"ನನಗೆ ಇಷ್ಟು ಕೋಟಿ ಕೊಡಿ.. ಇಷ್ಟು ಕೋಟಿ ಬಜೆಟ್ ಇಟ್ಟುಕೊಂಡು ಬನ್ನಿ ಅಂತಾರೆ": ಫಿಲ್ಮ್ ಚೇಂಬರ್ ಅಧ್ಯಕ್ಷ

ಕಳೆದ ಮೂರು- ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ನಿರ್ಮಾಪಕರು ವಿತರಕರಿಗೆ ನಷ್ಟ ಆಗಿದೆ. ಥಿಯೇಟರ್ ಮಾಲೀಕರಿಗೆ ಎಲೆಕ್ಟ್ರಿಕ್ ಬಿಲ್ ಕಟ್ಟಲಾಗದೇ ಪರದಾಡುತ್ತಿದ್ದಾರೆ. ಒಂದು ಕಾಲದಲ್ಲಿ ಚಿತ್ರಮಂದಿರ ತುಂಬಿದೆ ಅಂತ ಬೋರ್ಡ್ ಹಾಕುತ್ತಿದ್ದ ಪ್ರದರ್ಶಕರು ಈಗ ಚಿತ್ರಮಂದಿರದಲ್ಲಿ ಜನರು ಇಲ್ಲದೆ ಪ್ರದರ್ಶನ ಸ್ಥಗಿತಗೊಂಡಿದೆ ಎಂದು ಬೋರ್ಡ್ ಹಾಕುವ ಪರಿಸ್ಥಿತಿ ಬಂದಿದೆ.

ಇನ್ನೊಂದು ಕಡೆ ಸೂಪರ್‌ಸ್ಟಾರ್‌ಗಳು ಕೇಳುವ ಸಂಭಾವನೆ ಬಗ್ಗೆ ನಿರ್ಮಾಪಕರು ಬೇಸರ ಹೊರ ಹಾಕುತ್ತಿದ್ದಾರೆ. ನಿರ್ಮಾಪಕ ದಿಢೀರನೇ ಸಂಭಾವನೆಯನ್ನು ಏರಿಸಿಕೊಂಡಿದ್ದು, ಅದನ್ನು ನಿರ್ಮಾಪಕರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಹೀರೋಗಳ ಸಂಭಾವನೆ ನೂರಾರು ಕೋಟಿ ದಾಟಿದೆ ಎಂದು ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿದೆ.

Film chamber president Narasimhalu Discusses Plans to Close Kannada Film Industry

ಇತ್ತೀಚೆಗೆ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಈ ಬಗ್ಗೆ ಜೂಮ್ ಮೀಟಿಂಗ್ ಮಾಡಿದೆ. ಎಲ್ಲಾ ಪದಾಧಿಕಾರಿಗಳು ಚಿತ್ರರಂಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದಾರೆ. ಇದರಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿರುವ ನರಸಿಂಹಲು ಅವರು ಉಪಾಧ್ಯಕ್ಷರಾಗಿದ್ದಾರೆ. ಹೀಗಾಗಿ ಅಲ್ಲಿ ನಡೆದ ಚರ್ಚೆಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಇಲ್ಲೂ ಕನ್ನಡ ಚಿತ್ರರಂಗವನ್ನು ಬಂದ್ ಮಾಡುವ ಬಗ್ಗೆ ಚರ್ಚೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಹಾಗಿದ್ದರೆ, ಕರ್ನಾಟಕ ಫಿಲ್ಮ್ ಚೇಂಬರ್ ಬಂದ್ ಆಗುತ್ತಾ? ಏನೆಲ್ಲ ಚರ್ಚೆ ಆಗುತ್ತೆ? ಅನ್ನೋದನ್ನು ನೋಡೋಣ.

ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಇತ್ತೀಚೆಗೆ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗದ ಪರಿಸ್ಥಿತಿಯನ್ನು ಗಂಭೀರವಾಗಿ ಚರ್ಚೆ ಮಾಡಿದ್ದಾರೆ. ಪ್ರಸ್ತುತ ಕನ್ನಡ ಚಿತ್ರರಂಗ ಯಾವ ಸ್ಥಿತಿಯಲ್ಲಿದೆ. ನಿರ್ಮಾಪಕರ ಫಿಲ್ಮ್ ಚೇಂಬರ್‌ನಲ್ಲಿ ತೋಡಿಕೊಂಡ ಅಳಲು ಏನು? ಅನ್ನೋದನ್ನು ಎಳೆ ಎಳೆಯಾಗಿಬಿಚ್ಚಿಟ್ಟಿದ್ದಾರೆ.

