For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಚೇಂಬರ್‌ನಲ್ಲಿ ಕೈಯಲ್ಲಿ ಅನಿರುದ್ಧ್ ಕಿರಿತೆರೆ ಭವಿಷ್ಯ: ಒಂದು ಮಾಡೋಕೆ ಹರಸಾಹಸ

  |

  ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈ ಬಿಡಲಾಗಿತ್ತು. ಧಾರಾವಾಹಿಯ ನಿರ್ಮಾಪಕ ಹಾಗೂ ನಿರ್ಮಾಪಕ ಸಂಘದ ಸದಸ್ಯರು ಜಂಟಿಯಾಗಿ ಪತ್ರಿಕಾಗೋಷ್ಠಿ ಮಾಡಿ ಅನಿರುದ್ಧ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು.

  ಅದೇ ವೇಳೆ ಎಲ್ಲಾ ನಿರ್ಮಾಪಕರೂ ಒಕ್ಕೊರಲಿನಿಂದ ಇನ್ನು ಎರಡು ವರ್ಷಗಳ ಕಾಲ ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿಗೆ ಹಾಕಿಕೊಳ್ಳಬಾರದು ಎಂದು ನಿರ್ಧರಿಸಿದ್ದರು. ಆದರೆ, ಕೆಲವು ದಿನಗಳ ಹಿಂದೆ ಎಸ್‌ ನಾರಾಯಣ್ ಹೊಸ ಧಾರಾವಾಹಿ 'ಸೂರ್ಯವಂಶ'ದಲ್ಲಿ ಅನಿರುದ್ಧ್ ನಟಿಸುತ್ತಿರೋ ವಿಷಯ ಹೊಬಿದ್ದಿತ್ತು. ಈ ಸಂಬಂಧ ಕಿರುತೆರೆ ನಿರ್ಮಾಪಕರು ಎಸ್‌ ನಾರಾಯಣ್ ಅವರನ್ನು ಭೇಟಿ ಮಾಡಿ ಅವಕಾಶ ನೀಡದಂತೆ ಮನವಿ ಮಾಡಿಕೊಂಡಿದ್ದರು.

  ಅನಿರುದ್ಧ್‌ಗೆ 'ಸೂರ್ಯವಂಶ' ಕೂಡ ಕೈ ತಪ್ಪುತ್ತಾ? ಎಸ್‌. ನಾರಾಯಣ್ ಕೊಟ್ಟ ಸುಳಿವೇನು?ಅನಿರುದ್ಧ್‌ಗೆ 'ಸೂರ್ಯವಂಶ' ಕೂಡ ಕೈ ತಪ್ಪುತ್ತಾ? ಎಸ್‌. ನಾರಾಯಣ್ ಕೊಟ್ಟ ಸುಳಿವೇನು?

  ಈ ಬೆಳವಣಿಗೆ ಬಳಿಕ ಅನಿರುದ್ಧ್ ಹಾಗೂ ಕಿರುತೆರೆ ನಿರ್ಮಾಪಕರ ಜಟಾಪಟಿ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಬಳಿಕ ಫಿಲ್ಮ್ ಚೇಂಬರ್ ಸಭೆ ಮಾಡಿ ಈ ಸಮಸ್ಯೆ ಪ್ರಿಹಾರ ಸೂಚಿಸುವುದಾಗಿ ಹೇಳಿತ್ತು. ಅದರಂತೆ ಮೀಟಿಂಗ್‌ಗೆ ಅನಿರುದ್ಧ್ ಅವರನ್ನು ಕರೆಸಿಕೊಂಡು ಮಾತಾಡಿಸಲಾಗಿದೆ. ಈ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲವಾದರೂ, ನಾಳೆ (ಡಿಸೆಂಬರ್ 10) ಕಿರುತೆರೆ ನಿರ್ಮಾಪಕರೊಂದಿಗೆ ಚರ್ಚಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದೆ. ಸದ್ಯಕ್ಕೆ ಇಂದು (ಡಿಸೆಂಬರ್ 9) ನಡೆದ ಸಭೆಯ ಹೈಲೈಟ್ ಇಲ್ಲಿದೆ.

  'ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ'

  'ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ'

  ಅನಿರುದ್ಧ್ ಜೊತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸೇರಿದಂತೆ ಪದಾಧಿಕಾರಿಗಳು ಮಾತಿಕತೆ ನಡೆಸಿದ್ದರು. ಅನಿರುದ್ಧ್‌ ಅವರಿಂದ ನಡೆದ ಘಟನೆಗಳ ವಿವರವನ್ನು ಪಡೆದುಕೊಂಡು ಪತ್ರಿಕಾ ಗೋಷ್ಠಿಯನ್ನು ಮಾಡಿದ್ದಾರೆ. " ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ನಟ ಅ‌ನಿರುದ್ಧ್, ಭಾಗಿಯಾಗಿದ್ದರು. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನಿರುಧ್ ಬ್ಯಾನ್ ಮಾಡೋ ವಿಚಾರವಾಗಿ ನಟ ಅನಿರುದ್ಧ್ ಜೊತೆ ಮಾತನಾಡಿದ್ದೇವೆ. ನಿರ್ಮಾಪಕ ಸಂಘದ ಪದಾಧಿಕಾರಿಗಳ ಜೊತೆ ಕಾನ್ಫರೆನ್ಸ್‌ನಲ್ಲಿ ಮಾತುಕತೆ ಮಾಡಿದ್ದೇವೆ. ನಾಳೆ ಬೆಳಗ್ಗೆ ಫಿಲ್ಮ್ ಚೇಂಬರ್‌ಗೆ ಬರ್ತೇವೆ ಎಂದಿದ್ದಾರೆ. ಅವರ ಜೊತೆಗೂ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಬ್ಯಾನ್ ಮಾಡೋದಕ್ಕೆ ಯಾರಿಗೂ ಅಧಿಕಾರ ಇಲ್ಲ" ಎಂದು ಫಿಲ್ಮ್ ಚೇಂಬರ ಅಧ್ಯಕ್ಷ ಭಾ ಮಾ ಹರೀಶ್ ಹೇಳಿದ್ದಾರೆ.

  'ಸಣ್ಣ‌ಪುಟ್ಟ ಸಮಸ್ಯೆಗಳು ಬರೋದು ಸಹಜ'

  'ಸಣ್ಣ‌ಪುಟ್ಟ ಸಮಸ್ಯೆಗಳು ಬರೋದು ಸಹಜ'

  ಫಿಲ್ಮ್ ಚೇಂಬರ್ ಕಡೆಯಿಂದ ಇನ್ನೂ ಈ ಪ್ರಕರಣ ಇತ್ಯರ್ಥ ಆಗಿಲ್ಲ. ಕಿರುತೆರೆ ನಿರ್ಮಾಪಕರ ಜೊತೆ ಮಾತುಕತೆ ನಡೆಸಿ ಸಂಧಾನ ಮಾಡಿಸಲು ಫಿಲ್ಮ್ ಚೇಂಬರ್ ಮುಂದಾಗಿದೆ. "ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಕಿರುತೆರೆ ಸಿನಿಮಾ ಬಂದ ನಂತರ ಬಂದಿದ್ದು. ಇಲ್ಲಿ ಸಣ್ಣ‌ಪುಟ್ಟ ಸಮಸ್ಯೆಗಳು ಬರೋದು ಸಹಜ. ಕಿರುತೆರೆ ನಿರ್ಮಾಪಕರು ಏಕಪಕ್ಷೀಯವಾಗಿ ಅನಿರುದ್ಧ್‌ರನ್ನ ಬ್ಯಾನ್ ಮಾಡೋಕೆ ‌ನಿರ್ಧಾರ ಮಾಡಿದ್ದು ಸರಿ ಅಲ್ಲ. ಅಲ್ಲದೆ ಅನಿರುದ್ಧ್‌ ಅವರು ಕಿರಿತೆರೆ ನಿರ್ಮಾಪಕರು ಏನೂ ಕೇಳಲಿಲ್ಲ ಅಂತ ಹೇಳಿದ್ದಾರೆ. ಕಿರುತೆರೆ ಕೂಡ ಒಂದು ಸಂಸ್ಥೆ ಆಗಿದ್ದರಿಂದ ಬ್ಯಾನ್ ನಿರ್ಧಾರ ತೆಗೆದುಕೊಳ್ಳಬಾರದು" ಎಂದು ಸುಂದರ್‌ ರಾಜ್ ಸಲಹೆ ನೀಡಿದ್ದಾರೆ.

  ನಟ ಅನಿರುದ್ಧ್ ಹೇಳಿದ್ದೇನು?

  ನಟ ಅನಿರುದ್ಧ್ ಹೇಳಿದ್ದೇನು?

