Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Breaking News: ವೀಕೆಂಡ್ ಕರ್ಫ್ಯೂ ವಿರುದ್ಧ ಅಸಮಧಾನ ವಾಣಿಜ್ಯ ಮಂಡಳಿಯಿಂದ ತುರ್ತು ಸಭೆ
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರನೇ ದುಪ್ಪಟ್ಟಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಓಮಿಕ್ರಾನ್ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗಿದ್ದು, ರಾಜ್ಯ ಮುನ್ನೆಚ್ಚರಿಕೆ ಕ್ರಮ ಕೈ ಗೊಂಡಿದೆ. ಇದರಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ, ಮಾಲ್, ಪಬ್, ಥಿಯೇಟರ್‌ಗಳಲ್ಲಿ ಶೇ.50ರಷ್ಟು ಆಸನ ವ್ಯವಸ್ಥೆಯಂತಹ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿರ್ಧಾರದಿಂದ ಕನ್ನಡ ಚಲನ ಚಿತ್ರರಂಗ ಮತ್ತೆ ನಶಿಸಿ ಹೋಗುತ್ತೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಥಿಯೇಟರ್‌ನಲ್ಲಿ ಶೇ. 50ರಷ್ಟು ಆಸನ ವ್ಯವಸ್ಥೆಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ, ವಾರದಲ್ಲಿ ಅತೀ ಹೆಚ್ಚು ಗಳಿಕೆ ಕಾಣುವ ಶನಿವಾರ ಮತ್ತು ಭಾನುವಾರ ಕನ್ನಡ ಚಿತ್ರರಂಗಕ್ಕೆ ವರದಾನದಂತಿತ್ತು. ಆದ್ರೀಗ ಈ ಎರಡೂ ದಿನ ವೀಕೆಂಡ್ ಕರ್ಫ್ಯೂ ಜಾರಿಯಾಗಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ತುರ್ತು ಸಭೆಯನ್ನು ಕರೆದಿದೆ. "ನಾಳೆ (ಜನವರಿ 6) ಎಮರ್ಜೆನ್ಸಿ ಮೀಟಿಂಗ್ ಅನ್ನು ಕರೆದಿದ್ದೇವೆ. ವಾಣಿಜ್ಯ ಮಂಡಳಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಚರ್ಚೆ ಮಾಡಿ, ಈ ಸಮಸ್ಯೆಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅನ್ನುವುದನ್ನ ನಿರ್ಧಾರ ಮಾಡಲಾಗುತ್ತೆ. ಈ ಹಿಂದೆ ಶೇ.100ರಷ್ಟು ಚಿತ್ರಮಂದಿರ ಓಪನ್ ಮಾಡುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ವಿ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡೋಣ ಅಂತಿದೆ. ಆದರೆ, ತುರ್ತು ಸಭೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೆ ಅನ್ನುವುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. " ಎಂದು ಜೈರಾಜ್ ತಿಳಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಚಿತ್ರರಂಗಕ್ಕೆ ಮಾರಕ
ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ, ವೀಕೆಂಡ್ ಕರ್ಫ್ಯೂ, ಈ ಬೆಳವಣಿಗಳಿಂದ ಕನ್ನಡ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ವೀಕೆಂಡ್ ಕರ್ಫ್ಯೂಯಿಂದ ಆತಂಕಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ನಲ್ಲಿ ಮುಂದೆ ಕೈಗೊಳ್ಳಬಹುದಾದ ನಿರ್ಧಾರದ ಬಗ್ಗೆ ಆಲೋಚನೆ ನಡೆಸುತ್ತಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಫಿಲ್ಮ್ ಬೀಟ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಸರ್ಕಾರ ಶೇ. 50ರಷ್ಟು ಆಸನ ವ್ಯವಸ್ಥೆಯನ್ನು ರಾಜ್ಯದ ಜನತೆಯ ಆರೋಗ್ಯ ದೃಷ್ಟಿಯಿಂದ ತಂದಿದೆ. ಅದರ ಬಗ್ಗೆ ನಮಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ವೀಕೆಂಡ್‌ನಲ್ಲಿ ಎರಡು ದಿನ ಕರ್ಪ್ಯೂ ತಂದಿರುವುದು ನಮಗೆ ದೊಡ್ಡ ಆಘಾತ ತಂದಿದೆ. ಇದರಿಂದ ಚಿತ್ರರಂಗವೇ ನಶಿಸಿ ಹೋಗುತ್ತದೆ. ಶನಿವಾರ ಹಾಗೂ ಭಾನುವಾರ ಈ ಎರಡು ದಿನ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತಿತ್ತು. ಈಗ ವೀಕೆಂಡ್ ಕರ್ಫ್ಯೂಯಿಂದ ಮತ್ತೆ ಕನ್ನಡ ಚಿತ್ರರಂಗ ಮುಳುಗುತ್ತೆ." ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.