Film chamber president Narasimhalu Discusses Plans to Close Kannada Film Industry

"ಒಬ್ಬರು ಆರ್ಟಿಸ್ಟ್ ಹತ್ತಿರ ಮಾತಾಡಿದೆ. ಹೇಗೆ ಸಾರ್ ಐದಾರು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ನಮ್ಮ ಚಿತ್ರರಂಗ ಹೇಗೆ ಉಳಿಯುತ್ತೆ? ನಿಮ್ಮನ್ನೇ ನಂಬಿಕೊಂಡಿದ್ದೇವೆ. ನಿಮ್ಮಂತಹ ಹೀರೊಗಳು ಸಿನಿಮಾ ಮಾಡಿದಾಗಲೇ ಥಿಯೇಟರ್‌ಗೆ ಜನರ ಬರೋದು. ನಾವು ಒಂದಕ್ಕೆ ಮೂರು ಸಿನಿಮಾ ಥಿಯೇಟರ್‌ಗಳನ್ನು ಇಟ್ಟುಕೊಂಡಿದ್ದೇವೆ. ನಮ್ಮ ಕೈಯಲ್ಲಿ ಎಲೆಕ್ಟ್ರಿಕಲ್ ಬಿಲ್ ಕಟ್ಟೋಕೆ ಆಗುತ್ತಿಲ್ಲ. ನೀವು ವರ್ಷದಲ್ಲಿ ಒಂದೆರಡು ಸಿನಿಮಾವನ್ನಾದರೂ ಮಾಡಿದಾಗಲೇ ಚಿತ್ರರಂಗ ಬೆಳೆಯುತ್ತೆ ಅಂತ ಹೇಳಿದೆ. ಆಗ ಅವರು ಹೇಳಿದ್ದು, ನಾನು ಯಾವುದೋ ಮನಸ್ಸಿಗೆ ಬಂದಿದ್ದೆಲ್ಲ ಮಾಡಿದರೆ, ನೀವು ಈಗೇನು ಹೇಳಿದ್ರಲ್ಲ ನೀವು ಸಿನಿಮಾ ಮಾಡಿದರೆ ಜನರು ಬರುತ್ತಾರೆ ಅಂತ. ಅವರೂ ಬಾರದಂತೆ ಆಗುತ್ತಾರೆ. ಸರಿಯಾದ ಸಬ್ಜೆಕ್ಟ್, ಸರಿಯಾದ ಬಜೆಟ್ ಇದ್ದಾಗ ಕಂಡಿತಾ ಮಾಡುತ್ತೇವೆ ಅಂತ ಕೆಲವರು ಹೇಳಿದ್ದಾರೆ." ಎನ್ನುತ್ತಾರೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು.

ಇನ್ನು ಕೆಲವು ಸ್ಟಾರ್ ನಟರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಇದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. "ರೀ ಸಬ್ಜೆಜ್ಟ್ ಒಂದು ಕಡೆ, ನನ್ನ ರೆಮ್ಯೂನರೇಷನ್ ಇಷ್ಟು. ಇಷ್ಟು ಕೋಟಿ ಬಜೆಟ್ ಇಟ್ಟುಕೊಂಡಿದ್ದರೆ ಬನ್ನಿ ಸಿನಿಮಾ ಮಾಡೋಣ ಅಂತಾರಂತೆ. ಅದೂ ನನ್ನ ಬಳಿಕ ದೂರು ಬಂದಿದೆ. ಇತ್ತೀಚೆಗೆ ಒಬ್ಬರು ಬಂದಿದ್ದರು. ನಾನು ಯಾರಿಗೋ ಒಬ್ಬರಿಗೆ ಕೇಳಿದೆ. ಮೂವಿ ಮಾಡಬೇಕು ಅನ್ನೋದಾರೆ ನನಗೆ ಇಷ್ಟು ಕೋಟಿ ಕೊಡಿ. ಇಷ್ಟು ಕೋಟಿ ಬಜೆಟ್ ಇಟ್ಟುಕೊಳ್ಳಿ. ಹಾಗಿದ್ದರೆ ಮಾಡೋಣ ಅಂತ ಹೀರೋಗಳು ಹೇಳುತ್ತಾರೆ." ಎನ್ನುತ್ತಾರೆ.

