested Munirathna not to contesting against Jayamala

ಡಾ.ಜಯಮಾಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಮಾಡುತ್ತಿರುವುದರಿಂದ ಮುನಿರತ್ನ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಯಾಕಂದ್ರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಡಾ.ಜಯಮಾಲ. ಮೊದಲೇ ಡಿಕೆ ಶಿವಕುಮಾರ್ ಹಾಗೂ ಮುನಿರತ್ನ ನಡುವೆ ಸಮರ ನಡೆಯುತ್ತಿದೆ. ಹೀಗಾಗಿ ಇಲ್ಲೂ ಟಕ್ಕರ್ ಕೊಡಲೇಬೇಕು ಅಂತ ಮುನಿರತ್ನ ಅಖಾಡಕ್ಕೆ ಇಳಿದಿದ್ದಾರೆ ಅನ್ನೋ ಮಾತಿದೆ. ಆದರೆ, ಭೀಕರಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಿರಿ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದು ಅಚ್ಚರಿ ಮೂಡಿಸಿದೆ.

ಮುನಿರತ್ನ Vs ಜಯಮಾಲ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಾರಕ್ಕೇರುತ್ತಿದೆ. ಅದರಲ್ಲೂ ಈ ಚುನಾವಣೆಗೆ ಮುನಿರತ್ನ ಹಾಗೂ ಜಯಮಾಲ ಇಬ್ಬರೂ ಅಖಾಡಕ್ಕೆ ಇಳಿದಿರೋದು ಗಮನ ಸೆಳೆಯುತ್ತಿದೆ. ಮುನಿರತ್ನ ವಾಣಿಜ್ಯ ಮಂಡಳಿ ಕಡೆ ಮುಖ ಮಾಡಿರೋದು ಬೇರೆಯದ್ದೇ ರಾಜಕೀಯ ಲೆಕ್ಕಾಚಾರಕ್ಕೆ ಎಡೆ ಮಾಡಿಕೊಟ್ಟಿದೆ. ನಿಜಕ್ಕೂ ಇದೆ ಮುನಿರತ್ನ Vs ಜಯಮಾಲನೇನಾ? ಇಲ್ಲ ಮುನಿರತ್ನ Vs ಡಿಕೆ ಶಿವಕುಮಾರ್ ಅನ್ನೋ ಅನುಮಾನ ಮೂಡುವುದಕ್ಕೆ ಶುರು ಮಾಡಿದೆ.

ಫಿಲ್ಮ್‌ ಚೇಂಬರ್‌ಗೆ ಮುನಿ Vs ಡಿಕೆ

ರಾಜ್ಯ ರಾಜಕಾರಣದಲ್ಲಿ ಮುನಿರತ್ನ ಹಾಗೂ ಡಿಕೆ ಶಿವಕುಮಾರ್ ಇಬ್ಬರ ವೈರತ್ವದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ನಿರಂತರವಾಗಿ ಮುನಿರತ್ನ ಹಾಗೂ ಡಿಕೆ ನಡುವೆ ಫೈಟ್ ನಡೆಯುತ್ತಲೇ ಇದೆ. ಇದು ಫಿಲ್ಮ್ ಚೇಂಬರ್‌ಗೆ ಶಿಫ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಡಿಕೆ ಶಿವಕುಮಾರ್ ಬೆಂಬಲದಿಂದ ಡಾ.ಜಯಮಾಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಮುನಿರತ್ನ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು, ಜಯಮಾಲಾರನ್ನು ಸೋಲಿಸಲೇಬೇಕು ಅತ ಪಣ ತೊಟ್ಟಿದ್ದಾರೆ ಎನ್ನಲಾಗಿದೆ.

Film Chamber election Rockline Venkatesh requested Munirathna not to contesting against Jayamala

ಬೀಗರಿಗೆ ರಾಕ್‌ಲೈನ್ ಮನವಿ

ಇಲ್ಲೊಂದು ಟ್ವಿಸ್ಟ್ ಏನಂದ್ರೆ, ಮುನಿರತ್ನ ಭೀಗರಾಗಿರುವ ರಾಕ್‌ಲೈನ್ ವೆಂಕಟೇಶ್ ಅವರೇ ಡಾ.ಜಯಮಾಲಾಗೆ ಬೆಂಬಲ ನೀಡುತ್ತಿದ್ದಾರೆ. ಜಯಮಾಲಾರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಪಣತೊಟ್ಟಿದ್ದಾರೆ. ನಿನ್ನೆ (ಜನವರಿ 21) ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸ್ವತ: ರಾಕ್‌ಲೈನ್ ವೆಂಕಟೇಶ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿಯುವಂತೆ ಭೀಗರಾಗಿರುವ ಮುನಿರತ್ನಗೆ ಮನವಿ ಮಾಡಿಕೊಂಡಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ.

ಹಿಂದೆ ಸರಿಯುತ್ತಾರಾ ಮುನಿರತ್ನ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಮುನಿರತ್ನ ಹಿಂದೆ ಸರಿಯುತ್ತಾರಾ? ರಾಜಕೀಯ ಮುಖಂಡರು ಅವರ ಮನವೊಲಿಸುತ್ತಾರಾ? ಇಲ್ಲಾ ಡಿಕೆ ಶಿವಕುಮಾರ್ ವಿರುದ್ಧ ತೊಡೆತಟ್ಟಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರಾ? ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ.

More from Filmibeat

English summary
Film Chamber election Rockline Venkatesh requested Munirathna not to contesting against Jayamala.
Read more about: munirathna jayamala film chamber
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X