  'ಜೊತೆಜೊತೆಯಲಿ' ವಿವಾದದ ಬಳಿಕ ಅನಿರುದ್ಧ್‌ ಫಿಲ್ಮ್ ಚೇಂಬರ್‌ನಲ್ಲಿ ಮತ್ತೆ ಅದೇ ಘಟನೆಯ ಬಗ್ಗೆ ಮಾತಾಡಿದ್ದಾರೆ. "ನಾನು ಸಾಕಷ್ಟು ಲೇಖನ ಬರಿತೀನಿ ಅದು ನಿಮಗೆಲ್ಲಾ ಗೊತ್ತಿದೆ. ಹಲವು ಲೇಖನದಲ್ಲಿ ವಸುದೈವ ಕುಟುಂಬ ಅನ್ನೋ ಪದ ಬಳಸಿದ್ದೇನೆ. ಹಾಗಂದರೆ ನನ್ನ ಕುಟುಂಬ ಅಂತ ಅರ್ಥ. 'ಜೊತೆ ಜೊತೆಯಲಿ' ಧಾರಾವಾಹಿ ಕೂಡ ನನ್ನ ಕುಟುಂಬವಿದ್ದಂತೆ. ಒಂದು ಕುಟುಂಬ ಅಂದಾಗ ಸಮಸ್ಯೆ ಬರೋದು ಸಹಜ. ಅದನ್ನು ಕುಟುಂಬದ ಸದಸ್ಯರು ಕೂತು‌ ಬಗೆಹರಿಸಿಕೊಳ್ಳೊದು ಒಳ್ಳೆಯದು. ಆದರೆ ಅವರು ನನ್ನನ್ನು ಕರೆದಿಲ್ಲ. ನಾನೇ ಹೋಗಿ ಮಾತಾಡೋಕೆ ಪ್ರಯತ್ನ ಪಟ್ಟೆ ಫೋನ್ ಕಾಲ್ ಮಾಡಿದೆ. ಆದರೆ ಅದಕ್ಕೂ ಅವರು ರೆಸ್ಪಾನ್ಸ್ ಮಾಡಿಲ್ಲ.

  'ಜೊತೆ ಜೊತೆಯಲಿ' ನಿರ್ದೇಶಕ ಆರೂರು ಜಗದೀಶ್ ಗೆ ಅವರಿಗೆ ಕರೆ ಮಾಡಿದ್ದೇನೆ. ಆದರೆ ಅವರು ಯಾವುದೇ ರಿಪ್ಲೆ ಮಾಡಿಲ್ಲ." ಎಂದು ಅನಿರುದ್ಧ್ ದೂರಿದ್ದಾರೆ.

  ಇದೂವರೆಗೂ ಉತ್ತರ ಸಿಕ್ಕಿಲ್ಲ

  ಇದೂವರೆಗೂ ಉತ್ತರ ಸಿಕ್ಕಿಲ್ಲ

  ಅನಿರುದ್ಧ್ ಇಷ್ಟ ಸುಮ್ಮನಾಗಿಲ್ಲ. 'ಜೊತೆ ಜೊತೆಯಲಿ' ನಿರ್ದೇಶಕ ಆರೂರು ಜಗದೀಶ್ ವಾಯ್ಸ್ ಮೆಸೇಜ್ ಕಳಿಸಿದ್ದರು. ಆ ಮೆಸೇಜ್‌ನಲ್ಲಿ ಏನಿದೆ ಎಂದು ಅನಿರುದ್ಧ್ ವಿವರಿಸಿದ್ದಾರೆ. " ಕೊನೆಗೆ ಮೆಸೇಜ್ ಮಾಡಿ ನನಗೆ ಒತ್ತಡ ಇದೆ ಸರ್ ಅಂತ ವಾಯ್ಸ್ ಮೆಸೇಜ್ ಕಳಿಸಿದ್ರು. ಯಾರ ಒತ್ತಡ ಅಂತ ಕೇಳಿದ್ರೆ ಹೇಳಿಲ್ಲ. ಅದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಮೂರು ವರ್ಷ ಎರಡು‌ ತಿಂಗಳು ಅವರ ಜೊತೆ ಕೆಲಸ ಮಾಡಿದ್ದೇನೆ." ಎಂದು ಅನಿರುದ್ಧ್ 'ಜೊತೆಜೊತೆಯಲಿ' ನಿರ್ಮಾಪಕರ ಮೇಲೆ ಬೇಸರ ವ್ಯಕ್ತಪಡಿಸಿದ್ದರು.

  English summary
  Film Chamber Trying To Compromise Aniruddha And TV Producer From Ban Tomorrow, Know More.
  Friday, December 9, 2022, 22:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X