ಕಳೆದ ಒಂದು ವಾರದಿಂದ ಯಾವುದೇ ಸಿನಿಮಾ ಥಿಯೇಟರ್‌ನಲ್ಲಿ ನಿಲ್ಲುತ್ತಿಲ್ಲ. ವಾರಕ್ಕೆ ಐದು ಆರು ಫಿಕ್ಚರ್ ರಿಲೀಸ್ ಆಗುತ್ತಿದೆ. ಆದರೆ, ಅದ್ಯಾವುದೇ ಸಿನಿಮಾನೂ ಗೆದ್ದಿಲ್ಲ. ನಿರ್ಮಾಪಕರು ಯಾವ ರೀತಿ ನಿಭಾಯಿಸುತ್ತಿದ್ದಾರೆ ಅನ್ನೋದೇ ಅರ್ಥ ಆಗುತ್ತಿಲ್ಲ. ಒಂದ್ಕಡೆ ಜನರು ಸಿನಿಮಾ ನೋಡದೆ ತಿರಸ್ಕಾರ ಮಾಡಿದ್ದಾರೆ. ಮಾರ್ನಿಂಗ್ ಶೋ ಅನ್ನೇ ಚಿತ್ರಮಂದಿರ ತುಂಬಿದೆ ಅಂತ ಹಾಕುತ್ತಿದ್ವಿ. ಇವತ್ತು ಪ್ರೇಕ್ಷಕರ ಕೊರತೆಯಿಂದ ಶೋ ಸ್ಥಗಿತಗೊಳಿಸಲಾಗಿದೆ ಅಂತ ಹಾಕುತ್ತಿದ್ದೇವೆ ಎಂದು ಬೇಸರ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಬೇಸರ ಹೊರ ಹಾಕಿದ್ದಾರೆ.

"ನಾನು ಸೌತ್ ಇಂಡಿಯನ್ ಫಿಲ್ಮ್ ಚೇಂಬರ್‌ನಲ್ಲಿ ಉಪಾಧ್ಯಕ್ಷ ಆಗಿದ್ದೇನೆ. ಹೀಗಾಗಿ ಇತ್ತೀಚೆಗೆ ನಡೆದ ಝೂಮ್ ಮೀಟಿಂಗ್ ಅಟೆಂಡ್ ಆಗಿದ್ದೆ. ನಮ್ಮ ಪಕ್ಕದ ರಾಜ್ಯ ಕೇರಳದವರು ಒಂದು ಡೇಟ್ ಫಿಕ್ಸ್ ಮಾಡಿ ಅವತ್ತು ಚಿತ್ರರಂಗವನ್ನು ಶಟ್‌ಡೌನ್ ಮಾಡಬೇಕು. ಶೂಟಿಂಗ್, ಥಿಯೇಟರ್ ಎಲ್ಲಾ ಬಂದ್ ಮಾಡಬೇಕು ಅಂತ ಅಳಲು ತೋಡಿಕೊಂಡಿದ್ದಾರೆ. ನಮ್ಮನ್ನು ಸಪೋರ್ಟ್ ಮಾಡಿ ಅಂತಾನೂ ಕೇಳುತ್ತಿದ್ದಾರೆ." ಎಂದಿದ್ದಾರೆ. ಹಾಗೇ ಕನ್ನಡ ಚಿತ್ರರಂಗದಲ್ಲಿ ಇದೇ ತಿಂಗಳು 15ರಂದು ನಿರ್ಮಾಪಕರೆಲ್ಲರನ್ನೂ ಕರೆದು ಸಭೆ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

ಹಾಗೇ ಬುಕ್ ಮೈ ಶೋ ವೇದಿಕೆ ಕನ್ನಡ ಸಿನಿಮಾಗಳ ಬಗ್ಗೆ ನೆಗಟಿವ್ ರೇಟಿಂಗ್ ಕೊಡುತ್ತಿದೆ. ಅದನ್ನೂ ಗಂಭೀರವಾಗಿ ತೆಗೆದುಕೊಂಡಿದ್ದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Film chamber president Narasimhalu reveals discussions about potential closure of the Kannada film industry and its implications:
Read more about: film chamber sandalwood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X