ವಾಣಿಜ್ಯ ಮಂಡಳಿಯಿಂದ ತುರ್ತು ಸಭೆ
"ನಾಳೆ (ಜನವರಿ 6) ಎಮರ್ಜೆನ್ಸಿ ಮೀಟಿಂಗ್ ಅನ್ನು ಕರೆದಿದ್ದೇವೆ. ವಾಣಿಜ್ಯ ಮಂಡಳಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಚರ್ಚೆ ಮಾಡಿ, ಈ ಸಮಸ್ಯೆಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅನ್ನುವುದನ್ನ ನಿರ್ಧಾರ ಮಾಡಲಾಗುತ್ತೆ. ಈ ಹಿಂದೆ ಶೇ.100ರಷ್ಟು ಚಿತ್ರಮಂದಿರ ಓಪನ್ ಮಾಡುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ವಿ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡೋಣ ಅಂತಿದೆ. ಆದರೆ, ತುರ್ತು ಸಭೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೆ ಅನ್ನುವುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. " ಎಂದು ಜೈರಾಜ್ ತಿಳಿಸಿದ್ದಾರೆ.

ಎರಡು ದಿನಗಳ ನಷ್ಟ ಊಹಿಸಲು ಅಸಾಧ್ಯ
" ಕರ್ನಾಟಕದಲ್ಲಿ ಸುಮಾರು 500 ಚಿತ್ರಮಂದಿರಗಳಿವೆ. ವೀಕೆಂಡ್‌ನಲ್ಲಿ ಚಿತ್ರಮಂದಿರಗಳು ಸ್ಥಬ್ದ ಆಗುವುದರಿಂದ ಕನ್ನಡ ಚಿತ್ರರಂಗ ನಶಿಸಿ ಹೋಗುತ್ತದೆ. ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮನಸ್ಸು ಮಾಡಿದವರೆಲ್ಲರೂ ರಿಲೀಸ್ ಡೇಟ್ ಅನ್ನು ಮುಂದೂಡುತ್ತಿದ್ದಾರೆ. ಮತ್ತೆ ಕನ್ನಡ ಚಿತ್ರರಂಗದಲ್ಲಿ ಆತಂಕ ಎದುರಾಗಿರುವುದಂತೂ ಸತ್ಯ. ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೆ ದೊಡ್ಡ ಸಂಕಷ್ಟ ಎದುರಾಗಿದೆ." ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಅಭಿಪ್ರಾಯ ಪಟ್ಟಿದ್ದಾರೆ.

ಶೇ.50ರಷ್ಟು ಸೀಟು ಭರ್ತಿಗೆ ನಮ್ಮ ಅಭ್ಯಂತರವಿಲ್ಲ
ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹೇಳಿರುವಂತೆ ಚಿತ್ರಮಂದಿರಕ್ಕೆ ಶೇ.50ರಷ್ಟು ಆಸನ ವ್ಯವಸ್ಥೆ ಮಾಡಿರುವುದು ಸಮಸ್ಯೆಯಲ್ಲ. ಅದರ ಬಗ್ಗೆ ಯಾವುದೇ ಅಭ್ಯಂತರವಿಲ್ಲವೆಂದು ಜೈರಾಜ್ ಹೇಳಿದ್ದಾರೆ. "ವೀಕೆಂಡ್ ಕೂಡ ಶೇ. 50 ರಷ್ಟು ಆಸನ ವ್ಯವಸ್ಥೆ ಮಾಡಲಿ. ನಮಗೆ ಯಾವುದೇ ಅಭ್ಯಂತರವಿಲ್ಲ. ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿರುವ ನಿರ್ಮಾಪಕರು 50 ಪರ್ಸೆಂಟ್ ಸಾಮರ್ಥ್ಯದಲ್ಲೇ ಬಿಡುಗಡೆ ಮಾಡುತ್ತಾರೆ. ಆದರೆ, ಸಿನಿಮಾಗಳು ಅತಿ ಹೆಚ್ಚು ಗಳಿಕೆ ಮಾಡುವ ಎರಡು ದಿನಗಳೇ ಕರ್ಫ್ಯೂ ಜಾರಿಗೆ ಮಾಡಿರುವುದು ತೀರಾ ಸಂಕಷ್ಟಕ್ಕೆ ಸಿಲುಕುವ ಸ್ಥಿತಿಯಿದೆ." ಎಂದು ಅಭಿಪ್ರಾಯಪಟ್ಟಿದ್ದಾರೆ.